ಜಲಸಾಹಸ ಕ್ರೀಡೆಯಲ್ಲಿ ತರಬೇತಿ

0
34

ಕಾರವಾರ : ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಂಸ್ಥೆಯು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ರಾಜ್ಯ ಮಟ್ಟದ ಅಡ್ವಾನ್ಸ್‍ಡ್ ಜಲಸಾಹಸ ಕ್ರೀಡಾ ತರಬೇತಿ ಶಿಬಿರವನ್ನು ಹಿರಿಯೂರಿನ ವಾಣಿವಿಲಾಸ ಜಲಸಾಹಸ ಕ್ರೀಡಾ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.
ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಈ ಶಿಬಿರ ಸಂಘಟಿಸಲಾಗಿದ್ದು ಒಟ್ಟು ಮೂರು ಬೇಸಿಕ್ ಜಲಸಾಹಸ ಕ್ರೀಡಾ ತರಬೇತಿ ಶಿಬಿರದಲ್ಲಿ 120 ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅದರಲ್ಲಿ 30 ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ರಾಜ್ಯಾದ್ಯಂತ ಒಟ್ಟು 29 ಬಾಲಕರು ಹಾಗೂ ಒಬ್ಬಳು ಬಾಲಕಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಪ್ರಸ್ತುತ ಕಾರವಾರ ಹಾಗೂ ದಾಂಡೇಲಿಯಲ್ಲಿ ಇವರಿಗೆ ತರಬೇತಿ ನೀಡಲಾಗುತ್ತಿದೆ.
ಅಡ್ವಾನ್ಸ್ಡ್ ತರಬೇತಿ ಶಿಬಿರವು 21 ದಿನಗಳ ವರೆಗೆ ನಡೆಯಲಿ ಆರು ದಿನ ಕಾರವಾರದ ಕಡಲತೀರದಲ್ಲಿ ಹಾಗೂ 15 ದಿನ ದಾಂಡೇಲಿಯ ಕಾಳಿ ನದಿ ತೀರದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಕಾಳಿನದಿಯಲ್ಲಿ ರ್ಯಾಫ್ಟಿಂಗ್, ಕಯಾಕಿಂಗ್, ರಿಸ್ಕ್ಯೂ,ರ್ಯಾಫ್ಟ್ ಹೆಂಡಲಿಂಗ್ ತರಬೇತಿ ನೀಡಲಾಗುತ್ತದೆ.
ಕಾರವಾರದ ಕಡಲಿನಲ್ಲಿ ಸ್ವಿಮ್ಮಿಂಗ್, ರಿಸ್ಕ್ಯೂ, ವಿಂಡ್‍ಸರ್ಫಿಂಗ್, ಕಯಾಕಿಂಗ್, ಸೀಎಕ್ಸಪೆಡೇಷನ್ ಹಾಗೂ ಮೊಟಾರ್ ಬೋಟ್ ಹೆಂಡಲಿಂಗ್ ತರಬೇತಿಯನ್ನು ನೀಡಲಾಗುತ್ತದೆ. ಕಾರವಾರದಲ್ಲಿ ಪ್ರಕಾಶ ಹರಿಕಂತ್ರ, ಶ್ರೀಧರ್ ಗೂಡೇಅಂಗಡಿ, ಅನಿತಾ, ದಿನೇಶ ಸುವರ್ಣ, ಚಂದ್ರಕಾಂತ್, ಗೌರೀಶ ತರಬೇತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ದಾಂಡೇಲಿಯ ಕಾಳಿ ನದಿಯಲ್ಲಿ ರ್ಯಾಫ್ಟಿಂಗ್ ಹಾಗೂ ಕಯಾಕಿಂಗ್‍ಗೆ ಸಂಬಂಧಪಟ್ಟ ವಿಶೇಷ ತರಬೇತಿದಾರರು ತರಬೇತಿ ನೀಡಲಾತ್ತಿದೆ ಎಂದು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಮುಖ್ಯಸ್ಥ ಪ್ರಕಾಶ ಹರಿಕಂತ್ರ ಮಾಹಿತಿ ನೀಡಿದರು.

loading...

LEAVE A REPLY

Please enter your comment!
Please enter your name here