ಪಾಟೀಲ ದಂಪತಿಗಳ ಭರ್ಜರಿ ಜಯಭೇರಿ

0
74

ರಾಯಬಾಗ 23: ತಾಲೂಕಿನ 7 ಜಿ.ಪಂ. 28 ತಾ.ಪಂ. ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯಭೇರಿ ಭಾರಿಸಿದೆ. ಒಟ್ಟು 7 ಜಿ.ಪಂ. ಕ್ಷೇತ್ರದಲ್ಲಿ 4 ಕ್ಷೇತ್ರಗಳನ್ನು ಕಾಂಗ್ರೇಸ್ ಪಡೆದರೆ 2 ಕ್ಷೇತ್ರಗಳನ್ನು ಬಿಜೆಪಿ ಪಡೆದುಕೊಂಡಿತು. ಉಳಿದ ಒಂದು ಕ್ಷೇತ್ರವನ್ನು ಶಾಸಕ ಪಿ.ರಾಜೀವ ಅವರ ಕೆಎಸ್‍ಪಿ ಪಕ್ಷದ ಪಾಲಾಗಿದೆ.
ಒಟ್ಟು 28 ತಾ.ಪಂ. ಕ್ಷೇತ್ರಗಳಲ್ಲಿ ಕಾಂಗ್ರೇಸ್ 11 ಸ್ಥಾನಗಳಲ್ಲಿ ಜಯಗಳಿಸಿದರೆ, ಬಿಜೆಪಿಗೆ 6 ಸ್ಥಾನ, ಕೆಎಸ್‍ಪಿ 7 ಮತ್ತು ಪಕ್ಷೇತರರು 4 ಸ್ಥಾನಗಳನ್ನು ಪಡೆದರು.
ತಾಲೂಕಿನ ಪ್ರತಿಷ್ಠಿತ ಕಣವಾಗಿದ್ದ ಅಳಗವಾಡಿ ಜಿ.ಪಂ.ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರ ಸೊಸೆ ಗಾರ್ಗಿ ಪಾಟೀಲ ಅವರು 5831 ಮತಗಳ ಅಂತರದಿಂದ ಜಯಗಳಿಸಿ ಭರ್ಜರಿ ಗೆಲುವುನ್ನು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಮಾಜಿ ಸಂಸದ ಅಮರಸಿಂಹ ಪಾಟೀಲ ಅವರ ಪುತ್ರಿ ಪೂರ್ಣಿಮಾ ಪಾಟೀಲ ಅವರು 5086 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು. ರಾಯಬಾಗ ಗ್ರಾಮೀಣ ಜಿ.ಪಂ.ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪ್ರಣಯ ಪಾಟೀಲ ಅವರು 9852 ಮತಗಳನ್ನು ಪಡೆದು ಜಯಭೇರಿಯಾದರು. ಇನ್ನು ಬಾವನ ಸವದತ್ತಿ ಜಿ.ಪಂ.ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಯಬಾಗ ಶಾಸಕ ಡಿ.ಎಮ್.ಐಹೊಳೆ ಅವರ ಸೊಸೆ ಸುನೀತಾ ಐಹೊಳೆವರು 225 ಮತಗಳಿಂದ ಸೋಲನ್ನು ಅನುಭವಿಸಿದರು. ಅವರ ಪ್ರತಿಸ್ಪರ್ಧಿ ಕಾಂಗ್ರೇಸ್‍ನ ಜಯಶ್ರೀ ಮೊಹಿತೆ 8979 ಮvಗÀಳನ್ನು ಪಡೆದು ಜಯಶೀಲರಾದರು.
ತಾಲೂಕಿನ ಭೇಂಡವಾಡ ಮತ್ತು ಶಿರಗೂರ ತಾ.ಪಂ. ಮತಕ್ಷೇತಗಳು ಅಚ್ಚರಿಯ ಫಲಿತಾಂಶಗಳನ್ನು ನೀಡಿದವು. ಭೇಂಡವಾಡ ತಾ.ಪಂ. ಅಭ್ಯರ್ಥಿಗಳಾದ ಬಿಜೆಪಿಯ ಲಕ್ಷ್ಮೀಬಾಯಿ ಜಗದಾಳೆ ಹಾಗೂ ಕಾಂಗ್ರೇಸ್‍ನ ಮಹಾದೇವಿ ಪಾಟೀಲ ಅವರು ಸಮಾನ ಮತ ಪಡೆದುಕೊಂಡರು. ಚುನಾವಣಾಧಿಕಾರಿಗಳು ಇಬ್ಬರ ಸಮ್ಮತಿ ಮೇರೆಗೆ ಚೀಟಿ ಎತ್ತಿದ್ದಾಗ ಕಾಂಗ್ರೇಸ್‍ನ ಮಹಾದೇವಿ ಪಾಟೀಲ ಆಯ್ಕೆಯಾಗಿರುವುದಾಗಿ ಘೋಷಿಸಲಾಯಿತು.
ಶಿರಗೂರ ತಾ.ಪಂ. ಕಾಂಗ್ರೇಸ್‍ನ ಅಭ್ಯರ್ಥಿ ಸುಜಾತಾ ಪಾಟೀಲ ಅವರು 2221 ಮತಗಳನ್ನು ಪಡೆದು ಒಂದು ಮತದ ಅಂತರದಿಂದ ಜಯ ಗಳಿಸಿದರೆ, ಅವರ ಪ್ರತಿಸ್ಪರ್ಧಿ ಪಕ್ಷೇತ್ರ ಅಭ್ಯರ್ಥಿ ಭಾರತಿ ಬ್ಯಾಡಗಿ 2220 ಮತಗಳನ್ನು ಪಡೆದರು.
ಗೆದ್ದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಗುಲಾಲನ್ನು ಎರಚಿ, ಪಟಾಕಿ ಹಾರಿಸಿ ವಿಜಯೋತ್ಸವ ಆಚರಿಸುತ್ತಿರುವುದು ಎಲ್ಲೇಡೆ ಕಂಡುಬಂದಿತು.

loading...

LEAVE A REPLY

Please enter your comment!
Please enter your name here