ಬರಗಾಲದ ಮಧ್ಯೆ ಅದ್ಧೂರಿ ಜನಪರ ಉತ್ಸವ ಕಾರ್ಯಕ್ರಮ

0
47

ಸರಕಾರ, ಜಿಲ್ಲಾಡಳಿತದ ವಿರುದ್ಧ ಜನರ ಅಸಮಾಧಾನ
ಭರಮಗೌಡಾ ಪಾಟೀಲ
ಬೆಳಗಾವಿ 23: ಒಂದು ಕಡೆ ಬರಗಾಲದ ಛಾಯೆಯಿಂದ ಜಿಲ್ಲೆಯ ಜನ, ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ. ಮತ್ತೊಂದು ಕಡೆ ಸರಕಾರ ಜನಪರ ಉತ್ಸವ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.!
ಈ ವರ್ಷ ಸಕಾಲಕ್ಕೆ ಮುಂಗಾರು ಮತ್ತು ಹಿಂಗಾರು ಮಳೆಯಾಗದ ಪರಿಣಾಮ ಕಳೆದ 45 ವರ್ಷಗಳಲ್ಲಿ ಅನುಭವಿಸಿದ ಬರಗಾಲದ ಛಾಯೆ ಆವರಿಸಿದ್ದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಧನ ಕರುಗಳಿಗೆ ಮೇವಿನ ಸಮಸ್ಯೆ ಉದ್ಬವವಾಗುತ್ತಿದ್ದರು ಸರಕಾರ ಬೆಳಗಾವಿ ನಗರದಲ್ಲಿ 70 ಲಕ್ಷ ರೂ ವೆಚ್ಚದಲ್ಲಿ ಇದೇ 26 ರಿಂದ 28 ವರೆಗೆ 3 ದಿನಗಳ ಕಾಲ ಜನಪರ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸಿರುವುದಕ್ಕೆ ಜಿಲ್ಲೆಯ ಜನರು ಸರಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಮೊದಲು ಜನರ ಉತ್ಸವ ಸಮಸ್ಯೆಗೆ ಸ್ಪÀಂಧಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಲಿ. ಭೀಕರ ಬರಗಾಲದಿಂದ ರಾಜ್ಯದ ರೈತರು ಮತ್ತು ಜನಸಮಾನ್ಯರು ಅನೇಕ ಸಂಕಷ್ಟಗಳನ್ನು ಎದರುಸುತ್ತಿರುವಾಗ ಇಂತಹ ಸಂಭ್ರಮದ ಕಾರ್ಯಕ್ರಮ ಆಯೋಜನೆ ಮಾಡಿರುವ ಸರಕಾರದ ಕ್ರಮ ಸರಿಯಲ್ಲ. ರಾಜ್ಯದ ಜನರ ಸಮಸ್ಯೆ ಪರಿಹಾರ ಕಂಡುಕೊಂಡು ಇನೂ ಇಂತಹ ಅನೇಕ ಉತ್ಸವಗಳನ್ನು ಸರಕಾರ ಹಮ್ಮಿಕೊಳ್ಳಬಹುದಾಗಿತ್ತು. ಕಳೆದ 8 ವರ್ಷಗಳಲ್ಲಿ ಕೋಲಾರ, ಧಾರವಾಡ ಸೇರಿದಂತೆ ರಾಜ್ಯದ ಅನೇಕ ಕಡೆ 7 ಬಾರಿ ಜನಪರ ಉತ್ಸವ ಕಾರ್ಯಕ್ರಮ ನಡೆಸಲಾಗಿದೆ. ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಛಾಯೇ ಆವರಿಸಿದ್ದರಿಂದ ಮುಂದಿನ ವರ್ಷ ಇನ್ನಷ್ಟೂ ಅದ್ಧೂರಿಯಾಗಿ ಕಾರ್ಯಕ್ರಮ ಏರ್ಪಡಿಸಿದ್ದರೆ ಚೆನ್ನಾಗಿರತ್ತಿತು ಎನ್ನಿಸುತ್ತದೆ.
ಈಗಾಗಲೇ ಜಿಲ್ಲೆಯ 65 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂಬರುವ ಏಪ್ರಿಲ್ ಹಾಗೂ ಮೇ ತಿಂಗಳಿನ ದಿನಗಳಲ್ಲಿ ಮಳೆಯಾಗದಿದ್ದರೆ ಜಿಲ್ಲೆಯ 300 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆಯುಂಟಾಗುವ ಸಾಧ್ಯತೆ ಕಂಡು ಬರುತ್ತಿದೆ.
ರಾಜ್ಯದಲ್ಲಿ ಭೀಕರ ಬರಗಾಲ ಇರುವುದರಿಂದ ಗ್ರಾಮೀಣ ಭಾಗದ ಜನರ ಸ್ಥಿತಿ ಹೇಳತೀರದ್ದಾಗಿದೆ. ಅದರಲ್ಲೂ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕಿನಲ್ಲಿ ಜನ-ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುದರಿಂದ ಸರಕಾರ ಜನರ ನೀರಿನ ದಾಯ ತೀರಿಸಲು ಕ್ರಮಕೈಗೊಳ್ಳುವ ಬದಲು ಜನಪರ ಉತ್ಸವಕ್ಕೆ ಆಯೋಜಿಸಿ ಕೇಲ ಸಮುದಾಯದ ಜನರನ್ನು ತೃಪ್ತಿಪಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ರಾಜ್ಯ ಸರಕಾರದ ನಡೆಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭೀಕರ ಬರದಿಂದ ರಾಜ್ಯದ ಜನತೆ ತತ್ತರಿಸಿ ಹನಿ ನೀರಿಗೂ ತತ್ವಾರ ಪಡುತ್ತಿರುವ ಸಂದರ್ಭದಲ್ಲಿ ಎದುರಾದಾಗ ಕೇವಲ ಮೂರು ದಿನದ ಈ ಕಾರ್ಯಕ್ರಮಕ್ಕೆ ಬರೊಬ್ಬರಿ 70 ಲಕ್ಷ ರೂ ಖರ್ಚು ಮಾಡಿ ಸರ್ಕಾರ ಹಣ ಪೋಲು ಮಾಡಲಾಗುತ್ತಿವೆ ಎಂಬುವ ಮಾತುಗಳು ಸದ್ಯ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ.
ಬರಗಾಲ ಎಂಬುದು ಕೇವಲ ಸಿಮಿತ ವರ್ಗದ ಜನರಿಗೆ ಮಾತ್ರ ತಟ್ಟಿಲ್ಲ, ಭೀಕರ ಬರಗಾಲ ಪರಸ್ಥಿತಿ ಎಂಬುದು ಎಲ್ಲ ಜಾತಿ, ಧರ್ಮದವರಿಗೂ ತಟ್ಟಿದೆ. ಎಸ್‍ಸಿಪಿ ಹಾಗೂ ಟಿಎಸ್‍ಪಿ ಅನುಧಾನದಲ್ಲಿ ಜನಪರ ಉತ್ಸವ ಕಾರ್ಯಕ್ರಮ ಏರ್ಪಡಿಸುವುದರ ಬದಲೂ ಈ 70 ಲಕ್ಷ ಅನುಧಾನ ಜೊತೆಗೆ ಇನ್ನಷ್ಟೂ ಅನುಧಾನ ನೀಡಿ ಎಸ್‍ಸಿ, ಎಸ್,ಟಿ ಜನಾಂಗಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು ನಡೆಯತ್ತಿತು ಎಂಬ ಮಾತುಗಳು ಜಿಲ್ಲೆಯಲ್ಲಿ ಕೆಳಿ ಬರುತ್ತಿವೆ.
==>
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾಡಳಿತ ಆಶ್ರಯದಲ್ಲಿ ಬೆಳಗಾವಿ ನಗರದಲ್ಲಿ ಮೂರು ದಿನಗಳ ಕಾಲ ನಡೆಯುವ ಜನಪರ ಉತ್ಸವ ಕಾರ್ಯಕ್ರಮವನ್ನು ಸರಕಾರ ಕಾಟಾಚಾರಕ್ಕೆ ನಡೆಸುತ್ತಿದೆ ಎನ್ನುವಂತಾಗಿದೆ. ರಾಜ್ಯ ಮಟ್ಟದ ಜನಪರ ಉತ್ಸವ ಕಾರ್ಯಕ್ರಮ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಉಮಾಶ್ರಿ ಇನ್ನುಳಿದಂತೆ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ಚಿತ್ರ ಕಲಾ ಹಾಗೂ ಮಣ್ಣಿನಿಂದ ತಯಾರಿಸಿದ ಕಲಾ ಕೃತಿಗಳ ಪ್ರದರ್ಶನದ ಉದ್ಘಾಟನೆ ಹೆಸರುಗಳು ಆಮಂತ್ರಣ ಪತ್ರಿಕೆಯಲ್ಲಿವೆ. ಮುಖ್ಯಮಂತ್ರಿಗಳ ಹಾಗೂ ಇನ್ನುಳಿದ ಯಾವುದೇ ಸಚಿವರ ಹೆಸರುಗಳಿಲ್ಲರುವುದೇ ಸರಕಾರ ಉತ್ಸವ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ನಡೆಸಿ ಕೈ ತೊಳೆದುಕೊಳ್ಳಲ್ಲಿದೆ ಎಂದು ಕಾಣಿಸುತ್ತಿದೆ.

loading...

LEAVE A REPLY

Please enter your comment!
Please enter your name here