ಲೈಂಗಿಕ ಚಟುವಟಿಕೆ ಸುಳ್ಳು ಆರೋಪ : ಹಾಲುಮತ ಸಮಾಜದ ಬೆಂಬಲ

0
88


ಕುಷ್ಟಗಿ : ಇತ್ತೀಚೆಗೆ ಬಿಜೆಪಿ ತಾಲೂಕಾ ಅಧ್ಯಕ್ಷ ಹಾಗೂ ಮಹಿಳಾ ಅಧ್ಯಕ್ಷೆ ಇಬ್ಬರೂ ಲೈಂಗಿಕ ಚಟುವಟಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಸಂಬಂಧವೇ ಇಲ್ಲದ ವೀಡೀಯೋ ತುಣುಕು ತೋರಿಸಿ ವ್ಯಕ್ತಿಯ ಮಾನ ನಷ್ಟ ಮಾಡಿದ್ದು, ಚುನಾವಣೆ ಸಮೀಸುತ್ತಿದ್ದು ಇದು ವಿರೋಧಿಗಳ ಕೈವಾಡ. ಈ ಆರೋಪ ಶುದ್ಧ ಸುಳ್ಳು ಎಂದು ಹಾಲುಮತ ಸಮಾಜದ ಮುಖಂಡರು ಸಮರ್ಥನೆ ಮಾಡಿಕೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಘಟನೆ ಕುರಿತು ಸಮಾಜದ ಮುಖಂಡ ಶಂಕರ ಕರಪಡಿ ಮಾತನಾಡುತ್ತಾ ಚುನಾವಣೆಗಳು ಸಮೀಸುತ್ತಿದ್ದಂತೆ ಇಂಥಃ ಪ್ರಕರಣಗಳು ಸರ್ವೇ ಸಾಮಾನ್ಯವಾಗಿದ್ದು, ನಕಲಿ ವಿಡಿಯೋ ಎಂದು ಅದೇ ಚಾನಲ್‍ನಲ್ಲಿ ತೋರಿಸಲಾಗಿದೆ. ನಮ್ಮ ಸಮಾಜದಲ್ಲಿ ಇಂಥಹ ನೀಚ ಕೆಲಸ ಮಾಡುವವರು ಯಾರೂ ಇಲ್ಲ. ಹಾಗೊಂದು ವೇಳೆ ಕೆಟ್ಟ ಕೆಲಸ ಮಾಡಿದರೆ ನಾವು ಬೆಂಬಲಕ್ಕೆ ನಿಲ್ಲುವುದಿಲ್ಲ. ಈ ಆರೋಪವು ಒಬ್ಬ ಹೆಣ್ಣು ಮಗಳ ಭವಿಷ್ಯಕ್ಕೆ ಕುತ್ತು ತರುವಂತಹದ್ದಾಗಿದೆ. ಒಂದು ವೇಳೆ ಆರೋಪ ಹೊತ್ತ ಹೆಣ್ಣು ತಾನು ಆತ್ಮಹತ್ಯೆಗೆ ಶರಣಾಗಿದ್ದರೆ ಯಾರು ಹೊಣೆ? ಯಾವುದೇ ಆರೋಪ ಮಾಡುವಾಗ ಘಟನೆ ಹಾಗೂ ವ್ಯಕ್ತಿಗಳ ಹಿನ್ನೆಲೆ ಪರಿಶೀಲಿಸಿ ಚೆನ್ನಾಗಿ ಅವಲೋಕನ ಮಾಡಿದಾಗ ಗೊತ್ತಾಗುತ್ತದೆ. ಆದರೆ ನೇರವಾಗಿ ಇಂಥಹ ಪ್ರಕರಣಗಳನ್ನು ಎತ್ತಿ ಹಿಡಿಯಬಾರದು ಎಂದರು. ಈ ಘಟನೆಗೂ ಆರೋಪ ಹೊತ್ತ ಮಹಿಳೆ ಹಾಗೂ ಪುರುಷನಿಗೂ ಯಾವುದೇ ಸಂಬಂಧ ಇಲ್ಲ. ಇದು ಶೂದ್ಧ ಸುಳ್ಳು ಆರೋಪ ಎಂದರು.
ನಂತರ ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ ಮಾತನಾಡಿ ಇದು ರಾಜಕೀಯ ಷಡ್ಯಂತ್ರವಾಗಿದ್ದು ವಿರೋಧ ಪಕ್ಷಗಳ ಕೈವಾಡವಾಗಿದೆ. ಇಂಥಃ ಕೆಲಸ ಮಾಡುವ ಬದಲು ನೇರವಾಗಿ ನಮ್ಮ ಜೊತೆ ಹೋರಾಡಬೇಕು. ಅದನ್ನು ಬಿಟ್ಟು ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ಆರೋಪ ಮಾಡುವದು ಸಲ್ಲ ಎಂದು ಹೇಳಿದರು. ಈ ಘಟನೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಮುಖಂಡರಾದ ದೇವಪ್ಪ ಕಟ್ಟಿಹೊಲ, ಕಲ್ಲೇಶ ತಾಳದ, ಚನ್ನಪ್ಪ ನಾಲಗಾರ, ಸಂಗಪ್ಪ ಚೂರಿ, ಶರಣಪ್ಪ ಚೂರಿ, ಸಂಗಪ್ಪ ಪಂಚಮ, ಮುದುಕಪ್ಪ ಆಚಾರಿ, ಜಂಬಣ್ಣ ಬೂದ, ಮಂಜುನಾಥ ನಾಲಗಾರ, ಹುಲಗಪ್ಪ ಚೂರಿ, ಪರಶುರಾಮ ಆಚಾರಿ ಸೇರಿದಂತೆ ಅನೇಕರು ಇದ್ದರು.

loading...

LEAVE A REPLY

Please enter your comment!
Please enter your name here