ಚುನಾವಣೆ ನಿಮಿತ್ಯ ಮದ್ಯ ಮಾರಾಟ ನಿಷೇಧ

0
28

ಬೆಳಗಾವಿ 06: ಜಿಲ್ಲಾ/ತಾಲೂಕಾ ಪಂಚಾಯತ ಸಾರ್ವತ್ರಿಕ ಚುನಾವಣೆ-2016ರ ಚುನಾವಣಾ ವೇಳಾ ಪಟ್ಟಿಯನ್ನು ಹೊರಡಿಸಿದ್ದರನ್ವಯ ಫೆಬ್ರುವರಿ 13 ರಂದು ಮತದಾನ ನಡೆಯಲಿದ್ದು, ಹಾಗೂ ಫೆಬ್ರುವರಿ 23 ರಂದು ಮತಗಳ ಏಣಿಕೆ ಕಾರ್ಯ ನಡೆಯಲಿರುವುದು.
ಕಾರಣ ಸದರಿ ಚುನಾವಣಾ ಪ್ರಕ್ರಿಯಾ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫೆಬ್ರುವರಿ 12 ರಂದು ಬೆಳಿಗ್ಗೆ 7 ಗಂಟೆಯಿಂದ ಫೆಬ್ರುವರಿ 13ರ ಮಧ್ಯರಾತ್ರಿವರೆಗೆ ಮತ್ತು ಫೆಬ್ರವರಿ 22 ರಂದು ರಾತ್ರಿ 10 ಗಂಟೆಯಿಂದ ಫೆಬ್ರುವರಿ 23ರ ಮಧ್ಯರಾತ್ರಿಯವರೆಗೆ ಮದ್ಯದ ಅಂಗಡಿ/ಬಾರಗಳನ್ನು ಬಂದ ಮಾಡಲು ಜಿಲ್ಲಾ ದಂಡಾಧಿಕಾರಿಗಳಾದ ಶ್ರೀ ಎನ್ ಜಯರಾಮ ಅವರು ಆದೇಶ ಹೊರಡಿಸಿದ್ದಾರೆ.
ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32 ರನ್ವಯ ಶಿಕ್ಷೆಗೆ ಒಳಪಡುವರುಯೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here