ಛತ್ರಪತಿ ಶಿವಾಜಿ ಜಯಂತಿ ಆಚರಣೆ

0
56


ಸಿದ್ದಾಪುರ : ಸ್ಥಳೀಯ ತಾಲೂಕಾ ಪಂಚಾಯತ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕಾ ಪಂಚಾಯತಹಾಗೂ ಸ್ಥಳೀಯ ಸಂಘಟನೆಗಳ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 389ನೇ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ತಹಸೀಲ್ದಾರ ಬಸಪ್ಪ ಪಿ.ಪೂಜಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಎಸ್.ಭಟ್ಟ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಪಟ್ಟಣದ ರಾಣಿ ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕ ಎನ್.ಆರ್.ನಾಯ್ಕ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಿದರು.
ಸಿ.ಪಿ.ಐ.ಜಯರಾಮ ಗೌಡ, ಬಿ.ಇ.ಒ. ಡಿ.ಆರ್.ನಾಯ್ಕ, ಪ.ಪಂ.ಪ್ರಭಾರಿ ಮುಖ್ಯಾಧಿಕಾರಿ ಡಿ.ಆರ್.ಬೆಳ್ಳಿಮನೆ ಮತ್ತಿತರ ಅಧಿಕಾರಿಗಳಿದ್ದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ, ಗ್ರಾಮಲೆಕ್ಕಾಧಿಕಾರಿ ಶಶಿಕುಮಾರ ನಿರ್ವಹಿಸಿದರು.
ಫೊಟೊ19ಸಿದ್ದಾಪುರ3-ಸಿದ್ದಾಪುರ ತಾ.ಪಂ.ನಲ್ಲಿ ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಉದ್ಘಾಟಿಸಿದ ತಹಸೀಲ್ದಾರ ಬಸಪ್ಪ ಪೂಜಾರ, ಶ್ರೀಧರ ಎಸ್.ಭಟ್ಟ, ಜಯರಾಮ ಗೌಡ, ಡಿ.ಆರ್.ನಾಯ್ಕ ಇದ್ದರು.

loading...

LEAVE A REPLY

Please enter your comment!
Please enter your name here