ಆರೋಪಿ ಸಹಿತ ಅಕ್ರಮ ಕಟ್ಟಿಗೆ ವಶ

0
45


ದಾಂಡೇಲಿ : ಹಳಿಯಾಳ ತಾಲೂಕಿನ ಸಾಂಬ್ರಾಣಿ ಸಮೀಪದ ಅಡಿಕೆಹೊಸೂರು ಗ್ರಾಮದಲ್ಲಿ ಮನೆ ವಠಾರದಲ್ಲಿ ಅಕ್ರಮ ಕಟ್ಟಿಗೆ ದಾಸ್ತಾನು ಮಾಡಿರುವುದನ್ನು ದಾಂಡೇಲಿಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ದಾಳಿ ನಡೆಸಿ ಮಾಲು ಸಹಿತ ಆರೋಪಿಯನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಅಡಿಕೆಹೊಸೂರು ಗ್ರಾಮದ ನಿಸಾರ ಅಹಮ್ಮದ ಮದರಸ ಅಜಗಾಂವಕರ (ವ: 30) ಈತನು ತನ್ನ ಮನೆಯ ವಠಾರದಲ್ಲಿ ರೂ: 70 ಸಾವಿರ ಮೌಲ್ಯದ ಅಕ್ರಮವಾಗಿ ಸಾಗುವಾನಿ ಕಟ್ಟಿಗೆಗಳನ್ನು ದಾಸ್ತಾನಿಟ್ಟಿದ್ದು, ಈ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ದಾಂಡೇಲಿಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ದಾಳಿ ನಡೆಸಿ ಆರೋಪಿ ನಿಸಾರ ಅಹಮ್ಮದ ಮದರಸ ಅಜಗಾಂವಕರ ಸಹಿತ ಅಕ್ರಮ ಕಟ್ಟಿಗೆ ವಶಪಡಿಸಿ ಮುಂದಿನ ಕ್ರಮಕ್ಕಾಗಿ ಸಾಂಬ್ರಾಣಿ ವಲಯಾರಣ್ಯಧಿಕಾರಿಯವರಿಗೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ದಾಂಡೇಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಅಧಿಕಾರಿಗಳಾದ ರಾಮ.ಎ.ನಾಯ್ಕ, ನಾಗರಾಜ ನಾಯ್ಕ, ಚೂಡಾಮಣಿ ನಾಯ್ಕ, ಸುನೀಲ ಹೂಲಿ ಮತ್ತು ಚಾಲಕ ಮೆಹಬೂಬ ಮುಲ್ಲಾ ಅವರುಗಳು ಭಾಗವಹಿಸಿದ್ದರು.
ಅರಣ್ಯ ಕಳ್ಳರ ಜನ್ಮಜಾಲಡುತ್ತಿರುವ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ :
ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳಕ್ಕೆ ಹೊಸ ಅಧಿಕಾರಿಗಳ ಆಗಮನವಾಗಿದ್ದು, ಹಳಿಯಾಳ, ಜೊಯಿಡಾ ಮತ್ತು ಯಲ್ಲಾಪುರ ತಾಲೂಕುಗಳಿಗೆ ವಿಶೇಷ ಬೇಟಿ ನೀಡಿ ಅರಣ್ಯಗಳ್ಳರಿಗೆ ಬಿಸಿ ಮುಟ್ಟಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅರಣ್ಯಗಳ್ಳರ ಸುಳಿವು ದೊರೆತ ತಕ್ಷಣ ಕಾರ್ಯಾಚರಣೆಕ್ಕಿಳಿಯುವ ಈ ತಂಡ ಯಾವುದೇ ಒತ್ತಡಕ್ಕೆ ಬಲಿಯಾಗದೇ ನಿಜವಾದ ಅರಣ್ಯಗಳ್ಳರಿಗೆ ತಕ್ಕಮಟ್ಟಿನ ಶಾಸ್ತಿ ಮಾಡುತ್ತಿರುವುದು ಅರಣ್ಯಗಳ್ಳರಿಗೆ ಎಚ್ಚರಿಕೆಯ ಘಂಟೆಯಾಗಿದ್ದು, ಅರಣ್ಯಗಳ್ಳರ ಜನ್ಮಜಾಲಾಡುತ್ತಿರುವ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರ ಕಾರ್ಯ ಇದೇ ರೀತಿ ಮುಂದುವರಿಯಲಿ ಎಂಬ ಆಶಯ ಪರಿಸರ ಪ್ರ್ರಿಯರದ್ದಾಗಿದೆ.

loading...

LEAVE A REPLY

Please enter your comment!
Please enter your name here