ಕೇಂದ್ರ ಸರಕಾರ ರೈಲ್ವೆ ಬಜೆಟ್‍ನಲ್ಲಿ ಕರ್ನಾಟಕ್ಕೆ ಏನೂ ಇಲ್ಲ: ಹೆಬ್ಬಾಳಕರ ಆರೋಪ

0
37

ಬೆಳಗಾವಿ:25 ಕೇಂದ್ರ ಸರಕಾರದ ಪ್ರಸಕ್ತ ರೈಲ್ವೆ ಬಜೆಟ್‍ನಲ್ಲಿ ಯಾವುದೇ ಹೊಸ ಯೋಜನೆಗಳು ನೀಡದೆ ಕರ್ನಾಟಕ್ಕೆ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಪ್ರತಿಕ್ರಯಿಸಿದ್ದಾರೆ.
ಈ ಹಿಂದೆ ಘೋಷಣೆ ಮಾಡಿದ ಬೆಳಗಾವಿ – ಧಾರವಾಡ ಹೊಸ ರೈಲು ಜೋಡಣೆ ಇಲ್ಲಿಯವರೆಗೂ ಆಗಿಲ್ಲ. ಅಲ್ಲದೆ ಪ್ರಸಕ್ತ ರೈಲ್ವೆ ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಕೇಂದ್ರ ಸರಕಾರ ನಿರ್ಲಕ್ಷ ಮಾಡುತ್ತಿದೆ. ಕೇಂದ್ರ ಸರಕಾರದ ರೈಲ್ವೆ ಬಜೆಟ್ ಕರ್ನಾಟಕ ಜನತೆಗೆ ಯಾವುದೇ ಲಾಭವಿಲ್ಲ ಎಂದು ಆರೋಪ ಮಾಡಿದ್ದಾರೆ.

loading...

LEAVE A REPLY

Please enter your comment!
Please enter your name here