ಜಿಕಾ ರೋಗದ ಬಗ್ಗೆ ಮುಂಜಾಗ್ರತಾ ಕ್ರಮಗಳು

0
90

ಬೆಳಗಾವಿ 06: ಜಿಕಾ ವೈರಾಣು ಮೊದಲ ಬಾರಿಗೆ ಉಗಾಂಡದಲ್ಲಿ 1947 ರಲ್ಲಿ ಕಂಡು ಬಂದಿದ್ದು, ಜಿಕಾ ವೈರಾಣು ರೋಗವಾಗಿದ್ದು, ಇದು ಎಲ್ ನೈನೊದಿಂದ ಮಾರ್ಪಾಡು ಹೊಂದಿ ಹೊರ ಹೊಮ್ಮುತ್ತಿರುವ ರೋಗವಾಗಿದೆ. ಸೊಂಕಿತ ಈಡೀಸ್ ಇಜಿಪ್ಟೈ ಸೊಳ್ಳೆ ಕಚ್ಚುವದರಿಂದ ಈ ರೋಗ ಹರಡುತ್ತದೆ. ಈ ಸೊಳ್ಳೆಯು ಡೆಂಗಿ ಮತ್ತು ಚಿಕುನ್ ಗುನ್ಯಾ ರೋಗವನ್ನು ಸಹ ಹರಡುತ್ತಿದ್ದು, ಈ ಸೊಳ್ಳೆಯು ನಮ್ಮ ದೇಶ ಮತ್ತು ರಾಜ್ಯದಲ್ಲಿ ವ್ಯಾಪಕವಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯು 22 ಲ್ಯಾಟಿನ್ ಅಮೇರಿಕಾ ದೇಶಗಳಲ್ಲಿ ಈ ರೋಗ ಪತ್ತೆಯಾಗಿರುವ ಬಗ್ಗೆ ದೃಡಪಡಿಸಿದೆ. ಈ ರೋಗವು ಗರ್ಭೀಣಿ ಸ್ರೀಯರಲ್ಲಿ ಕಂಡು ಬಂದಲ್ಲಿ ಬೆಳೆಯುವ ಭ್ರೂಣಕ್ಕೆ ಗಂಡಾತರವಾಗಿದ್ದು, ಇದರಿಂದ ಮೆದುಳು ಮತ್ತು ನರ ದೌರ್ಬಲ್ಯತೆ (ಒiಛಿಡಿoಛಿeಠಿhಚಿಟಥಿ) ಬರುತ್ತದೆ. ಲ್ಯಾಟಿನ್ ಅಮೇರಿಕಾ ದೇಶದಿಂದ ಬರುವ ಗರ್ಭೀಣಿ ಸ್ತ್ರೀಯರು ಹಾಗೂ ಈ ಪ್ರಾಂತ್ಯಕ್ಕೆ ಹೋಗುವ ಗರ್ಭೀಣಿ ಸ್ತ್ರೀಯರಿಗೆ ಈ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವದು ಅಗತ್ಯವಿದೆ.
ರೋಗ ಲಕ್ಷಣಗಳುಃ ಜ್ವರ, ಮೈಮೇಲೆ ಗಂದೆಗಳು, ಕಣ್ಣು ಉರಿ ಮತ್ತು ಕೆಂಪು ಕಣ್ಣು, ಮೈ ಕೈ ಸಂದು ನೋವು ಇವು ರೋಗ ಲಕ್ಷಣಗಳಾಗಿರುತ್ತವೆ. ಎರಡು ವಾರಕ್ಕಿಂತ ಮೊದಲು ಈ ಪ್ರಾಂತ್ಯದಿಂದ ಮರಳಿ ಬಂದವರಲ್ಲಿ ಈ ಮೇಲಿನ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರ ಮತ್ತು ಏರ್ ಪೋರ್ಟ ಹೆಲ್ಪ ಡೆಸ್ಕಗಳಲ್ಲಿ ಚಿಕಿÉತ್ಸೆ ಪಡೆಯುವದು ಹಾಗೂ ಪ್ರತ್ಯಕವಾಗಿ ಆರೈಕೆ ಮಾಡುವದು (ಕಿuಚಿಡಿಚಿಟಿಣiಟಿe ).
ಈ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತರಿಂದ ರೋಗ ಹರಡುವ ಈಡೀಸ್ ಇಜಿಪ್ಟೈ ಸೊಳ್ಳೆಯ ಲಾರ್ವಾ ಸಮೀಕ್ಷೆ (ಃಡಿeeಜiಟಿg ಅheಛಿಞeಡಿs) ಕೈಗೊಳ್ಳಲಾಗಿದೆ. ಮೇಲ್ವಿಚಾಲಕರು ಈ ಪ್ರಕ್ರಿಯೆಯನ್ನು ತಮ್ಮ ಮನೆ ಭೇಟಿ ಸಮಯದಲ್ಲಿ ಪ್ರತಿ ಶತ 50% ರಷ್ಟು ಮನೆಗಳ ಪರಿಶೀಲನೆ ಮಾಡಿ ವರದಿ ನೀಡಲು ಸೂಚಿಸಲಾಗಿದೆ. ಏರ್ ಪೋರ್ಟನಲ್ಲಿ ಸಹಾಯವಾಣಿ ಕೇಂದ್ರ ತೆರೆಯಲು ಸೂಚಿಸಿದೆ, ಹಾಗೂ ಸುತ್ತ ಮುತ್ತಲು ಲಾರ್ವಾ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕಾ ಮಟ್ಟದಲ್ಲಿ ತ್ವರಿತ ಪ್ರಕ್ರಿಯಾ ತಂಡ ರಚಿಸಿ ತೀವ್ರ ನೀಗಾ ಇಡಲು ಸೂಚಿಸಿದೆ. ಇಲ್ಲಿಯವರೆಗೆ 520216 ಮನೆಗಳಲ್ಲಿ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗಿದೆ.
ಈ ಸೊಳ್ಳೆಗಳು ಮುಂಜಾನೆ ಹಾಗೂ ಸಾಯಂಕಾಲ ಕಚ್ಚುತ್ತಿದ್ದು, ಗರ್ಭೀಣಿ ಸ್ತ್ರೀಯರಿಗೆ ಹಾಗೂ ಭ್ರೂಣಾವಸ್ಥೆಯಲ್ಲಿರುವ ಮಗುವಿಗೆ ಮಿದುಳು ಹಾಗೂ ನರ ಮಂಡಲದ ಮೇಲೆ ಹೆಚ್ಚಿನ ಪರೀಣಾಮ ಬೀರುವದರಿಂದ ಅವರು ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಪರದೆ ಬಳಸುವದು, ಬೇವಿನ ಹೊಗೆ ಹಾಕುವದು, ಸೊಳ್ಳೆ ಬತ್ತಿ ಹಚ್ಚುವದು, ಮೈತುಂಬ ಬಟ್ಟೆಯನ್ನು ಧರಿಸುವದು ಹಾಗೂ ಬಾಗಿಲು ಮತ್ತು ಕಿಟಕಿಗಳಿಗೆ ಸೊಳ್ಳೆ ಜಾಲರಿಗಳನ್ನು ಅಳವಡಿಸಿ ಸೊಳ್ಳೆ ಕಚ್ಚದಂತೆ ಮುಂಜಾಗೃತೆ ವಹಿಸುವದು.
ಮನೆಯಲ್ಲಿಯ ಸಿಮೆಂಟ ತೊಟ್ಟಿ, ಬ್ಯಾರೆಲ್‍ಗಳಲ್ಲಿ ಶೇಖರಿಸಿದ ನೀರನ್ನು ಮೂರು ದಿನಕ್ಕೊಮ್ಮೆ ಬದಲಿಸಿ, ಒಣಗಿಸಿ ತುಂಬಿ ಮುಚ್ಚಳಿಕೆಯಿಂದ ಮುಚ್ಚುವದು. ಏರ್ ಕಂಡಿಶನರ (ಂಅ), ಫ್ರೀಜ್, ಏರ್ ಕೂಲರ ಮತ್ತು ಹೂದಾನಿಗಳಲ್ಲಿನ ನೀರನ್ನು ಮೂರು ದಿನಕ್ಕೊಮ್ಮೆ ಬದಲಿಸಿ ಸ್ವಚ್ಛಗೊಳಿಸುವದು ಹಾಗೂ ಮನೆಯ ಸುತ್ತ ಮುತ್ತಲು ಸ್ವಚ್ಛ ವಾತಾವರಣ ಇಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ (ಜಿಲ್ಲಾ ಮಲೇರಿಯಾ) ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here