ಜಿಲ್ಲೆಯ ಇರ್ವರೂ ಸಂಸದರಿಂದ ನೀರಿನಲ್ಲಿ ರಾಜಕೀಯ

0
61

ಭೀಕರ ಬರಗಾಲದ ಸಮಸ್ಯೆ ಬಗೆಹರಿಸಬೇಕಾದ ಜನಪತ್ರಿನಿಧಿಗಳಿಂದ ಕಾಲಹರಣ

*ಭರಮಗೌಡಾ ಪಾಟೀಲ
ಬೆಳಗಾವಿ 25: ಈ ವರ್ಷ ಸಕಾಲಕ್ಕೆ ಮುಂಗಾರು ಮತ್ತು ಹಿಂಗಾರು ಮಳೆಯಾಗದ ಪರಿಣಾಮ ಕಳೆದ 45 ವರ್ಷಗಳಲ್ಲಿ ಅನುಭವಿಸಿದ ಬರಗಾಲದ ಛಾಯೆ ಜಿಲ್ಲೆಯಲ್ಲಿ ಆವರಿಸಿದ್ದರಿಂದ ಪರಿಣಾಮ ಕುಡಿಯುವ ನೀರು ಮತ್ತು ಧನ ಕರುಗಳಿಗೆ ಮೇವಿನ ಸಮಸ್ಯೆ ಉದ್ಬವವಾಗಿದ್ದರು ಜಿಲ್ಲೆಯ ಇರ್ವರೂ ಪ್ರತಿಷ್ಠಿತ ಜನಪ್ರತಿನಿಧಿಗಳು ನದಿ ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ಜಿಲ್ಲೆಯ ಜನತೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಜಿಲ್ಲೆಯ 65 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂಬರುವ ಏಪ್ರಿಲ್ ಹಾಗೂ ಮೇ ತಿಂಗಳಿನ ದಿನಗಳಲ್ಲಿ ಮಳೆಯಾಗದಿದ್ದರೆ ಜಿಲ್ಲೆಯ 300 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆಯುಂಟಾಗುವ ಸಾಧ್ಯತೆ ಕಂಡು ಬರುತ್ತಿದೆ.
ಜಿಲ್ಲೆಯಲ್ಲಿ ಭೀಕರ ಬರಗಾಲ ಇರುವುದರಿಂದ ಗ್ರಾಮೀಣ ಭಾಗದ ಜನರ ಸ್ಥಿತಿ ಹೇಳತೀರದ್ದಾಗಿದೆ. ಅದರಲ್ಲೂ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ರಾಮದುರ್ಗ ಸೇರಿದಂತೆ ವಿವಿಧ ತಾಲೂಕಿನಲ್ಲಿ ಜನ-ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವದ್ದರಿಂದ ಈಗಾಗಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಹಾಗೂ ಗೋಶಾಲೆಗಳನ್ನು ಪ್ರಾರಂಭಿಸಲಾಗಿದೆ.
ಭೀಕರ ಬರದಿಂದ ಜಿಲ್ಲೆಯ ಜನತೆ ತತ್ತರಿಸಿ ಹನಿ ನೀರಿಗೂ ತತ್ವಾರ ಪಡುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಬ್ಬರೂ ಪ್ರತಿಷ್ಠಿತ ಜನಪ್ರತಿನಿಧಿಗಳಾದ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹಾಗೂ ಚಿಕ್ಕೋಡಿ ಲೋಕಸಭಾ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಕೃಷ್ಣಾ ನದಿಗೆ ನೀರು ಬಿಡಿಸುವ ವಿಷಯದಲ್ಲಿ ರಾಜಕೀಯ ಮಾಡುತ್ತಾ ದಿನಕ್ಕೊಂದು ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಾ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ತಾವೇ ನೀರು ತಂದಂತೆ ಜನರಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ. ಮಹಾರಾಷ್ಟ್ರದಿಂದ ಹರಿಯಬೇಕಾದ ಕೃಷ್ಣಾ ನದಿಗೆ ನೀರು ಯಾರ ಅಪ್ಪನ ಮನೆಯ ನೀರಲ್ಲ, ಅದು ಕರ್ನಾಟಕ ಪಾಲಿನ ನೀರು ಪ್ರತಿ ವರ್ಷ ಮಹಾರಾಷ್ಟ್ರದಿಂದ ಮಾರ್ಚ, ಏಪ್ರಿಲ್, ಮೇ ತಿಂಗಳಗಳಲ್ಲಿ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಬರಬೇಕಾದ ಪಾಲನು ಮಹಾರಾಷ್ಟ್ರ ಸರಕಾರ ಬಿಡುಗಡೆಗೊಳಿಸಿದೆ ಹೊರೆತು ಹೆಚ್ಚುವರಿಯಾಗಿ ನೀರು ಹರಿಸಿಲ್ಲ ಎಂಬುದನ್ನು ಇಬ್ಬರೂ ಜವಾಬ್ದಾರಿ ಸಂಸದರು ತಮ್ಮ ಜವಾಬ್ದಾರಿಯನ್ನು ಮರೆತು ಹೇಳಿಕೆ ನೀಡುತ್ತಿದ್ದಾರೆಂದು ಪ್ರಜ್ಞಾವಂತ ನಾಗರೀಕರು ಮಾತನಾಡಿಕೊಳ್ಳುತ್ತಿದ್ದಾರೆ.
ಬರಗಾಲ ಎಂಬುದು ಕೇವಲ ಸಿಮಿತ ವರ್ಗದ ಜನರಿಗೆ ಮಾತ್ರ ತಟ್ಟಿಲ್ಲ, ಭೀಕರ ಬರಗಾಲ ಪರಿಸ್ಥಿತಿ ಎಂಬುದು ಎಲ್ಲ ಜಾತಿ, ಧರ್ಮದವರಿಗೂ ತಟ್ಟಿದೆ. ಭೀಕರ ಬರಗಾಲದ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ಮಾಡಬೇಕಾದ ಜನಪ್ರತಿನಿಧಿಗಳು ನದಿ ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ಮಾತ್ರ ಜಿಲ್ಲೆಯ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕಾದ ಇರ್ವರೂ ಸಂಸದರು ಪತ್ರಿಕಾ ಹೇಳಿಕೆ ನೀಡುತ್ತಾ ಕಾಲಹರಣ ಮಾಡುತ್ತಿರುವುದನ್ನು ಬಿಟ್ಟು ಭೀಕರ ಬರಗಾಲದ ಸಮಸ್ಯೆಯ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು ಕುಡಿಯುವ ನೀರಿಗೆ ಇನಷ್ಟು ಅನುಧಾನ ಬಿಡುಗಡೆ ಮಾಡಿಸುವುದು ಅವಶ್ಯವಾಗಿದೆ.
==>
ಸಂಸದ ಪ್ರಕಾಶ ಹುಕ್ಕೇರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರಿಗೆ ಚಿಕ್ಕೋಡಿ ತಾಲೂಕಿನ ಮೇಲೆ ಇರುವ ಪ್ರೀತಿ ಮತ್ತೊಂದು ತಾಲೂಕಿನ ಮೇಲೆ ಎಕಿಲ್ಲ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ. ಇವರಿಬ್ಬರಿಗೂ ತಮ್ಮ ಸ್ವಗ್ರಾಮಗಳಾದ ಅಂಕಲಿ ಹಾಗೂ ಏಕ್ಸಂಬಾ ಗ್ರಾಮಗಳ ಜನರ ಸಮಸ್ಯೆ ಮುಖ್ಯವಾಗಿದೆ ಹೊರೆತು ಇನ್ನೊಂದು ತಾಲೂಕಿನ ಅಥವಾ ಗ್ರಾಮಗಳ ನೀರಿನ ಸಮಸ್ಯೆ ಅರ್ಥವಾಗಿಲ್ಲ ಎಂಬುದಕ್ಕೆ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸುವ ಪ್ರಯತ್ನ ಮಾಡಿದ ಇವರು ಭೀಕರ ಬರಗಾಲದ ಛಾಯೇಯಿಂದ ಹುಕ್ಕೇರಿ ತಾಲೂಕಿನ 40 ಗ್ರಾಮಗಳು ಹಿರಣ್ಯಕೇಶಿ ನದಿ ನೀರನ್ನು ಅವಲಂಭಿಸಿವೆ. ಮಹಾರಾಷ್ಟ್ರದಿಂದ ಹಿರಣ್ಯಕೇಶಿ ನದಿಗೆ ಚಿತ್ರಿ ಜಲಾಶಯದಿಂದ ನೀರು ಹರಿಸುವ ಪ್ರಯತ್ನ ಮಾಡಬೇಕಾಗಿತ್ತು ಏಕೆ ಮಾಡಿಲ್ಲ ಎಂಬ ಪ್ರಶ್ನೆ ಹುಕ್ಕೇರಿ ತಾಲೂಕಿನ ಜನತೆಯಲ್ಲಿ ಉದ್ಭವಿಸಿದೆ.
==>
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಬಿಡುಗಡೆಯಾಗಿರುವ ನೀರು ನದಿಯ ದಡೆಯ ಕೊನೆಯ ಗ್ರಾಮಗಳಿಗೂ ತಲುಪÀಬೇಕಾದ ಸಮಯದಲ್ಲಿ ತಮ್ಮ ಒಡೆತನದ ಕಾರ್ಖಾನೆಗಳಿಗೆ ನೀರು ಬೇಕಾದ ಹಿನ್ನಲ್ಲೆಯಲ್ಲಿ ಕೃಷ್ಣಾ ನದಿಯ ನದಿಯ ನೀರು ಇನ್ನು ಚಿಕ್ಕೋಡಿ ತಾಲೂಕಿನಿಂದ ಮುಂದೆ ಹರಿದಿಲ್ಲವೆಂಬುದು ಸಾಕ್ಷಿಯಾಗಿದೆ.
==>
ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡಿಸುವಲ್ಲಿ ಪ್ರಕಾಶ ಹುಕ್ಕೇರಿ ಹಾಗೂ ಡಾ.ಪ್ರಭಾಕರ ಕೋರೆ ಅವರ ಮಧ್ಯೆದಲ್ಲಿ ರಾಜಕೀಯ ಕಿತ್ತಾಟ. ಆನರ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಜಾತಿ ರಾಜಕಾರಣ, ಚಿಕ್ಕೋಡಿ ತಾಲೂಕಿನ ತಮ್ಮ ಸ್ವಗ್ರಾಮಗಳ ಮೇಲಿರುವ ಪ್ರೀತಿ, ಪ್ರೋತ್ಸಾಹ ಮತ್ತೊಂದು ತಾಲೂಕಿನ ಮೇಲಿಲ್ಲ, ಮತ್ತೊಂದು ತಾಲೂಕಿನ ಜನ ತಮ್ಮ ವಿರುದ್ಧ ಎಲ್ಲಿ ಹೋರಾಟ ಮಾಡುತ್ತಾರೆಂದು ಸಂಸದ ಪ್ರಕಾಶ ಹುಕ್ಕೇರಿ ಬಿಜೆಪಿ ಪಕ್ಷದಲ್ಲಿ ಎನ್ನಾದರಾಗಲಿ ತಾವು ತಮ್ಮ ಪಕ್ಷದ ಜನರ ಸಮಸ್ಯೆಗಳನ್ನು ಮರೆತು ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಕೋರೆ ಅವರು ದೆಹಲಿಯಲ್ಲಿ ಲಿಂಗಾಯತ ಸಂಸದರ ಸಭೆ ನಡೆಸುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರೆಂದು ಅವರ ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
==>
ಕೃಷ್ಣಾ ನದಿಗೆ ಹರಿದಿರುವ ನೀರು ಯಾರ ಅಪ್ಪನ ಮನೆಯ ನೀರಿಲ್ಲ, ಅದು ನಮ್ಮ ಪಾಲಿನ ನೀರು ನಮ್ಮಗೆ ಬಿಟ್ಟಿದ್ದಾರೆ. ನಾವು ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯಗಳಿಂದ ಆಂದ್ರ ಮತ್ತು ತೆಲಗಾಣ ರಾಜ್ಯಗಳಿಗೆ ಬಿಡಬೇಕಾದ ನೀರಿನ ಪಾಲನ್ನು ಬಿಡಲೆಬೇಕು. ಕೃಷ್ಣಾ ನದಿಗೆ ನೀರು ಬಿಡಿಸಿದ್ದು ನಾನು, ತಾನು ಎಂಬ ಜನರ ಧಿಕ್ಕು ತಪ್ಪಿಸುವ ಹೇಳಿಕೆಯನ್ನು ಬಿಟ್ಟು ಭೀಕರ ಬರಗಾಲ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಇಬ್ಬರೂ ಜವಾಬ್ದಾರಿ ಸಂಸದರು ಮಾಡಬೇಕಾಗಿದೆ.
ಸುರೇಂದ್ರ ಉಗಾರೆ
ಕರ್ನಾಟಕ ಪ್ರಜಾ ವೇದಿಕೆ ರಾಜ್ಯಾಧ್ಯಕ್ಷರು.

loading...

LEAVE A REPLY

Please enter your comment!
Please enter your name here