ಇಂದಿನಿಂದ ದ್ವೀತಿಯ ಪಿಯುಸಿ ಪರೀಕ್ಷೆಗಳು

0
45

ಬೆಳಗಾವಿ 10: ಇಂದಿನಿಂದ ಮಾರ್ಚ್ 28 ರವರಗೆ ದ್ವೀತಿಯ ವರ್ಷದ ಪಿಯುಸಿ
ಪರೀಕ್ಷೆಗಳು ಜಿಲ್ಲೆಯ 85 ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾನೆ 9 ರಿಂದ ಮಧ್ಯಾಹ್ನ 12;15 ತನಕ ನಡೆಯಲ್ಲಿವೆ. ದ್ವೀತಿಯ ಪಿಯು ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹತ್ತು ತಾಲೂಕಿನ 85 ಪರೀಕ್ಷಾ ಕೇಂದ್ರಗಳಲ್ಲಿ 27,457 ಯುವಕರು ಹಾಗೂ 19,451 ಯುವತಿಯರು ಸೇರಿದಂತೆ ಒಟ್ಟು 46,908 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ.
ಕಲಾ ವಿಭಾಗದಲ್ಲಿ 20,456 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 14,706 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 11,746 ವಿದ್ಯಾರ್ಥಿಗಳು ಈ ಭಾರಿ ಪರೀಕ್ಷೆಗಳನ್ನು ಬರೆಯಲ್ಲಿದ್ದಾರೆ. ಇದರಲ್ಲಿ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಪರೀಕ್ಷೆ ಎದುರಿಸುತ್ತಿದ್ದಾರೆ.
ಪ್ರಥಮ ಭಾರಿಗೆ ದ್ವೀತಿಯ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ, ಗಣಿತ ಹಾಗೂ ಅಧ್ಯಯನ ಶಾಸ್ತ್ರ ವಿಷಯಗಳ ಪರೀಕ್ಷೆಯಲ್ಲಿ ಗುಲಾಬಿ ಬಣ್ಣದ ಗೆರೆ ಹೊಂದಿರುವ 24 ಪುಟಗಳ ಉತ್ತರ ಪತ್ರಿಕೆ ಹಾಗೂ ಇನ್ನುಳಿದ ವಿಷಯಗಳಿಗೆ 18 ಪುಟಗಳ ಉತ್ತರ ಪತ್ರಿಕೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡುತ್ತಿದೆ.
ಜಿಲ್ಲೆಯಲ್ಲಿ 7 ಸೂಕ್ಷ್ಮ ಹಾಗೂ 21 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದ್ದು. ಯಾವುದೇ ಅಕ್ರಮ ನಡೆಯದಂತೆ ಅಕ್ರಮ ತಡೆಗಟ್ಟಲು 20 ವಿಶೇಷ ತಂಡಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ 144 ಕಲಂ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here