ಕಸಾಪ ಚುನಾವಣೆ ಮನುಬಳಿಗಾರ್‍ಗೆ ಬೆಂಬಲ: ಧರಣೀಂದ್ರ ಕುರಕುರಿ

0
34


ಸಿದ್ದಾಪುರ : ಕನ್ನಡ ಸಾಹಿತ್ಯ ಪರಿಷತ್‍ನಿಂದ ಕನ್ನಡ ಸಾಹಿತ್ಯ ಬೆಳೆಸಲು,ಭಾಷೆಯ ವಿಕಾಸಕ್ಕೆ ಪರಿಷತ್‍ನಲ್ಲಿ ಸಮರ್ಥ ಅಧ್ಯಕ್ಷನಿದ್ದಾಗ ಮಾತ್ರ ಸಾಧ್ಯವಾಗುತ್ತದೆ ಆದ್ದರಿಂದ ಮನು ಬಳಿಗಾರ್ ಅವರು ಆಡಳಿತಗಾರನಾಗಿ ಹಾಗೂ ಸಾಹಿತಿಯಾಗಿ ಸರಕಾರಿ ಸೇವಾಅವಧಿಯಿಂದಲೇ ತಮ್ಮ ಉತ್ತಮವಾದ ವ್ಯಕ್ತಿತ್ವವನ್ನು ಸಾಬೀತು ಪಡಿಸಿದ್ದಾರೆ.ಸಮರ್ಥ ಆಡಳಿತಗಾರನಿದ್ದಾಗ ಮಾತ್ರ ಕಸಾಪ ಸರಿಯಾದ ದಿಕ್ಕಿನಲ್ಲಿ ಕೆಲಸಮಾಡಲು ಸಾಧ್ಯ ಆದ್ದರಿಂದ ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ಚುನಾವಣೆಗೆ ಮನು ಬಳಿಗಾರ ಸಮರ್ಥ ಅಭ್ಯರ್ಥಿಯಾಗಿದ್ದು ಬೆಂಬಲಿಸುವದಾಗಿ ಪ್ರೊ ಧರಣೀಂದ್ರ ಕುರಕುರಿ ಹೇಳಿದ್ದಾರೆ.
ಅವÀರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಮನು ಬಳಿಗಾರ ಸರಕಾರದಿಂದ ತಾಲೂಕು ಸಾಹಿತ್ಯ ಸಮ್ಮೇಳನಗಳಿಗೆ 1ಲಕ್ಷ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ 5 ಲಕ್ಷ ಅನುದಾನ ನಿರಂತರವಾಗಿ ಬರುವಂತೆ ಮಾಡಿಸಿದ್ದಾರೆ.ಪರಿಷತ್ ಸಿಬ್ಬಂದಿಗಾಗಿ ಪ್ರತಿ ವರ್ಷ 1ಕೋಟಿ ಮೀಸಲು ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋಟಿ ರೂಪಾಯಿಯಷ್ಟು ಅನುದಾನ ಬರುವಂತೆ ಪ್ರಸ್ಥಾಪಿಸಿದ್ದರು.ನಂತರ ಸರಕಾರ ಚಂಪಾ ಹಾಗೂ ಡಾ.ನಲ್ಲೂರ ಪ್ರಸಾದ ಕಸಾಪ ಅಧ್ಯಕ್ಷರಾದ ಅವಧಿಯಲ್ಲಿ ಇದನ್ನು ಹೆಚ್ಚಿಸಿದೆ.ಕಸಾಪ ಸಬಲವಾಗಲು ಮನುಬಳಿಗಾರ್ ಕಾರಣಿ ಭೂತರಾಗಿದ್ದಾರೆ. ಕಸಾಪ ಅಧ್ಯಕ್ಷನಾದರೆ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಿಗೆ ಸಾಹಿತ್ಯ ಭವನ ಕಟ್ಟಿಸಲು ಪ್ರಯತ್ನಿಸುವದಾಗಿ ಮತ್ತು ಅಧ್ಯಕ್ಷರು ಪಡೆಯುವ ಗೌರವಧನವನ್ನು ತಾವು ನಿರಾಕರಿಸುವದಾಗಿ ಈಗಾಗಲೇ ಹೇಳಿದ್ದಾರೆ.ಆರ್ಥಿಕ ಸಂಪನ್ಮೂಲವಿಲ್ಲದೆ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿಲ್ಲ.ಕಸಾಪವನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಮನು ಬಳಿಗಾರ ಸಮರ್ಥರಿದ್ದಾರೆ.ಕಸಾಪ ಉತ್ತಮವಾಗಿರಲು ಹಾಗೂ ಎಲ್ಲರಲ್ಲಿಯೂ ಹೊಂದಾಣಿಕೆಯನ್ನು ತರಲು ಮನುಬಳಿಗಾರ್ ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂದರು.
ಜಿಲ್ಲಾ ಕಸಾಪ ಚುನಾವಣೆ ಬಗ್ಗೆ ಮಾತನಾಡಿದ ಅವರು ಅಭ್ಯರ್ಥಿಗಳಿಬ್ಬರು ಒಂದು ಮರದ ಎರಡು ಹಣ್ಣುಗಳಿದ್ದಂತೆ ಯಾರೇ ಗೆದ್ದರು ಸ್ವಾಗತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಕೆ.ಬಿ ಪವಾರ,ಜಿ.ಜಿ ಹೆಗಡೆ ಬಾಳಗೋಡ,ಆರ್.ಎಂ ಹೆಗಡೆ ಬಾಳೇಸರ,ಇದ್ದರು.

loading...

LEAVE A REPLY

Please enter your comment!
Please enter your name here