ನವಲಗುಂದ ಚುನಾವಣಾ ಫಲಿತಾಂಶ ಅತಂತ್ರ

0
82

ನವಲಗುಂದ : ನಗರದಲ್ಲಿ ನಡೆದ ತಾಲೂಕು ಮತ್ತು ಜಿಲ್ಲಾ ಪಂಚಾಯತಿಯ ಚುನಾವಣಾ ಫಲಿತಾಂಶ ಅತಂತ್ರ ಸ್ಥಿತಿಯಲ್ಲಿ ಹೂರ ಹೂಮ್ಮಿದೆ.
ತಾಲೂಕು ಪಂಚಾಯತಿಯಲ್ಲಿ ಕಾಂಗ್ರೇಸ್ ಪಕ್ಷ 5 ಸ್ಥಾನಗಳನ್ನು, ಬಿ.ಜೆ.ಪಿ 4 ಸ್ಥಾನಗಳನ್ನು, ಜೆಡಿಎಸ್ 4 ಸ್ಥಾನಗಳನ್ನು ಪಡೆದರೆ ಬೆಳವಟಗಿಯ ಕ್ಷೇತ್ರದಿಂದ 1 ಪಕ್ಷೇತರ ಅಭ್ಯರ್ಥಿಯನ್ನು ಮತದಾರ ಭಾಂದವರು ಆರಿಸಿ ಯಾವ ಪಕ್ಷಕ್ಕು ಸ್ಪಷ್ಟ ಬಹುಮತವನ್ನು ನೀಡಿರುವುದಿಲ್ಲಾ. ಅದೇ ರೀತಿ ಜಿಲ್ಲಾ ಪಂಚಾಯತಿಯಲ್ಲಿ 3 ಸ್ಥಾನಗಳನ್ನು ಪಡೆದು ಕಾಂಗ್ರೇಸ್ ಜಯಭೇರಿಯನ್ನು ಭಾರಿಸಿದರೆ ಕಮಲ ಪಾರ್ಟಿಯು ಕೇವಲ 1 ಸ್ಥಾನದಲ್ಲಿ ತೃಪ್ತಿ ಪಟ್ಟು ಕೂಳ್ಳುವಂತಾಗಿದೆ.

ನವಲಗುಂದ ತಾಲೂಕು ಪಂಚಾಯತಿಯ ಕ್ಷೇತ್ರವಾರು ಫಲಿತಾಂಶ ಅಳಗವಾಡಿಯ ಕ್ಷೇತ್ರದಿಂದ ಶಾಂತವ್ವಾ.ಭೀಮಪ್ಪ.ತಿಪ್ಪಣ್ಣವರ(ಕಾಂಗ್ರೇಸ್), ಬೆಳವಟಗಿಯ ಕ್ಷೇತ್ರದಿಂದ ಹುಬ್ಬಳ್ಳಿ.ಕಲ್ಲಪ್ಪ.ಯಲ್ಲಪ್ಪ(ಪಕ್ಷೇತರ), ತಡಹಾಳ ಕ್ಷೇತ್ರದಿಂದ ಬಸವರಾಜ.ರಾಯಪ್ಪ.ನರಗುಂದ(ಕಾಂಗ್ರೇಸ್), ಶಲವಡಿಯ ಕ್ಷೇತ್ರದಿಂದ ದೇವೇಂದ್ರಪ್ಪ.ಪಕ್ಕೀರಪ್ಪ.ರೋಣದ(ಜೆ.ಡಿ.ಎಸ್), ಇಬ್ರಾಹಿಂಪೂರ ಕ್ಷೇತ್ರದಿಂದ ಮಲ್ಲರಡ್ಡಿ.ಹನಮರಡ್ಡಿ.ಕುರಹಟ್ಟಿ(ಜೆ.ಡಿ.ಎಸ್), ಯಮನೂರ ಕ್ಷೇತ್ರದಿಂದ ನಿಂಗವ್ವಾ.ನಿಂಗಪ್ಪ.ಬಾರಕೇರ(ಬಿ.ಜೆ.ಪಿ), ತಿರ್ಲಾಪೂರ ಕ್ಷೇತ್ರದಿಂದ ಶಿವಕ್ಕ.ಬಸಪ್ಪ.ಚುಳಕಿ(ಬಿ.ಜೆ.ಪಿ), ಶಿರೂರು ಕ್ಷೇತ್ರದಿಂದ ಅನ್ನಪೂರ್ಣ.ಬಸಯ್ಯ.ಶಿರಹಟ್ಟಿಮಠ(ಕಾಂಗ್ರೇಸ್), ಮೊರಬ ಕ್ಷೇತ್ರದಿಂದ ಗೋಲನಾಯ್ಕರ್.ಯೋಗಪ್ಪ.ಭರಮನಾಯ್ಕ(ಕಾಂಗ್ರೇಸ್), ಶಿರಕೋಳ ಕ್ಷೇತ್ರದಿಂದ ಉಗರಗೋಳ.ಮಲ್ಲವ್ವ.ಚಂದ್ರಪ್ಪ(ಜೆ.ಡಿ.ಎಸ್), ಕಾಲವಾಡ ಮತಕ್ಷೇತ್ರದಿಂದ ನಾಗನಗೌಡ.ಮಲ್ಲನಗೌಡ.ಪಾಟೀಲ್(ಬಿ.ಜೆ.ಪಿ), ಹಳ್ಳಿಕೇರಿ ಕ್ಷೇತ್ರದಿಂದ ಚಾಕಲಬ್ಬಿ.ವೆಂಕಮ್ಮ.ವಿಠ್ಯಪ್ಪ(ಕಾಂಗ್ರೇಸ್), ನಲವಡಿ ಕ್ಷೇತ್ರದಿಂದ ವೀರಪ್ಪ.ಛಾಯಪ್ಪ.ನಾಯ್ಕರ(ಬಿ.ಜೆ.ಪಿ), ಭದ್ರಾಪೂರ ಕ್ಷೇತ್ರದಿಂದ ಗಾಣಿಗೇರ.ನಿರ್ಮಲಾ.ಹನುಮಂತಪ್ಪ(ಜೆ.ಡಿ.ಎಸ್) ಅಭ್ಯರ್ಥಿಯಾಗಿ ಆಯ್ಕೇಯಾಗಿದ್ದಾರೆ.

ಜಿಲ್ಲಾ ಪಂಚಾಯತಿಯ ಚುನಾವಣೆಯಲ್ಲಿ ನಲವಡಿ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಗಾಯತ್ರಿ.ಸಂಜೀವರೆಡ್ಡಿ.ರಾಯರಡ್ಡಿ, ಮೊರಬ ಮತಕ್ಷೇತ್ರದ ಕಾಂಗ್ರೇಸನಿಂದ ಪಾಟೀಲ್ ವಿಜಯಲಕ್ಷ್ಮೀ.ಕೆಂಪೇಗೌಡ, ಶಲವಡಿಯ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದಿಂದ ಇಬ್ರಾಹಿಂಪೂರ.ರೇಣುಕಾ.ಹನಮಪ್ಪ ಹಾಗೂ ಅಳಗವಾಡಿಯ ಮತಕ್ಷೇತ್ರದಿಂದ ಬಿ.ಜೆ.ಪಿ ಯ ಪಕ್ಷದಿಂದ ಅಂದಾನಯ್ಯಬಸಲಿಂಗಯ್ಯ.ಹಿರೇಮಠ ರವರು ಆಯ್ಕೇಯಾಗಿದ್ದಾರೆ. ಈ ಮೂಲಕ ಹಳ್ಳಿಗಳ ಮತದಾರ ಭಾಂದವರು ಯಾವುದೇ ಪಕ್ಷಕ್ಕೇ ಸ್ಪಷ್ಟ ಬಹುಮತವನ್ನು ನೀಡದೇ ಸಮ್ಮೀಶ್ರ ಪ್ರತೀಕ್ರಿಯೇಯನ್ನು ನೀಡಿದ್ದಾರೆ..

loading...

LEAVE A REPLY

Please enter your comment!
Please enter your name here