ಕನಕಗಿರಿ ಜಾತ್ರಾ ಮಹೋತ್ಸವ: ವಿವಿಧ ಧಾರ್ಮಿಕ ಕಾರ್ಯಕ್ರಮಗಳು

0
150

386986_110328085813958_1265143127_n

550078_110327935813973_1745912315_n

549861_110327542480679_1593098398_n ಕೊಪ್ಪಳ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಗಂಗಾವತಿ ತಾಲೂಕು ಕನಕಗಿರಿಯ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಕನಕಾಚಲ ದೇವಸ್ಥಾನದ ಕನಕಾಚಲ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವವು ಮಾ.21 ರಿಂದ ಏ.3 ರವರೆಗೆ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ವಿವರ ಇಂತಿದೆ. ಮಾ.25 ರಂದು ಸಿಂಹಾರೋಹಣ, ಮಾ.26 ರಂದು ಹನುಮಂತೋತ್ಸವ, ಮಾ.27 ರಂದು ಶೇಷೋತ್ಸವ, ಮಾ.28 ರ ರಾತ್ರಿ ಕಲ್ಯಾಣೋತ್ಸವ(ಗರುಡೋತ್ಸವ), ಮಾ.29 ರಂದು ಗಜೋತ್ಸವ, ಮಾ.30 ರಂದು ಮಹಾರಥೋತ್ಸವ(ತೇರು), ಮಾ.31 ರಂದು ಅಶ್ವಾರೋಹಣ, ಏ.1 ರಂದು ಅವಭೃತಸ್ನಾನ (ಧ್ವಜಾ ಅವರೋಹಣ), ಏ.2 ರಂದು ಪುಷ್ಪಯಾಗ, ಏ.3 ರಂದು ವಿಶ್ರಾಂತಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಕನಕಗಿರಿಯ ಕನಕಾಚಲಪತಿ ದೇವಸ್ಥಾನವು ಪುರಾಣ ಹಾಗೂ ಐತಿಹಾಸಿಕ ಸುಪ್ರಸಿದ್ಧ ಪವಿತ್ರ ಪುಣ್ಯಕ್ಷೇತ್ರವಾದ ಎರಡನೇ ತಿರುಪತಿಯೆನಿಸುತ್ತದೆ. ಕಣ್ಣಿದ್ದವರು ಕನಕಗಿರಿ ನೋಡಬೇಕು ಎಂಬ ವಾಡಿಕೆ ಇದೆ. ಪ್ರತಿ ವರ್ಷದಂತೆ ಈ ವರ್ಷವು ಜಾತ್ರೆಯ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ, ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗಬೇಕು.
ಭಕ್ತಾಧಿಗಳು ದೇವರಿಗೆ ಸಲ್ಲಿಸುವ ಮುಡುಪು, ಬೆಳ್ಳಿ, ಬಂಗಾರ ಹಾಗೂ ವಸ್ತ್ರಾದಿಗಳನ್ನು ಮತ್ತು ಅನ್ನದಾಸೋಹಕ್ಕೆ ಪ್ರತಿ ಅಮವಾಸ್ಯೆಗೆ ದವಸ, ಧಾನ್ಯ, ಪಾತ್ರೆಗಳನ್ನು ಕಾಣಿಕೆ ಸಲ್ಲಿಸಿವವರು ದೇವಸ್ಥಾನದ ಕಾರ್ಯಾಲಯದಲ್ಲಿ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು ಹಾಗೂ ತಮ್ಮ ಭಕ್ತಿಯ ಕಾಣಿಕೆಗಳನ್ನು ದೇವಸ್ಥಾನದ ಹುಂಡಿ(ಕಾಣಿಕೆ ಡಬ್ಬಿ) ಅಥವಾ ಗೋಪಾಳದಲ್ಲಿ ಸಲ್ಲಿಸಬೇಕು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಚಂದ್ರಮೌಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here