ಯಕ್ಷಗಾನ, ಮತ್ತಿತರ ಕಲೆ ರಕ್ಷಣೆ ಸಮಾಜದ ಕರ್ತವ್ಯ: ಡಾ. ದೊಡ್ಮನೆ

0
55


ಸಿದ್ದಾಪುರ : ಜನತೆಗೆ ಹತ್ತಿರವಾಗಿರುವ ಯಕ್ಷಗಾನ ಹಾಗೂ ಮತ್ತಿತರ ಕಲೆಯ ರಕ್ಷಣೆ ಸಮಾಜದ ಕರ್ತವ್ಯವಾಗಿದ್ದು ಇದನ್ನು ರಕ್ಷಣೆ ಮಾಡದಿದ್ದರೆ ಕ್ಷೀಣಿಸುತ್ತದೆ. ಆದರೆ ಇಂದು ಅನೇಕ ಕುಟುಂಬಗಳು ಕಲೆಯನ್ನು ರಕ್ಷಣೆ ಮಾಡುತ್ತ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ಅವರು ತಾಲೂಕಿನ ಕವಲಕೊಪ್ಪದ ವಿನಾಯಕ ದೇವಾಲಯದಲ್ಲಿ ಭಾನುವಾರ ಬೆಳಸಲಿಗೆ ಯಕ್ಷ ಕಲಾ ಪ್ರತಿಷ್ಠಾನ ಆಯೋಜಿಸಿದ್ದ ಶಿಶಿರ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಯಕ್ಷಗಾನ ವೃತ್ತಿ ಪೂರ್ಣತೆಯ ಮೂಲಕ ಆದಾಯಗಳಿಸುತ್ತಿಲ್ಲ. ಯಕ್ಷಗಾನ ಹವ್ಯಾಸಿ ಕಲೆಯಾಗಿ ಉಳಿದಿದೆ. ದಿ. ಬೆಳಸಲಿಗೆ ಗಣಪತಿ ಹೆಗಡೆ ಯಕ್ಷಗಾನ ಕೃತಿಗಳನ್ನು ರಚಿಸುವ ಮೂಲಕ ಯಕ್ಷಗಾನಕ್ಕೆ ಕೊಡುಗೆ ನೀಡಿದ್ದರೆ ಅವರ ಕುಟುಂಬ ಯಕ್ಷಗಾನಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ರಕ್ಷಣೆ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯದರ್ಶಿ ಸಿ.ಆರ್.ಹೆಗಡೆ ಕವಲಕೊಪ್ಪ ವಹಿಸಿದ್ದರು.
ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ ಹಾಗೂ ನಿವೃತ್ತ ಮುಖ್ಯಾಧ್ಯಾಪಕ ಜಿ.ಜಿ.ಹೆಗಡೆ ಬಾಳಗೋಡ, ಟಿಎಸ್‍ಎಸ್ ನಿದೇರ್ಶಕ ಆರ್.ಆರ್ ಹೆಗಡೆ ಐನಕೈ,ಸುರೇಶ ಹೆಗಡೆ ಬೆಳಸಲಿಗೆ, ಗೀತಾ ಹೆಗಡೆ ಬೆಳಸಲಿಗೆ ಉಪಸ್ಥಿತರಿದ್ದರು.
ಅಷ್ಟಾವಧಾನಿ ಪ್ರಶಾಂತ ಮಧ್ಯಸ್ಥ ಸಾಗರ ಇವರು ಅಷ್ಟಾವಧಾನ ನಡೆಸಿಕೊಟ್ಟರು. ಪ್ರಚ್ಛಕರಾಗಿ ಡಿ.ಜಿ.ಹೆಗಡೆ ಕೆರೆಹೊಂಡ, ಎಂ.ಎ.ಹೆಗಡೆ ದಂಟಕಲ್, ಮಾಬ್ಲೇಶ್ವರ ಭಟ್ಟ ಇಟಗಿ, ಶ್ರೀಪಾದ ಭಟ್ಟ, ಜಿ.ಕೆ.ಭಟ್ಟ ಕಶಿಗೆ, ಗಣಪತಿ ಹೆಗಡೆ ಗುಂಜಗೋಡ, ಸತೀಶ ಹೆಗಡೆ ದಂಟಕಲ್, ಶರತ್ ಜಾನಕೈ, ಸಂತೋಷ ಹೆಗಡೆ ಪಾಲ್ಗೊಂಡಿದ್ದರು.
ಕಾತ್ಯಾಯಿನಿ ಹೆಗಡೆ ಅತ್ತಿಕೊಪ್ಪ ನಿರ್ವಹಿಸಿದರು. ಸಂತೋಷ ಹೆಗಡೆ ಅತ್ತಿಕೊಪ್ಪ ಸ್ವಾಗತಿಸಿದರು.

loading...

LEAVE A REPLY

Please enter your comment!
Please enter your name here