ತಂತ್ರಜ್ಷಾನ,ಅಭಿವೃದ್ದಿಯ ದಿನದಲ್ಲಿ ದೊಡ್ಮನೆ ಕ್ಷೇತ್ರ ಹಿಂದುಳಿದಿದೆ

0
75


ಸಿದ್ದಾಪುರ : ತಂತ್ರಜ್ಷಾನ,ಅಭಿವೃದ್ದಿ ಹೀಗೆ ಮುಂದುವರಿದ ಇಂದಿನ ದಿನದಲ್ಲಿ ದೊಡ್ಮನೆ ಜಿ.ಪಂ ಕ್ಷೇತ್ರ ಅಭಿವೃದ್ದಿಯ ದಿಶೆಯಲ್ಲಿ ಬಹಳಷ್ಟು ಹಿಂದುಳಿದಿದೆ. ಯಾವುದೇ ಹಳ್ಳಿಗೆ ಹೋದರು ಕುಡಿಯುವ ನೀರು ,ಅತಿಕ್ರಮಣ ಸಮಸ್ಯೆ, ಹೀಗೆ ಅನೇಕ ಸಮಸ್ಯೆಗಳಿವೆ. ಕ್ಷೇತ್ರದಲ್ಲಿ ವಿಜ್ಞಾನ ಪದವಿ ಪೂರ್ವ ಕಾಲೇಜ್‍ಗಳಿಲ್ಲ.ಶಾಲೆಗಳಿಗೆ ಸರಕಾರ ಕಂಪ್ಯೂಟರ್ ನೀಡಿದೆ,ಆದರೆ ಕೆಲಸ ಮಾಡುತ್ತಿಲ್ಲ.ಇದರಿಂದ ಕ್ಷೇತ್ರದ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿದ್ದಾರೆ.ಕ್ಷೇತ್ರದ ಜನ ಅನೇಕ ರೀತಿಯಲ್ಲಿ ಸರಕಾರವು ನೀಡುವ ಬಹಳಷ್ಟು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಆದ್ದರಿಂದ ದೊಡ್ಮನೆ ಜಿ,ಪಂ ಕ್ಷೇತ್ರವನ್ನು ಅಭಿವೃದ್ದಿಪಡಿಸಿ ಮಾದರಿ ಜಿಲ್ಲಾ ಪಂಚಾಯತ ಕ್ಷೇತ್ರವನ್ನಾಗಿ ಮಾಡಬೇಕೆಂಬ ಸಮಾಜಮುಖಿ ಚಿಂತನೆಯೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕ್ಷೇತ್ರದ ಮತದಾರರು ಬೆಂಬಲಿಸುವ ಸಂಪೂರ್ಣ ವಿಶ್ವಾಸವಿದ್ದು ಗೆಲುವು ನಿಶ್ಚಿತವಾಗಿದೆ ಎಂದು ದೊಡ್ಮನೆ ಜಿ.ಪಂ ಪಕ್ಷೇತರ ಅಭ್ಯರ್ಥಿ ಗುರುಮೂರ್ತಿ ನಾಯ್ಕ ಹೇಳಿದರು.
ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಗೆದ್ದುಬಂದಾಗ ಕ್ಷೇತ್ರದ ಅಭಿವೃದ್ದಿಗೆ ಅನುದಾನವನ್ನು ತರಲು ಲೀಡರ್ ಆಗುತ್ತೇನೆ.ಹೊರತು ಕೇವಲ ಮತದಾರರಿಗೆ ಮಾತ್ರ ಸೀಮಿತವಾದ ಲೀಡರ್ ಆಗಿರುವದಿಲ್ಲ.ಜನತೆಯ ಸೇವಕನಾಗಿ ಮತ ಕೇಳುತ್ತಿದ್ದೇನೆ.ಎಂದರು.
ಕಾಂಗ್ರೇಸ್ ಪಕ್ಷದ ಉಚ್ಚಾಟನೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೇಸ್ ಪಕ್ಷದಿಂದ ನಮ್ಮನ್ನು ಉಚ್ಚಾಟಿಸಲಾಗಿದೆ ಎಂಬುದರ ಅಧಿಕೃತವಾದ ಮಾಹಿತಿ ಬಂದಿಲ್ಲ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ಶಾಸಕಿ ಶಾರದಾ ಮೋಹನಶೆಟ್ಟಿ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಸೋಲಿಸಲು ಪಕ್ಷ ವಿರೋಧಿಯಾಗಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಕೆಲಸ ಮಾಡಿದ್ದಾರೆ.ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ದೀಪಕ ಹೊನ್ನಾವರ ಅವರನ್ನು ಸೋಲಿಸಲು ತಾಲೂಕಿನ ಕೆಲವು ಮುಖಂಡರು ಕೆಲಸ ಮಾಡಿದ್ದಾರೆ. ನಮ್ಮನ್ನು ಪಕ್ಷದಿಂದ ಉಚ್ಚಾಟಿಸುವ ಮೊದಲು ತಮ್ಮನ್ನು ತಾವು ಪಕ್ಷದಿಂದ ಉಚ್ಚಾಟಿಸಿಕೊಳ್ಳಲಿ.ಉಚ್ಚಾಟನೆಯ ಅರ್ಥ ತಿಳಿದುಕೊಳ್ಳಲಿ ಎಂದರು.
ಕಾಂಗ್ರೇಸ್ ಪಕ್ಷದಿಂದ ದೊಡ್ಮನೆ ಜಿ.ಪಂ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೇ.ಆದರೆ ಪಕ್ಷದಿಂದ ಟಿಕೆಟ್ ನೀಡಲಿಲ್ಲ. ನಂತರ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ.ಈ ಮಧ್ಯದಲ್ಲಿ ಪಕ್ಷದವರು ಯಾರೂ ಸಹ ನಮ್ಮನ್ನು ಸಂಪರ್ಕಿಸಿಲ್ಲ.ಕಾಂಗ್ರೇಸ್ ಎನು ಎನ್ನುವದು ಇವರಿಗೆ ಗೊತ್ತಿಲ್ಲ.ಕಾಂಗ್ರೇಸ್ ಕೇವಲ ಪಕ್ಷವಲ್ಲ ಒಂದು ಸಿದ್ದಾಂತ.ಕಾಂಗ್ರೇಸ್ ಪಕ್ಷದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ತಾಲೂಕಾ ಅಧ್ಯಕ್ಷರು ತಮ್ಮ ವ್ಯವಹಾರದ ಬೆಂಬಲಕ್ಕಾಗಿ ಪಕ್ಷದ ಅಧಿಕಾರ ಇಟ್ಟುಕೊಂಡಿದ್ದಾರೆ ವಿನಃ ಜನಸೇವೆಗಾಗಿ ಅಲ್ಲ.ಇವರನ್ನು ವಿದ್ಯಾವಂತರು ಒಪ್ಪುವದಿಲ್ಲ ಎಂದು ಆರೋಪಿಸಿದ ಅವರು ಜನತೆಯ ತೀರ್ಮಾನದಂತೆ ಸ್ವತಂತ್ರನಾಗಿ ಇರುತ್ತೇನೆ ಪಕ್ಷ ಅನಿವಾರ್ಯವಲ್ಲ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆಕಾಶ್ ಎಸ್ ಕೆ,ವೆಂಕಟೇಶ್ ನಾಯ್ಕ ಹೇರೂರ,ಹನುಮಂತ ಚೌಡ ನಾಯ್ಕ ಹಸ್ವಂತೆ ಇದ್ದರು.

loading...

LEAVE A REPLY

Please enter your comment!
Please enter your name here