ಇಂದು ಚಿತ್ರಕಲೆ ಸ್ಪರ್ಧೆ ಮತ್ತು ಕಾರ್ಯಾಗರ

0
51

ಬೆಳಗಾವಿ 06:ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬೆಳಗಾವಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ 5-16 ವರ್ಷದ ಮಕ್ಕಳ ಸೃಜನಾತ್ಮಕ ಮತ್ತು ಕ್ರೀಯಾತ್ಮಕ ಅಭಿವೃದ್ಧಿಗಾಗಿ ತರಬೇತಿ ನೀಡಲು ವಾರಾಂತ್ಯದಲ್ಲಿ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ರವಿವಾರ ದಿನಾಂಕ 07 ರಂದು ಮುಂಜಾನೆ 10.30 ಘಂಟೆಗೆ ಮಕ್ಕಳಿಗಾಗಿ ಪರಿಸರ ಜಾಗೃತಿ ಕುರಿತು ಚಿತ್ರಕಲೆ ಸ್ಪರ್ಧೆ ಹಾಗೂ ಚಿತ್ರಕಲೆ ಕೌಶಲವನ್ನು ಹೆಚ್ಚಿಸಲು ನುರಿತ ಸಂಪನ್ಮೂಲ ವ್ಯಕ್ತಿಯಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಕಾರಣ ಆಸಕ್ತರು ರವಿವಾರ ದಿನಾಂಕ 07 ರಂದು ಮುಂಜಾನೆ 10.30 ಘಂಟೆಗೆ ಮಹಿಳಾ ಕಲ್ಯಾಣ ಸಂಸ್ಥೆ ಸಿ.ಟಿ.ಎಸ್.ನಂ.1008, ಭಾರತ ಕಾಲನಿ, ಕಣಬರ್ಗಿ ರಸ್ತೆ, ಬೆಳಗಾವಿ ಈ ವಿಳಾಸಕ್ಕೆ ಆಗಮಿಸಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ದೂರವಾಣಿ 9742017000. ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here