ಕೇಂದ್ರ ಸರಕಾರ ಪಥನದ ಕ್ಷಣಗಣನೆ ಆರಂಭವಾಗಿದೆ: ಹೆಬ್ಬಾಳಕರ ಆರೋಪ

0
46

ಬೆಳಗಾವಿ:22 ರಾಜ್ಯ ಸರಕಾರದ ಕ್ಷಣಗಣನೆ ಆರಂಭವಾಗಿದೆ ಎಂದು ಹೇಳುವ ಬಿಜೆಪಿ ಮುಖಂಡರು ಭವಿಷ್ಯ ಹೇಳಲು ಹೊರಟ್ಟಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರದ ಪಥನದ ಕ್ಷಣಗಣನೆ ಆರಂಭವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಆರೋಪಿಸಿದರು.
ಅವರು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಕರ್ತರೊಡನೆ ಮಾತನಾಡುತ್ತ, ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನಪರ ಕೆಲಸ ಮಾಡುತ್ತ ಉತ್ತಮ ಸೇವೆ ನೀಡುತ್ತಿದೆ. ಬಿಜೆಪಿ ಮುಖಂಡರು ಆಡಳಿತ ಪಕ್ಷದ ಕ್ಷಣಗಣನೆ ಆರಂಭವಾಗಿದೆ ಎಂದು ಟೀಕೆ ಮಾಡುವ ಬದಲು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ದುರಾಡಳಿತದಿಂದ ಅವರ ಸರಕಾರದ ಕ್ಷಣ ಆರಂಭವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಾತಿಗೆ ತಿರುಗೇಟು ನೀಡಿದರು.
ದೇಶದಲ್ಲಿ ಕಾಂಗ್ರೆಸ್ ಸರಕಾರ 60 ವರ್ಷದಲ್ಲಿ ಮಾಡಿದ ಸಾಧನೆಯನ್ನು ಕೇವಲ 5 ವರ್ಷದಲ್ಲಿ ಮಾಡುತ್ತೇವೆ ಎಂದು ಭ್ರಮೆಯಲ್ಲಿರುವ ಬಿಜೆಪಿ ಮುಖಂಡರಿಗೆ ನಮ್ಮ ಸರಕಾರದ ಸಾಧನೆಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಇದರಿಂದ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೆಬ್ಬಾಳಕರ ಬಿಜೆಪಿ ಮುಂಖಡರ ಮೇಲೆ ಹರಿಹಾಯ್ದರು.
ಕರ್ನಾಟಕ ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿರುವ ಕಾಂಗ್ರೆಸ್ ಸರಕಾರ ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರವಿದ್ದ ಸಂದರ್ಭದಲ್ಲಿ ಜಾತಿ ರಾಜಕಾರಣ ಮಾಡಿ ಜನರಿಗೆ ದಿಕ್ಕು ತಪ್ಪಿಸಿದ್ದರು. ಮೊದಲು ತಮ್ಮ ಪಕ್ಷದ ಬಿಕ್ಕಟ್ಟನು ಬಗೆಹರೆಸಿಕೊಳ್ಳಲಿ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಜಾರಿಗೆ ತಂದ ನರೆಗಾ ಯೋಜನೆಯನ್ನು ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಹೆಸರು ಬದಲಾವಣೆ ಮಾಡಿ ಪುನಃ ಪ್ರಾರಂಭಮಾಡಿದ್ದಾರೆ. ಇದರ ಶ್ರೇಯಸ್ಸು ಕಾಂಗ್ರೆಸ್‍ಗೆ ಸಲ್ಲಬೇಕು ವಿನಾಕಾರಣ ಹೊಸದೊಂದು ಯೋಜನೆ ಮಾಡಿದಾಗ ಬಿಜೆಪಿ ಮುಖಂಡರು ತಾವು ಮಾಡಿದ್ದೇವೆ ಎಂಬ ಜಂಬ ಕೊಚ್ಚಿಕೊಳ್ಳುವುದನ್ನು ಬಿಡಬೇಕೆಂದು ಅವರು ಹೇಳಿದರು.
ಇದೇ ದಿ.27 ರಂದು ಪಸಲ್ ಬಿಮಾ ಯೋಜನೆ ಕುರಿತಾಗಿ ರೈತ ಸಮಾವೇಶ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇದು ಕಾಂಗ್ರೆಸ್‍ನ ಯೋಜನೆಯಾಗಿದೆ. ನಿಜವಾಗಿ ರೈತರ ಬಗ್ಗೆ ಕಳಕಳಿ ಇರುವ ಪ್ರಧಾನಿಯವರು ಉತ್ತರ ಕರ್ನಾಟಕದಲ್ಲಿ ಕಳಸಾ ಬಂಡೂರಿ ಅನುಷ್ಠಾನ ಯೋಜನೆ ಮಾಡಲಿ ಎಂದು ಹೆಬ್ಬಾಳಕರ ಒತ್ತಾಯಿಸಿದರು.

loading...

LEAVE A REPLY

Please enter your comment!
Please enter your name here