ಗಾಯಗೊಂಡ ಪುರುಷೋತ್ತಮ ನಾಯ್ಕನ ಅಂಗಾಂಗ ದಾನ ಮಾಡಲು ಮನೆಯವರ ನಿರ್ಧಾರ

0
36


ಭಟ್ಕಳ : ಕಳೇದ ಮಾ.14ರಂದು ಭಟ್ಕಳದ ಬಂದರ ರೋಡನಲ್ಲಿ ಬೈಕ್ ಹಾಗೂ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಗಂಭೀüರ ಗಾಯಗೊಂಡು ಮಣಿಪಾಲ ಆಸ್ಪತ್ರೆ ಸೇರಿದ ಮಾವಿನಕುರ್ವಾ ನಿವಾಸಿ ಪುರುಷೊತ್ತಮ ನಾಯ್ಕ ಕೋಮಾದಲ್ಲಿದಲ್ಲಿದ್ದು ಚೇತರಿಸಿಕೊಳ್ಳುವ ಯಾವುದೇ ಲಕ್ಷಣ ಕಾಣದಿರುವುದರಿಂದ ಆತನ ಮನೆಯವರು ಅವನ ಬಯಕೆಯಂತೆ ಅಂಗಾಂಗಗಳನ್ನು ಬೇರೆಯವರಿಗೆ ದಾನ ಮಾಡಲು ಮಂಗಳವಾರ ನಿರ್ಧರಿಸಿದ್ದಾರೆ.
ತಲೆಗೆ ಗಂಭೀರ ಗಾಯಗೊಂಡ ಕಾರಣ ಈತನು ಕಳೇದ 1 ವಾರದಿಂದ ಕೋಮಾ ಸ್ಥಿತಿಯಲ್ಲಿದ್ದು ಯಾವುದೇ ಚಿಕಿತ್ಸೆಗೆ ಸಹಕರಿಸುತ್ತಿರಲಿಲ್ಲ. ನಿನ್ನೆ ವೈದ್ಯರು ಈತನು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಮನೆಯವರಿಗೆ ತಿಳಿಸಿದಾಗ ಮನೆಯವರು ಸಹೃದಯಿಗಳಾಗಿ ಈತನ ಅಂಗಾಂಗಗಳು ಬೇರೆಯವರಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.
ಈತನ ಮತ್ತು ಈತನ ಕುಟುಂಬದ ಈ ನಿರ್ಧಾರ ಭಟ್ಕಳ ಜನತೆ ಮೆಚ್ಚುವಂತೆ ಮಾಡಿದ್ದು, ಇದು ಇತರರಿಗೆ ಮಾದರಿಯಾಗಲಿದೆ.

loading...

LEAVE A REPLY

Please enter your comment!
Please enter your name here