ನಿಗದಿಯಲ್ಲಿ ಜ್ಞಾನ ಹಾಗೂ ಅನ್ನದಾಸೋಹ

0
59


ಧಾರವಾಡ : ಶ್ರೀಕ್ಷೇತ್ರ ಉಳವಿ ಜಾತ್ರೆಯಲ್ಲಿ ಪಾಲ್ಗೊಂಡು ವಾಪಸ್ ಬರುವ ಭಕ್ತಾದಿಗಳಿಗೆ ಫೆ. 22ರಿಂದ 26ರವರೆಗೆ ಅನ್ನ ಜ್ಞಾನ ಹಾಗೂ ಅನ್ನದಾಸೋಹ ಕಾರ್ಯಕ್ರಮ ತಾಲೂಕಿನ ನಿಗದಿ ಗ್ರಾಮದಲ್ಲಿ ನಡೆಯಲಿದೆ.
ಫೆ. 22ರಂದು ಸಂಜೆ 6ಕ್ಕೆ ಮನಗುಂಡಿ ಬಸವಾನಂದ ಸ್ವಾಮೀಜಿ ಸಮಾರಂಭ ಉದ್ಘಾಟಿಸಲಿದ್ದು ಜಿ.ಎಂ. ಧೂಪದ, ಬಸವ ಕೇಂದ್ರದ ಅಧ್ಯಕ್ಷ ಉಮೇಶ ಕಟಗಿ ಉಪಸ್ಥಿತರಿರುವರು. 23ರಂದು ಸಂಜೆ 7ಕ್ಕೆ ಬಸವಾನಂದ ಸ್ವಾಮಿಗಳಿಂದ ಪ್ರವಚನ ಕಾರ್ಯಕ್ರಮ ನಂತರ ಅಮೃತವರ್ಷಿಣಿ ಕಲಾತಂಡದಿಂದ ನೃತ್ಯ, ರೂಪಕ ಜರುಗಲಿದೆ.24ರಂದು ಸಂಜೆ 7ಕ್ಕೆ ಧಾರವಾಡ ಜಗನ್ಮಾತಾ ಅಕ್ಕಮಹಾದೇವಿ ಮಠದ ಸದ್ಗುರು ಸತ್ಯಾದೇವಿ ಮಾತಾಜಿಯಿಂದ ಪ್ರವಚನ. ಶಿಕ್ಷಕ ಮಂಜುನಾಥ ಮಡಿವಾಳರ ಉಪನ್ಯಾಸ ನೀಡುವರು.
ಅಂದು ಅಕ್ಕಮಹಾದೇವಿ ಮಠದ ಮಕ್ಕಳಿಂದ ನೃತ್ಯ, ಏಕಾಪಾತ್ರಾಭಿನಯ ಹಾಗೂ ವಚನ ಗಾಯನ ಮೂಡಿಬರಲಿದೆ. 25 ರಂದು ಡಾ. ರಾಜಶೇಖರ ಬಸೆಟ್ಟಿ, ವೀರಣ್ಣ ವಡ್ಡೀನ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಅಖಿಲ ಭಾರತ ಲಿಂಗಾಯತ ಒಳಪಂಗಡಗಳ ಏಕತಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಶೆಟ್ಟೆನ್ನವರ, ಶಿವಾನಂದ ಲೋಲೆನವರ ಆಗಮಿಸುವರು. ಧಾರವಾಡ ಸ್ಕೈಬರ್ಡ್ ಶಾಲೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.26ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಅವರಿಗೆ ಸನ್ಮಾನ. ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಂತರ ಸಲಕಿನಕೊಪ್ಪ ಬಸವಾಶ್ರಮದ ಮಕ್ಕಳು ಹಾಗೂ ಗ್ರಾಮದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

loading...

LEAVE A REPLY

Please enter your comment!
Please enter your name here