ವಿಶ್ವ ನೀರಿನ ದಿನ ಕಾರ್ಯಕ್ರಮ

0
65


ಸಿದ್ದಾಪುರ : ನೀರಿನ ಸುಸ್ಥಿರ ಬಳಕೆಯನ್ನು ಮಾಡದ ಪರಿಣಾಮ ಇಂದು ಕುಡಿಯುವ ನೀರನ್ನು ಹಣಕೊಟ್ಟು ಕೊಳ್ಳುವ ಪರಿಸ್ಥಿತಿ ಬಂದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಹನುಂತ ಜಿ.ಹೆಚ್.ಹೇಳಿದರು.

ಅವರು ಮಂಗಳವಾರ ಪಟ್ಟಣದ ಬಾಲಭವನದಲ್ಲಿ ಸ್ಥಳೀಯ ಪಟ್ಟಣ ಪಂಚಾಯತ್,ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ನೀರಿನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಭೂಮಿಯಲ್ಲಿರುವ ನೀರಿನ ಪ್ರಮಾಣದಲ್ಲಿ ಶೇ.97ರಷ್ಟು ಸಮುದ್ರದ ನೀರಾಗಿದ್ದು,ಶೇ.2ರಷ್ಟು ಮಂಜು ಪ್ರದೇಶ ಇತ್ಯಾದಿಯಾಗಿದ್ದು, ಮಾನವನ ಬಳಕೆಗೆ ಸಿಗುತ್ತಿರುವ ನೀರಿನ ಪ್ರಮಾಣ ಕೇವಲ ಶೇ.1ರಷ್ಟು ಆಗಿದೆ. ಇಷ್ಟು ಕಡಿಮೆ ಪ್ರಮಾಣದ ನೀರನ್ನು ಬಳಸುವ ಅರಿವು ಪ್ರತಿಯೊಬ್ಬರಿಗೂ ಬರಬೇಕು. ಶುದ್ದ ನೀರನ್ನು ಪಡೆಯುವುದು ಮನುಷ್ಯನ ಮೂಲಭೂತ ಹಕ್ಕು ಎಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದ್ದು, ಆದರೆ ಇದು ಕಾನೂನಿನಿಂದಾಗಲಿ,ಸರಕಾರದಿಂದಾಗಲಿ ಆಗುವ ಕೆಲಸವಲ್ಲ ಇದು ಪ್ರತಿಯೊಬ್ಬ ಮನುಷ್ಯನು ಪ್ರಯತ್ನಿಸಬೇಕಾದ ವಿಷಯವಾಗಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಶಿವಾನಂದ ಕಳವೆ ಮಾತನಾಡಿ,ಹಿಂದೆ ರಾಜರು ತಮ್ಮ ಪ್ರಜೆಗಳಿಗೆ ಉಪಯೋಗವಾಗುವಂತೆ ಕೆರಗಳನ್ನು ತೋಡಿಸಿ ನೀರನ್ನು ಉಳಿಸುವ ಕೆಲಸ ಮಾಡುತ್ತಿದ್ದರು. ನೀರು ನಿರ್ವಹಣೆಯ ಬಗ್ಗೆ ಆದ್ಯತೆ ನೀಡುತ್ತಿದ್ದರು. ಆದರೆ ಇಂದು ಕೆರಗಳ ನಿರ್ವಹಣೆಯ ಬಗ್ಗೆ ಅರಿವೆ ಇಲ್ಲವಾಗಿದೆ ಅದೇ ಕೆರೆಯಲ್ಲಿ ಹೂಳು ತುಂಬಿರುವುದರ ಜೊತೆಗೆ ನಮ್ಮ ಬುದ್ದಿಗೂ ಹೂಳು ತುಂಬಿದ್ದು ದಿನ ನಿತ್ಯದ ಬಳಕೆ ನೀರನ್ನೂ ಖರೀದಿಸುವಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ವಹಿಸಿಕೊಂಡಿದ್ದರು.
ವೇದಿಕೆಯಲ್ಲಿ ಸರಕಾರಿ ವಕೀಲ ರಾಜಶೇಖರ ತಿಳಗಂಜಿ,ಪಪಂ ಅಧ್ಯಕ್ಷೆ ಪುಷ್ಪಾ ಗೌಡರ್,ಸದಸ್ಯ ಕೆ.ಜಿ.ನಾಗರಾಜ,ತಹಸೀಲ್ದಾರ ಡಿ.ಜಿ.ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here