ಆರ್.ಟಿ.ಇ. ಮಕ್ಕಳ ಪ್ರವೇಶಕ್ಕಾಗಿ ‘ಹೆಲ್ಪಡೆಸ್ಕ ವ್ಯವಸ್ಥೆ’

0
364

ಧಾರವಾಡ 23: ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12(1)ಸಿ ಪ್ರಕಾರ ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ ಅನುದಾನರಹಿತ ಶಾಲೆಗಳಲ್ಲಿ ಎಲ್.ಕೆ.ಜಿ. ಹಾಗೂ ಒಂದನಏ ತರಗತಿ ಪ್ರವೇಶಾತಿಗೆ ಸಂಬಂಧಿಸಿದಂತೆ ಶೇಕಡಾ 25ರಷ್ಟು ಸೀಟುಗಳ ಹಂಚಿಕೆಗಾಗಿ ಫೆ.23 ರಿಂದ ಆನ್‍ಲೈನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯ ಒಟ್ಟು 302 ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಪಾಲಕರು ನಿಗದಿತ ನಮೂನೆಯಲ್ಲಿ ತಮ್ಮ ಮಕ್ಕಳ ಮಾಹಿತಿಯನ್ನು ದಾಖಲಿಸಿ ದಿಫೆ.23 ರಿಂದ ಮಾ.15 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ಶಾಲೆಯಲ್ಲಿ ಶೇಕಡಾ 25ರಷ್ಟು ಮೀಸಲಾತಿ ಸೀಟುಗಳ ಬಗ್ಗೆ ಪ್ರತಿಯೊಂದೂ ಶಾಲೆಯಲ್ಲಿ ಪ್ರಕಟಿಸಲಾಗಿದೆ. ಪ್ರತಿ ಶಾಲೆಯಲ್ಲಿ ಆರ್.ಟಿ.ಇ. ಮಕ್ಕಳ ಪ್ರವೇಶಕ್ಕಾಗಿಯೇ ಪ್ರತ್ಯೇಕವಾದ ‘ಹೆಲ್ಪಡೆಸ್ಕ ವ್ಯವಸ್ಥೆ’ ಕಲ್ಪಿಲಾಗಿದೆ. ಇದರಂತೆ ಜಿಲ್ಲಾ ಮಟ್ಟದಲ್ಲಿ ಡಿಡಿಪಿಐ ಕಛೇರಿ ಹಾಗೂ ಡಯಟ್‍ದಲ್ಲಿ, ತಾಲೂಕು ಮಟ್ಟದಲ್ಲಿ ಬಿಇಓ ಕಛೇರಿಯಲ್ಲಿಯೂ ಈ ಹೆಲ್ಪಡೆಸ್ಕ ಆರಂಭಿಸಿದೆ.
ಆನ್‍ಲೈನನಲ್ಲಿ ಸ್ವೀಕರಿಸಿದ ಅರ್ಜಿಗಳ ಪರಿಶೀಲನೆ ಕಾರ್ಯ ಮುಗಿದ ನಂತರ ಮಾ.23 ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಆನ್‍ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಏ.6 ರಂದು ನಡೆಯುವುದು. ಆಯ್ಕೆಯಾದ ಮಕ್ಕಳು ಶಾಲೆಗಳಲ್ಲಿ ದಾಖಲಾತಿಯನ್ನು ಪಡೆಯಬಹುದು.
2016-17 ನೇ ಸಾಲಿನಲ್ಲಿ ಸರ್ಕಾರದ ಆದೇಶ ಪ್ರಕಾರ ಕೆಲವೊಂದು ಬದಲಾವಣೆಗಳ ಮೂಲಕ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು ಅವುಗಳ ವಿವರ ನೀಡಲಾಗಿದೆ. ವಯೋಮಿತಿ ಬದಲಾವಣೆ 1 ನೇ ಜೂನ್ 2016 ಕ್ಕೆ ಇದ್ದಂತೆ ಎಲ್‍ಕೆಜಿ ಗೆ ನಿಗದಿಪಡಿಸಲಾದ ಶಾಲೆಗಳಿಗೆ ಅರ್ಜಿ ಸಲ್ಲಿಸುವ ಮಕ್ಕಳ ವಯಸ್ಸು ಕನಿಷ್ಟ 3 ವರ್ಷ 10 ತಿಂಗಳು, ಗರಿಷ್ಟ 4 ವರ್ಷ 10 ತಿಂಗಳು ಆಗಿರಬೇಕು. ಮೊದಲನೇ ತರಗತಿಗೆ ನಿಗದಿಪಡಿಸಿದ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಟ 5 ವರ್ಷ 10 ತಿಂಗಳು ಗರಿಷ್ಟ 6 ವರ್ಷ 10 ತಿಂಗಳ ಒಳಗಿನ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ವಾಸಸ್ಥಳದ ದೃಢೀಕರಣ ಕುರಿತು ಪಾಲಕರು ತಾವು ವಾಸಸ್ಥಳದ ದೃಢೀಕರಣ ಕುರಿತು ಅರ್ಜಿಯ ಜೊತೆಗೆ ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ ಅಥವಾ ಆಧಾರ ಕಾರ್ಡ ಅರ್ಜಿಯೊಂದಿಗೆ ಅಪ್‍ಲೋಡ ಮಾಡಬೇಕು. ಇವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಸಸ್ಥಳದ ದೃಢೀಕರಣ ದಾಖಲೆಗಳನ್ನು ತಂತ್ರಾಂಶದಲ್ಲಿ ಸ್ವೀಕರಿಸಲಾಗುವುದಿಲ್ಲ.
ಆದಾಯ ಕುರಿತು ಅರ್ಜಿ ಸಲ್ಲಿಸುವ ಪಾಲಕರ ಆದಾಯ ರೂ 3.50 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ನಿಗದಿತ ಅಧಿಕಾರಿಗಳಿಂದ ಪಡೆದ ಆದಾಯ ಪ್ರಮಾಣ ಪತ್ರ ತಂತ್ರಾಂಶದಲ್ಲಿ ಅಪ್‍ಲೋಡ ಮಾಡಬೇಕು. ಪರಿಶಿಷ್ಟ ಜಾತಿ / ಪರಿಶಿಷ್ಟ ಜನಾಂಗ ಹಾಗೂ ಕೆಟಗರಿ-1 ರಲ್ಲಿ ಬರುವ ಮಕ್ಕಳು ಅರ್ಜಿ ಸಲ್ಲಿಸುವಾಗ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಅರ್ಜಿಯ ಜೊತೆಗೆ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಬೇಕು. ನಗರ ಪ್ರದೇಶದಲ್ಲಿ ವಾಸಿಸುವ ಪಾಲಕರು ತಮ್ಮ ಮಕ್ಕಳನ್ನು ತಮ್ಮ ವಾರ್ಡನಲ್ಲಿ ಇರುವ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಆ ವಾರ್ಡನಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು ಯಾವುದೂ ಇಲ್ಲವಾದಲ್ಲಿ ಮಾತ್ರ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ನೆರೆಯ ವಾರ್ಡನಲ್ಲಿ ಇರುವ ತಂತ್ರಾಂಶದಲ್ಲಿ ನಿಗದಿಪಡಿಸಿದ ಶಾಲೆಗೆ ಮಾತ್ರ ಪಾಲಕರು ತಮ್ಮ ಮಕ್ಕಳನ್ನು ಸೇರಿಸಬಹುದಾಗಿದೆ.
ಇತರೆ ಸ್ಥಳಗಳಲ್ಲಿ ಆಯಾ ಜನವಸತಿ ಪ್ರದೇಶದಲ್ಲಿರುವ ಶಾಲೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 2016-17 ನೇ ಸಾಲಿಗೆ ಆರ್.ಟಿ.ಇ. ಸೆಕ್ಷನ್ 12(1) ಸಿ ಪ್ರಕಾರ ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ನೆರೆಹೊರೆಯ ಶಾಲೆಗಳ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಮತ್ತು ಜಿಲ್ಲೆಯ ಅಧಿಕೃತ ವೆಬ್‍ಸೈಟ ಪ್ರಕಟಿಸಲಾಗಿದ್ದು, ಈ ಕುರಿತು ಪಾಲಕರಿಂದ ಆಕ್ಷೇಪಣೆ ಕೇಳಲಾಗಿತ್ತು. ನಿಯಮಾನುಸಾರ ಆಕ್ಷೇಪಣೆಗಳನ್ನು ಸರಿಪಡಿಸಿ ನಮೂನೆ 5 ರಲ್ಲಿ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.ಜಿಲ್ಲೆಯ ಪ್ರತಿಯೊಂದೂ ಶಾಲೆಯಲ್ಲಿ ಹಾಗೂ ಬಿಇಓ ಕಾರ್ಯಾಲಯದಲ್ಲಿ ವಿಶೇಷ ಆರ್.ಟಿ.ಇ. ಕೌಂಟರಗಳನ್ನು ತೆರೆಯಲಾಗಿದ್ದು, ಕಂಪ್ಯೂಟರ-ಇಂಟರನೆಟ್ ಸೌಲಭ್ಯ ಮಾಡಿಕೊಳ್ಳಲಾಗಿದೆ. ಪಾಲಕರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೇ ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ತಮ್ಮ ನೆರೆಹೊರೆ ಪ್ರದೇಶದಲ್ಲಿ ಬರುವ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕೆಂದು ಡಿಡಿಪಿಐ ಎಸ್.ಬಿ.ಕೊಡ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here