ಬರಗಾಲ ನಡುವೆ ಉಳವಿಯತ್ತ ಮುಖ ಮಾಡಿತ ಎತ್ತಿನಬಂಡಿಗಳು

0
60


ಜೋಯಿಡಾ : ಶ್ರೀ ಕ್ಷೇತ್ರ ಉಳವಿಯ ಚನ್ನಬಸವೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವವು ಫೇಬ್ರುವರಿ 14 ರವಿವಾರ ರಥ ಸಪ್ತಮಿಯಿಂದ ಆರಂಬಗೊಂಡಿದ್ದು ಫೇಬ್ರುವರಿ 22 ರಂದು ಮಹಾರಥೋತ್ಸವ ನಡೆಯಲಿದೆ. ಈಗಾಗಲೇ ರಾಜ್ಯದ ಬೇರೆ ಬೇರೆ ಕಡೆಯಿಂದ ಜಾತ್ರಾಗೆ ಯಾತ್ರಾರ್ಥಿಗಳು ಚಕ್ಕಡಿಗಳ ಮೂಲಕ ಆಗಮಿಸುತ್ತಿರುವುದು ಪ್ರಮುಖ ರಸ್ತೆಗಳಲ್ಲಿ ಕಾಣಬಹುದಾಗಿದೆ. ಈ ಸಾಲಿನ ಬರಗಾಲ ಉಳವಿಗೆ ಬರುವ ಭಕ್ತರಿಗೆ ಕಾಡಲಿದೆ.
ಈ ಹಿಂದಿನಿಂದಲೂ ರಾಜ್ಯದ ಬೇರೆ ಬೇರೆ ಭಾಗಗಳಿಂದ ಸಾಂಪ್ರದಾಯದಂತೆ ಎತ್ತಿನ ಗಾಡಿಗಳ ಮೂಲಕ ಉಳವಿ ಜಾತ್ರೆಗೆ ಭರುವ ಭಕ್ತರ ಸಂಖ್ಯೆ ಇನ್ನೂ ಇಳಿಮುಖವಾಗಿಲ್ಲ. ಬೆಳಗಾಂವ, ಚಿಕ್ಕೋಡಿ, ಹಾವೇರಿ, ಧಾರವಾಡ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಎತ್ತಿನ ಗಾಡಿಗಳ ಮೂಲಕ ಬರುವ ಶಿವ ಶರಣರು ಉಳವಿಯೆಡೆಗೆ ಬರುತ್ತಿರುವುದು ತಾಲೂಕಿನ ರಾಮನಗರ, ದಾಂಡೇಲಿ ಮಾರ್ಗವಾಗಿ ಅಲ್ಲಲ್ಲಿ ಕಾಣಬುದಾಗಿದೆ. ಎತ್ತಿನ ಗಾಡಿಗೆ ಬರುವ ಭಕ್ತರಿಗೆ ಇದೊಂದು ಪಾದಯಾತ್ರೆಯ ಅನುಭವವಿದ್ದಂತಾಗಿದೆ. ಎತ್ತಿನ ಗಾಡಿಗಳ ಜೊತೆಯಲ್ಲಿ ನೂರಾರು ಕಿ.ಮಿ. ದೂರದ ವರೆಗೆ ಅನೇಕ ಶರಣರು ತಂಡೋಪ ತಂಡವಾಗಿ ಕಾಲ್ನಡಿಗೆಯಲ್ಲಿ ಉಳವಿಯತ್ತ ಪ್ರಯಾಣ ಮಾಡುವುದು ಕಂಡುಬಂದರೂ ಈ ಎಲ್ಲಾಜಿಲ್ಲೆಗಳಲ್ಲಿ ಬರ ಆವರಿಸಿದ್ದರಿಂದ ಬಂದ ಅನೇಕ ಭಕ್ತರು ಸಾಲಸೊಲ ಮಾಡಿಕೊಂಡು ಉಳವಿಯತ್ತ ಮುಖ ಮಾಡಿದ್ದಾರೆ. ಹೊಟ್ಟೆ ಬಟ್ಟೆಗೆ ಕೊರತೆಯಿದ್ದರೂ ಭಕ್ತಿಗೆ ಮಾತ್ರ ಕೊರತೆಯಿಲ್ಲವೆನ್ನುವಂತಹ ರೀತಿಯಲ್ಲಿ ಶಿವಶರಣರು ಉಳವಿಯತ್ತ ಧಾವಿಸುತ್ತಾ ಬರುವುದು ಕಾಣಸಿಗುತ್ತಿದೆ.
ಈಗಾಗಲೇ ಬೆಳಗಾಂವ ಜಿಲ್ಲೆಯ ಹಿರೆ ಬಾಗೆವಾಡಿ ತಾಲೂಕಿನ ಹತ್ತಾರು ಚಕ್ಕಡಿ ಗಾಡಿಗಳು ಶೃಗರಿಸಿಕೊಂಡು ಉಳವಿಯತ್ತ ಪ್ರಯಾಣಿಸುತ್ತಿವೆ. ಎತ್ತುಗಳ ಕಾಲ್ಗೆಜ್ಜೆಯ ನಾದ, ಶೃಂಗರಿಸಿದ ಎತ್ತುಗಳು ಅದರ ಜೊತೆಯಲ್ಲಿ ಪುಟ್ಟ ಮಕ್ಕಳು, ಹಿರಿಯರು, ಮಹಿಳೆಯರು ತಂಡೋಪ ತಂಡವಾಗಿ ಹರ ಹರ ಮಹಾದೇವ, ಅಡಕೇಶ್ವರ ಮಡಕೇಶ್ವರ ಉಳವಿ ಚನ್ನ ಬಸವೇಶ್ವರರ ಜನಘೋಷದೊಂದಿಗೆ ಉಳವಿಯತ್ತ ಪ್ರಯಾಣಬೆಳೆಸಿದ್ದಾರೆ. ಇದರಿಂದಾಗಿ ತಾಲೂಕಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಭಕ್ತಿಯ ಭಾವ ತುಂಬಿಹರಿಯುವಂತಾಗಿದೆ.
ಭಕ್ತರ ಸ್ವಾಗತಕ್ಕೆ ಸಜ್ಜಾದ ಉಳವಿ:- ರವಿವಾರ ಪೇಬ್ರುವರಿ 14 ರಥ ಸಪ್ತಮಿಯಿಂದ ಫೇಬ್ರುವರಿ 24 ವರೆಗೆ ಉಳವಿಯಲ್ಲಿ 10 ದಿನ ಜಾತ್ರಾ ಮಹೋತ್ಸವ ನಡೆಯಲಿದೆ. ಉಳವಿಯ ಮುಖ್ಯ ರಥಬೀದಿಯಲ್ಲಿ ಮಹಾರಥೋತ್ಸವ ಫೆಬ್ರುವರಿ 22 ರಂದು ರಥಯಳೆಯಲು ಸಂಪೂರ್ಣ ಸಕಲ ಸಿದ್ದತೆಯನ್ನು ಮಾಡಲಾಗಿದೆ. ಪ್ರತಿ ವರ್ಷದಂತೆ ಭಕ್ತರಿಗೆ ಅನುಕೂಲ ವಾಗುವಂತೆ ಗ್ರಾಮ ಪಂಚಾಯತದಿಂದ ವಾಹನಗಳ ನಿಲುಗಡೆ, ಚಕ್ಕಡಿ ಗಾಡಿಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ದೂರದಿಂದ ಬರುವ ಶಿವಶರಣರಿಗೆ ಉಳಿದುಕೊಳ್ಳಲು ಅಲ್ಲಲ್ಲಿ ಚಪ್ಪರಗಳನ್ನು ಹಾಕಿ ಟ್ರಸ್ಟ ಕಮಿಟಿಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ವ್ಯಾಪರಸ್ತರಿಗೆ ಮುಖ್ಯ ಬೀದಿಯಲ್ಲಿ ಮಳೀಗೆಗಳನ್ನು ಹಾಕಲಾಗಿದ್ದು ಸಂಚಾರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ಕ್ರಮಜರುಗಿಸಲಾಗಿದ್ದು ಕಳೆದ ವರ್ಷಗಿಂತಲೂ ಈ ವರ್ಷ ಜಾತ್ರೆ ಯಶಸ್ವಿಯಾಗಿ ಪೂರ್ಣಗೊಳಿಸಲು ಸರ್ವ ಸಿದ್ದತೆ ಪೂರ್ಣಗೊಂಡಿದೆ ಎಂದು ಟ್ರಸ್ಟ ಕಮಿಟಿಯ ಅಧ್ಯಕ್ಷ ಗಂಗಾಧರ ಕಿತ್ತೂರ ತಿಳಿಸಿರುತ್ತಾರೆ.
ಫೇಬ್ರುವರಿ 22 ಮಹಾರಥೋತ್ಸವ: ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರೆಯ ಪ್ರಮುಖ ಘಟ್ಟವಾದ ಮಹಾರಥೋತ್ಸವು ಫೇಬ್ರುವರಿ 22 ರಂದು ಸಜೆ 4 ಗಂಟೆಗೆ ನಡೆಯಲಿದೆ. ಅಂದು ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ವಿ. ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಿದ್ದಾರೆ.
ಹಿರೆಬಾಗಿವಾಡಿ ಬಸಾಪೂರ ಗ್ರಾಮದ ಚಕ್ಕಡಿ ಗಾಡಿಯೊಂದಿಗೆ ಉಳವಿಗೆ ಬಂದ ರೈತ ಸಿದ್ದಪ್ಪಾ ಬಸವೆಣಪ್ಪಾ ವರಳಿ ಅಂಬೋಳಿ ಕಾನೇರಿ ನದಿ ಸೇತುವೆ ಹತ್ತಿರ ಮಾತಿನಾಡಿ ಬರಗಾಲ ಇರುವುದರಿಂದ ಬೆಳೆ ಇಲ್ಲದೇ ಹಣದ ಕೊರತೆ ಇದ್ದರೂ ಸಾಲಮಾಡಿಕೊಂಡು ಜಾತ್ರೆಗೆ ಬಂದಿದ್ದೇವೆ. ಚಕ್ಕಡಿಗಾಡಿಗಳು ಈ ಸಲ ಕಡಿಮೆ ಬಂದಿದೆ. ಸರಕಾರ ರೈತರ ರಕ್ಷಣೆಗೆ ಬರಬೇಕಿದೆ ಎಂದರು.

loading...

LEAVE A REPLY

Please enter your comment!
Please enter your name here