ಅವಜ್ಞೆಗೆ ಗುರಿಯಾದ ಐತಿಹಾಸಿಕ ತಾಣಗಳನ್ನು ಸಂರಕ್ಷಿಸಿ

0
66


ಸಿದ್ದಾಪುರ : ಕಾಲೇಜು ಜೀವನದಲ್ಲಿರುವಾಗಲೇ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಮಾರ್ಗದರ್ಶನ ಮಾಡುತ್ತದೆ. ನಾಯಕತ್ವಗುಣದೊಂದಿಗೆ ಮಾನವೀಯತೆಯನ್ನೂ ಬಿತ್ತುವ ಪ್ರಕ್ರಿಯೆ ಯೋಜನೆಯಿಂದ ಅರ್ಥಪೂರ್ಣವಾಗಿ ನಡೆಯಬೇಕು ಎಂದು ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ ಹೇಳಿದ್ದಾರೆ.
ಅವರು ತಾಲೂಕಿನ ಕೋಲಸಿರ್ಸಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಂಘಟಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ “ಹಸಿರು ಹೊನ್ನು” ಇಕೋ ಕ್ಲಬ್ ಇವುಗಳ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.
ಹಸಿರು ಹೊನ್ನು ಇಕೋ ಕ್ಲಬ್‍ನ ಸದಸ್ಯರು ನಮ್ಮ ತಾಲೂಕಿನಲ್ಲಿಯ ಪರಿಸರದ ಹಿರಿಮೆಯನ್ನು, ಕತ್ತಲೆ ಕಾನಿನಂತಹ ತಾಣಗಳನ್ನು ಪರಿಚಯಿಸಿಕೊಳ್ಳಬೇಕು. ಅವಜ್ಞೆಗೆ ಗುರಿಯಾದ ತಾಲೂಕಿನ ಐತಿಹಾಸಿಕ, ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವಲ್ಲಿ ಎರಡೂ ಸಂಘಟನೆಗಳೂ ಶ್ರಮಿಸುವಂತಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮಂಜಪ್ಪ ಎಂ.ಜಿ. ವಹಿಸಿದ್ದರು.
ಹಸಿರು ಹೊನ್ನು ಇಕೋಕ್ಲಬ್‍ನ ಸಂಚಾಲಕಿ ಪ್ರೋ.ಲಲಿತಾಲಕ್ಷ್ಮೀ ಎನ್.ಭಟ್ ಅವರು ಇಕೋಕ್ಲಬ್ ಉದ್ದೇಶ ತಿಳಿಸಿ ವಾರ್ಷಿಕವಾಗಿ ನಡೆಸಿದ ಕಾರ್ಯಚಟುವಟಿಕೆಗಳ ಪರಿಚಯ ನೀಡಿದರು. ಹಿರಿಯರಾದ ಸಣ್ಣಪ್ಪ ಮಡಿವಾಳ, ಉಪನ್ಯಾಸಕರುಗಳು ಉಪಸ್ಥಿತರಿದ್ದರು. ರೋಜಾಶ್ರೀ ಸಂಗಡಿಗರು ಪ್ರಾರ್ಥನೆ, ಭವ್ಯಾ ಸಂಗಡಿಗರು ಎನ್‍ಎಸ್‍ಎಸ್ ಗೀತೆ, ಮಂಗಲಾ ನಾಯ್ಕ ಭಾವಗೀತೆ ಹಾಡಿದರು. ವಿದ್ಯಾರ್ಥಿ ಪ್ರತಿನಿಧಿ ದಿನೇಶ ನಾಯ್ಕ ಸ್ವಾಗತಿಸಿದರು. ಪುಷ್ಪಾ ನಾಯ್ಕ ನಿರ್ವಹಿಸಿದರು. ಸಹನಾ ಮಡಿವಾಳ ವಂದಿಸಿದರು.

loading...

LEAVE A REPLY

Please enter your comment!
Please enter your name here