ಓದುವ ಹವ್ಯಾಸ ಕಡಿಮೆಯಾಗುತ್ತಿದೆ: ಮಾಚಕನೂರ

0
120

ರಾಮದುರ್ಗ 23: ತಂತ್ರಜ್ಞಾನ ಬೆಳದಂತೆ ಯುವಕರಲ್ಲಿ ಓದುವ ಹವ್ಯಾಸ ಕಡಿಮೆಯಾಗಿರುವುದು ಆತಂಕಕಾರಿ ಸಂಗತಿ. ಕಾರಣ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಪಾಲಕರು ಪುಸ್ತಕಗಳನ್ನು ಅಧ್ಯಯನ ಮಾಡುವಂತೆ ಪ್ರೇರಣೆ ನೀಡಬೇಕೆಂದು ನಿವೃತ್ತ ಶಿಕ್ಷಣ ಆಯುಕ್ತರಾದ ವೆಂಕಟೇಶ ಮಾಚಕನೂರ ಹೇಳಿದರು.
ಸ್ಥಳೀಯ ನೌಕರರ ಸಭಾಭವನದಲ್ಲಿ ಬುಧವಾರ ನಡೆದ ಡಾ. ರಾಮಮನೋಹರ ಲೋಹಿಯಾ 106ನೇ ಜನ್ಮದಿನಾಚರಣೆ ಹಾಗೂ ರಾಮದುರ್ಗ ಸಂಸ್ಥಾನ ವಿಮೋಚನಾ ಹೋರಾಟದ ಭಾವ ಚಿತ್ರಗಳ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಅಧುನಿಕ ದಿನದಲ್ಲಿ ದಿನದಿಂದ ದಿನಕ್ಕೆ ಯುವ ಜನತೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಆದ್ದರಿಂದ ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳವಂತಾ ಕಾರ್ಯವನ್ನು ಪಾಲಕರು ಮಾಡಬೇಕು. ರಾಮದುರ್ಗ ನಗರವು ಇತಿಹಾಸ ಹಿನ್ನಲೆಯನ್ನು ಹೊಂದಿದೆ ಸಂಸ್ಥಾನದ ವಿರುದ್ದ ಹೋರಾಡಿ ಅನೇಕರು ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ, ಅಂತಹ ನನೆಪುಗಳನ್ನು ಮುಂದಿನ ಯುವಪಿಳಿಗೆಗಳಿಗೆ ಇಂದು ಅವಾವರಣ ಮಾಡುವ ಯುವ ಪಿಳಿಗೆಗೆ ತಿಳಿಸುಂತಾ ಕಾರ್ಯವನ್ನು ಹಿರಿಯ ಚಿಂತಕರು ಮಾಡಿದಾಗ ಮಾತ್ರ ನಮ್ಮ ಸಾಹಿತ್ಯ, ಸಂಸ್ಕøತಿ. ಇತಿಹಾಸವನ್ನು ಉಳಿಸಿದಂತಾಗುತ್ತದೆಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಸಿ,ಬಿ ಚಿಕ್ಕನರಗುಂz Àಪ್ರಾಸ್ತಾವಿಕ ನುಡಿ ಮಾತನಾಡಿದ ಅವರು ರಾಮದುರ್ಗ ಸಂಸ್ಥಾನಿಕರು ಬ್ರೀಟಿಷರ ಕೈಗೊಂಬೆಯಂತೆ ಕೆಲಸವನ್ನು ಮಾಡುತ್ತಿದ್ದರು ಅದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದ್ದರಿಂದ. ಮುನವಳ್ಳಿ ವಕೀಲರು, ಮಾಹಾದೇವಪ್ಪ ಪಟ್ಟಣ, ಸೇರಿದಂತೆ ಅನೇಕರ ನೇತೃತ್ವದಲ್ಲಿ ದಂಗೆ ನಡೆಯಿತು ಅದರಲ್ಲಿ 9 ಜನರನ್ನು ಗಲ್ಲಿಗೇರಿಸಲಾಯಿತು ಕಾರಣ ಅತಂಹ ಮಹನೀಯರ ನನೆಪುಗಳನ್ನು ಇಂದು ಹೋರಾಟದ ಭಾವ ಚಿತ್ರಗಳನ್ನು ಅನಾವರಣ ಮಾಡಿದ್ದರಿಂದ ರಾಮದುರ್ಗದ ಇತಿಹಾಸವನ್ನು ಸಾರ್ವಜನಕರಿಗೆ ತಿಳಿಸಿದಂತೆಯಾಗುತ್ತದೆ ಎಂದು ತಿಳಿಸಿದರು.

ಉಪಸ್ಥಿತಿ ಸಾಹಿತಿ ಹಸನ ನಯಿಮ ಸುರಕೋಡ, ಡಾ, ವೈ ಬಿ ಕುಲಗೋಡ, ರಾಜಶೇಖರ ಶಲವಡಿ, ಎಂ ಬಿ ಪಾಟೀಲ. ಬಿ ಬಿ. ಪಾಟೀಲ, ಶಿಕ್ಷಣ ಸಂಯೋಜಕ ಜಿ ಎಂ, ಹುಲ್ಲೂರ ಸೇರಿದಂತೆ ಅನೇಕರು ಭಾಗವಿಸಿದ್ದರು. ಎಚ್ ಪಿ,ಶೇಷಪ್ಪನವರ ನಿರೂಪನೆÀ, ವರದಿ ವಾಚನ. ಸಿ.ಟಿ. ನಡಕಿನಮನಿ ಸ್ವಾಗತಿಸಿದರು,ಸಂತೋಷ ವಾಲಿ ವಂದಿಸಿದರು.

loading...

LEAVE A REPLY

Please enter your comment!
Please enter your name here