ಹೊಲಿಗೆ ತರಬೇತಿಯ ಉದ್ಘಾಟನೆ

0
81


ದಾಂಡೇಲಿ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ (ರಿ), ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಉಚಿತ ಹೊಲಿಗೆ ತರÀಬೇತಿ ಶಿಬಿರದ ಉದ್ಘಟನೆಯು ಇತ್ತೀಚೆಗೆ ಸ್ಥಳೀಯ ವಿನಾಯಕ ನಗರದಲ್ಲಿ ಜರುಗಿತು.
ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕ ಕೆ.ಜಿ.ಗಿರಿರಾಜ ಅವರು ವಿಶೇಷವಾಗಿ ಮಹಿಳೆಯರಿಗೆ ಮನೆಯಲ್ಲೆ ಕುಳಿತು, ಮನೆ ಕೆಲಸದ ಜೊತೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹೊಲಿಗೆ ಅತ್ಯುತ್ತಮವಾದ ವೇದಿಕೆಯಾಗಿದೆ. ಆಧುನೀಕತೆಯ ವೇಗಕ್ಕೆ ಹೊಂದಿಕೊಂಡು ಬದುಕಬೇಕಾದ ಇಂದಿನ ದಿನಗಳಲ್ಲಿ ಪ್ಯಾಶನ್ ಅತ್ಯವಶ್ಯವಾಗಿದೆ. ಹೊಲಿಗೆ ಕಲಿತ ನಂತರದಲ್ಲಿ ಅದರಲ್ಲಿ ಕ್ರಿಯಾಶೀಲರಾಗಿ ಸ್ವಂತಿಕೆಯನ್ನು ಉಪಯೋಗಿಸಿ, ಈಗಿನ ಸ್ಥಿತಿಗೆ ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬಟ್ಟೆ ಹೊಲಿಯುವುದನ್ನು ರೂಢಿಸಿಕೊಂಡಲ್ಲಿ ಯಶಸ್ವಿ ಸ್ವಾವಲಂಬಿಗಳಾಗಲು ಸಾಧ್ಯವಿದೆ. ವಿವಿಧ ಸ್ವ ಉದ್ಯೋಗ ತರಬೇತಿ ನೀಡುವುದರ ಮೂಲಕ ದೇಶಪಾಂಡೆ ಆರ್ ಸೆಟಿ ಸಶಕ್ತ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಗದ ಕಾರ್ಖಾನೆಯ ಅಧಿಕಾರಿ ಎಸ್. ಎಮ್. ಪಾಟೀಲ್ ಉಚಿತ ಹೋಲಿಗೆ ತರಬೇತಿ ಕಾರ್ಯಕ್ರಮ ಯಶ್ವಿಸಿಯಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಹಳಿಯಾಳ ಇಲ್ಲಿನ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ರವರು ಸಂಸ್ಥೆ ಮುಖ್ಯವಾಗಿ ಮಹಿಳೆಯರ ಸ್ವಸಹಾಯ ಸಂಘಗಳನ್ನು ರಚಿಸಿ, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ದೃಷ್ಟಿಯಿಂದ ಹಲವಾರು ಸ್ವುದ್ಯೋಗ ತರಬೇತಿಗಳನ್ನು ನೀಡಿ, ಸ್ವ ಉದ್ಯೋಗ ಕೈಗೊಳ್ಳಲು ಸಕಾಲಕ್ಕೆ ಸಂಸ್ಥೆಯೆ ಬ್ಯಾಂಕ್ ನೆರವನ್ನು ನೀಡಿತ್ತಾ ಬಂದಿದೆ. ಹೊಲಿಗೆ ತರಬೇತಿ ಪಡೆದುಕೊಂಡ ಪ್ರತಿಯೊಬ್ಬ ಫಲಾನುಭವಿಯೂ ಸ್ವ ಉದ್ಯೋಗದಲ್ಲಿ ತಮ್ನನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕಿ ಸುಹಾಸಿನಿ ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಯೋಜನಾಧಿಕಾರಿ ಶ್ರೀನಿವಾಸ ಎಸ್ .ಕೆ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಸಂಸ್ಥೆಯ ಮೇಲ್ವಿಚಾರಕ ನಾರಾಯಣ ವಾಡಕರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು ಕಾರ್ಯಕ್ರಮದಲ್ಲಿ 25 ಕ್ಕೂ ಹೆಚ್ಚು ಶಿಬಿರಾರ್ಥಿಗಳಿದ್ದರು.

loading...

LEAVE A REPLY

Please enter your comment!
Please enter your name here