ಮೋದಿ ಮನ್ ಕೀ ಬಾತ್ ಬೇಡ ಕಾಮ್ ಕೀ ಬಾತ್ ಪ್ರಾರಂಭಿಸಲಿ: ಶಿವಕುಮಾರ

0
60

ಬೆಳಗಾವಿ:25 ಕೇಂದ್ರದಲ್ಲಿ ಕಳೆದ ಎರಡು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮ ಮಾಡಿರುವುದು ಸಾಕು ಇನ್ನೆನಿದ್ದರೂ ಕಾಮ್ ಕೀ ಬಾತ್ ಪ್ರಾರಂಭಮಾಡಬೇಕೆಂದು ಆಮ್‍ಆದ್ಮಿ ಪಕ್ಷದ ಶಿವಕುಮಾರ ಇಂದಿಲ್ಲಿ ಹೇಳಿದರು.
ಅವರು ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ರಾಜ್ಯ ಸೇರಿದಂತೆ ದೇಶದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಕೇವಲ ಮನ್ ಕೀ ಬಾತ್ ಮಾಡಿಕೊಂಡು ಹೊರಟರೇ ಸಾಲದು ಕಾಮಕೀ ಬಾತ ಪ್ರಾರಂಭ ಮಾಡಬೇಕೆಂದು ಅವರು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ದಿ.27 ಕ್ಕೆ ಬೆಳಗಾವಿಗೆ ಆಗಮಿಸುತ್ತಿರುವುದು ಸಂತಸದ ಸಂಗತಿ. ಈ ಹಿಂದೆ ಬಿಹಾರದಲ್ಲಿ ಚುನಾವಣೆ ಪ್ರಚಾರದ ವೇಳೆ ತೆರಳಿದ ಸಂದರ್ಭದಲ್ಲಿ ಅಲ್ಲಿ ನೀಡಿದ ಲಕ್ಷಾಂತರ ಕೋಟಿಯ ಯೋಜನೆಗಳು ಇಲ್ಲಿಯವರೆಗೂ ಪ್ರಾರಂಭವಾಗಿಲ್ಲ. ಉತ್ತರ ಕರ್ನಾಟಕದಲ್ಲಿ ರೈತರು ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳಿಸಲು ಹೋರಾಟ ನಡೆಸಿರೂ ಮಧ್ಯಸ್ಥಿಕೆ ವಹಿಸಲು ನಿರಾಕರಿಸುತ್ತಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗುತ್ತಿದೆ. ಕಾರಪೋರೇಟರ್‍ಗಳ ಬಗ್ಗೆ ಮೋದಿ ಹೆಚ್ಚಿನ ಕೃಪಾಕಟಾಕ್ಷ ತೋರಿ ರೈತರಿಗೆ ಕಡೆಗಣನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಾನಂದ ಚಿಕ್ಕಮಠ, ಸಿದ್ಧಾರ್ಥ, ದೀಪಕ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here