ಗುತ್ತಿಗೆ ಪೌರ ಕಾರ್ಮಿಕರಿಗೆ ವೇತನ, ಸವಲತ್ತು ನೀಡದಿದ್ದಲ್ಲಿ ಮುಷ್ಕರ

0
122

ದಾಂಡೇಲಿ : ನಗರ ಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ಕಳೆದ ಮೂರು ತಿಂಗಳುಗಳಿಂದ ವೇತನ ನೀಡಲಾಗಿಲ್ಲ ಮತ್ತು ಪೂರ್ಣ ಪ್ರಮಾಣದಲ್ಲಿ ಭವಿಷ್ಯನಿಧಿ ತುಂಬದೆ ವಂಚಿಸಲಾಗುತ್ತಿದ್ದು, ಈ ಬಗ್ಗೆ ಕೂಡಲೇ ಗುತ್ತಿಗೆ ಪೌರಕಾರ್ಮಿಕರ ವೇತನ ಹಾಗೂ ಸವಲತ್ತುಗಳನ್ನು ನೀಡದಿದ್ದಲ್ಲಿ ಮುಷ್ಕರ ಹೂಡಲಾಗುವುದೆಂದು ಕರ್ನಾಟಕÀ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಉತ್ತರಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷÁ್ಹಗೂ ನಗರ ಸಬಾ ಸದಸ್ಯ ಡಿ.ಸ್ಯಾಮಸನ್ ಅವರ ನೇತೃತ್ವದಲ್ಲಿ ಪೌರಾಯುಕ್ತರಿಗೆ ನೀಡಿದ ಮನವಿಯಲ್ಲಿ ಎಚ್ಚರಿಸಿದೆ.

ಪೌರಾಯುಕ್ತರಿಗೆ ನೀಡಿದ ಮನವಿಯಲ್ಲಿ ಕರ್ನಾಟಕ ಸರಕಾರವು ಅಧಿಸೂಚನೆ ನಂ ಕೆಎಇ-152ಎಲ್‍ಡಬ್ಲೂಎ 2008 ದಿನಾಂಕ : 21-02-2011 ರಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯನ್ನು ಮುನ್ಸಿಪಲ್ ಗುತ್ತಿಗೆ ನೌಕರರಿಗೆ ಜಾರಿ ಮಾಡಲು ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಮೂಲಕ ತಿಳಿಸಿತ್ತು ಅಂತೆಯೇ ಗುತ್ತಿಗೆ ನಿಗದಿ ಮಾಡುವಾಗ ಗುತ್ತಿಗೆದಾರರ ಪಿ.ಎಪ್ ಮತ್ತು ಇ.ಎಸ್.ಐ ಸಿ ಕೊಡಕೊಡಬೇಕೆಂದು ತಿಳಿಸಿದೆ. ಒಂದು ವೇಳೆ ಗುತ್ತಿಗೆದಾರ ಅಧಿಸೂಚನೆಯ ಪ್ರಕಾರ ಸಂಬಳ ಮತ್ತು ಇ .ಎಸ್. ಐ.ಸಿ. ಭವಿಷ್ಯನಿಧಿ ತುಂಬದೇ ಇದ್ದಲ್ಲಿ ಗುತ್ತಿಗೆ ನಿಯಂತ್ರಣ ಮತ್ತು ನಿಷೇದ ಕಾಯ್ದೆ 1970 ಕಲಂ 21/4 ರ ಪ್ರಕಾರ ಮೂಲ ಮಾಲಿಕರಾದ ನಗರಸಭೆ ಸಂಬಳದ ಬಾಕಿ ಹಾಗೂ ಭವಿಷ್ಯ ನಿಧಿ ಇ.ಎಸ್.ಐ.ಸಿ ಕೊಡಬೇಂದು ಸ್ವಷ್ಟಪಡಿಸಿದ್ದರೂ ನನಗರ ಸಭೆ ತನ್ನ ಜವಬ್ದಾರಿಯಿಂದ ನುಣುಚಿಕೊಂಡಿದೆ. ವೇತನ ಪಾವತಿ ಕಾಯಿದೆ 1936ರ ಪ್ರಕಾರ 100 ಕಾರ್ಮಿಕರಗಿಂತ ಕಡಿಮೆ ಇರುವ ಸಂಸ್ಥೆಯಲ್ಲಿ ಕಾರ್ಮಿಕರಿಗೆ ತಿಂಗಳು ಮುಗಿದು 5ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕೆಂದು ಸ್ವಷ್ಟಪಡಿಸಿರುವುದನ್ನು ಮನವಿಯಲ್ಲಿ ವಿವರಿಸಲಾಗಿದೆ.

ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ಗುತ್ತಿಗೆದಾರರು ಕಳೆದ ಮೂರು ತಿಂಗಳಿಂದ ವೇತನ ನೀಡುತ್ತಿಲ್ಲ ಮತ್ತು ಭವಿಷ್ಯನಿಧಿ ಪೂರ್ಣ ಪ್ರಮಾಣದಲ್ಲಿ ತುಂಬುತ್ತಿಲ್ಲ. ಕಾಟಾಚಾರಕ್ಕೆ ಭಾಗಶಾ ಭರಣ ಮಾಡಿ ನಗರಾಡಳಿತಕ್ಕೆ ತಪ್ಪು ತಿಳುವಳಿಕೆಯನ್ನು ನೀಡುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ನಗರ ಸಭೆÉಯವರು ಮಧ್ಯ ಪ್ರವೇಶಿಸಿ ಗುತ್ತಿಗೆ ಪೌರಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು, ವೇತನ ಹಾಗೂ ಇತರೆ ಸವಲತ್ತುಗಳನ್ನು ಒದಗಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಗುತ್ತಿಗೆದಾರರಾದ ದೇವಾನಂದ ಮತ್ತು ಚಂದ್ರು ಕೊಕಣಿ ಅವರುಗಳು ತಮ್ಮ ಗುತ್ತಿಗೆ ಪೌರಕಾರ್ಮಿಕರಿಗೆ ನೀಡಬೇಕಾದ 23 ತಿಂಗಳ ವೇತನ ಮತ್ತು ಭವಿಷ್ಯ ನಿಧಿಯನ್ನು 7 ದಿನಗಳೊಳಗೆ ಬ್ಯಾಂಕ್ ಖಾತೆಗೆ ಜಮಾ ಮಾಡದಿದ್ದಲ್ಲಿ ಮುಷ್ಕರ ಕೈಗೊಳ್ಳಲಾಗುವುದೆಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

loading...

LEAVE A REPLY

Please enter your comment!
Please enter your name here