ಮಾಯಕ್ಕಾದೇವಿ ದರ್ಶನ ಪಡೆದ ಪಾಟೀಲ

0
77

ಚಿಂಚಲಿ 23: ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ವಿಧಾನ ಪರಿಷತ ಸದಸ್ಯ ವಿವೇಕರಾವ್ ಪಾಟೀಲರ ಪುತ್ರ ಪ್ರಣಯ ಪಾಟೀಲ ಹಾಗೂ ಸೊಸೆ ಗಾರ್ಗಿ ಪಾಟೀಲ ಭರ್ಜರಿಯಾಗಿ ಗೇಲವು ಸಾಧಿಸಿದ್ದರಿಂದ ಪ್ರಣಯ ಪಾಟೀಲ ಹಾಗೂ ತಾಯಿ ಡಾ.ವರ್ಷಾ ಪಾಟೀಲ ಅವರು ಮಂಗಳವಾರ ಚಿಂಚಲಿ ಮಾಯಕ್ಕಾದೇವಿ ದರ್ಶನ ಪಡೆದು ತಮ್ಮ ಹರಿಕೆಯನ್ನು ತಿರಿಸಿದರು.
ಬಳಿಕ ಮಾತನಾಡಿದ ಡಾ. ವರ್ಷಾ ಪಾಟೀಲ ಈ ಗೇಲವು ನಮ್ಮದಲ್ಲ ನಿಮ್ಮದು, ಗ್ರಾಮೀಣ ಭಾಗದಲ್ಲಿ ವಿವಿಧ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳಲು ಎರಡನೇ ಬಾರಿಗೆ ತಮ್ಮ ಮಗ ಪ್ರಣಯ ಪಾಟೀಲ ಹಾಗೂ ಸೊಸೆಯಾದ ಗಾರ್ಗಿ ಪಾಟೀಲನ್ನು ತಾಲೂಕಿನಲ್ಲಿಯೇ ಅತೀ ಹೆಚ್ಚು ಮತಗಳಿಂದ ಆಯ್ಕೆ ಮಾಡಿಕ್ಕೊಟ್ಟಿದ್ದಿರಿ ತಾಲೂಕಿನ ಮತದಾರ ಪ್ರಭುಗಳಿಗೆ ಅನಂತ ಅನಂತ ಧನ್ಯವಾದಗಳು ಎಂದು ತಿಳಿಸಿದರು.

loading...

LEAVE A REPLY

Please enter your comment!
Please enter your name here