ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ : ಪಾಟೀಲ

0
72

ಮೋಳೆ 14: ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದೇಶದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡು ಶಿಕ್ಷಣ, ಆರೋಗ್ಯ, ಉದ್ಯೋಗ, ಆರ್ಥಿಕ ವಿಷಯದಲ್ಲಿ ಭಾರತ ಅಭಿವೃದ್ಧಿ ಹೊಂದುವಲ್ಲಿ ಕಾಂಗ್ರಸ್ ಪಕ್ಷದ ಹೋರಾಟವೇ ಮುಖ್ಯ ಕಾರಣ ಎಂದು ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ ಹೇಳಿದರು.
ಅವರು ರವಿವಾರ ಐನಾಪೂರ ಹಾಗೂ ಉಗಾರ ಗ್ರಾಮದಲ್ಲಿ ನಾಳೆ ಬರಲಿರುವ ಉಗಾರ ಪುರಸಭೆ, ಐನಾಪೂರ ಹಾಗೂ ಶೇಡಬಾಳ ಪಟ್ಟಣ ಪಂಚಾಯತ ಚುನಾವಣೆಯ ಪೂರ್ವಭಾವಿ ಸಭೆ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡವರನ್ನು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ತನ್ನದೇ ಆದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಕೋಟ್ಯಾಂತದ ಕಾರ್ಯಕರ್ತರನ್ನು ಹೊಂದಿದ್ದು, ಪಕ್ಷ ಅವರ ಸೇವೆಯನ್ನು ಗುರುತಿಸಿ ಸ್ಥಾನ ಮಾನಗಳನ್ನು ನೀಡುತ್ತದೆ. ಅದಕ್ಕಾಗಿ ನಾಳೆ ಬರಲಿರುವ ಪುರಸಭೆ, ಪಟ್ಟಣ ಪಂಚಾಯತಿಯ ಚುನಾವಣೆಯಯಲ್ಲಿ ಕಾರ್ಯಕರ್ತರು ಶ್ರದ್ದೆಯಿಂದ ದುಡಿದು ಕಾಂಗ್ರೆಸ್ ಪಕ್ಷದ ಬಾವುಟ ಹಾರಸೋಣ ಎಂದರು.

ಉಗಾರ ಖುರ್ದ ಗ್ರಾಮದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಉಜ್ವಲಾ ಶೆಟ್ಟಿ ಹಾಗೂ ಚಿಕ್ಕೋಡಿ ಯುವ ಮೋರ್ಚಾದ ಅಧ್ಯಕ್ಷ ವಿವೇಕ ಶೆಟ್ಟಿಯವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವದರಿಂದ ಕಾಗವಾಡ ವಿಧಾನ ಸಭಾ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಕಿರಣಕುಮಾರ ಪಾಟೀಲ ಪಕ್ಷದ ಬಾವುಟ ನೀಡಿ ಅವರನ್ನು ಸನ್ಮಾಣಿಸಿ ಸೇರ್ಪಡೆ ಮಾಡಿಕೊಂಡರು.

ಈ ವೇಳೆ ಕೆಪಿಸಿಸಿ ಸದಸ್ಯ ದಿಗ್ವಿಜಯಸಿಂಗ ಪವಾರದೇಸಾಯಿ, ಚಂದ್ರಕಾಂತ ಇಮ್ಮಡಿ, ಮಾನಸಾ ಪೋತದಾರ,, ಸುಭಾಷ ಖುರಾಡೆ ತಾಪಂ ಸದಸ್ಯ ವಸಂತ ಖೋತ, ಪ್ರಪುಲ ಥೋರುಸೆ, ಮಹಾದೇವ ಕೋರೆ, ಬಸಗೌಡ ಪಾಟೀಲ, ಸುರೇಶ ಥೋರುಸೆ, ಅಣ್ಣಾಸಾಬ ಸಾಂಗಲೆ, ಶಶಿಕಾಂತ ಕಾಂಬಳೆ, ಸೇರಿದಂತೆ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಇದ್ದರು.
ಅಭಿನಂದನೆ : ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿಯವರು ತಮ್ಮ ಸಂಸದರ ನಿಧಿಯಿಂದ ಕಾಗವಾಡ ಗ್ರಾಮದಲ್ಲಿ ಗಡಿ ಅಭಿವೃದ್ಧಿ ಯೋಜನೆಯಡಿಯಲ್ಲಿ 12 ಕೋಟಿ ರೂ. ಹಾಗೂ ಉಗಾರ ಖುರ್ದ ಗ್ರಾಮದಲ್ಲಿ ಎರಡುವರೆ ಕೋಟಿ ರೂ. ವೆಚ್ಚದಲ್ಲಿ ದ್ವೀಪಥ ರಸ್ತೆ ಮತ್ತು ಎರಡುವರೆ ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದಾರೆ. ಅಲ್ಲದೇ ಸಂಪೂರ್ಣವಾಗಿ ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 2 ಟಿಎಂಸಿ ನೀರನ್ನು ಹರಿಸಲು ಪ್ರಯತ್ನ ಮಾಡಿ ಯಶಸ್ವಿಯಾಗಿರುವ ಸಂಸದ ಪ್ರಕಾಶ ಹುಕ್ಕೇರಿಯವರಿಗೆ ಪಕ್ಷದ ಕಾರ್ಯಕರ್ತರು ಅಭಿನಂದನೆ ವ್ಯಕ್ತಪಡಿಸಿದರು.

loading...

LEAVE A REPLY

Please enter your comment!
Please enter your name here