ನಾಡು, ನುಡಿ ರಕ್ಷಣೆಗೆ ಸದಾ ಸಿದ್ದ : ಟೊಪಣ್ಣವರ

0
75

ಬೈಲಹೊಂಗಲ 01: ಕನ್ನಡ ನಾಡು ನುಡಿ ರಕ್ಷಣೆ, ಜಲದ ವಿಷಯ ಬಂದಾಗ ಯಾವುದೇ ಹೋರಾಟಕ್ಕೆ ಸದಾ ಸಿದ್ದವೆಂದು ಕರ್ನಾಟಕ ನವ ನಿರ್ಮಾಣ ಪಡೆ ಸಂಸ್ಥಾಪಕ ರಾಜೀವ ಟೋಪಣ್ಣವರ ಹೇಳಿದರು.
ಅವರು ಸಮೀಪದ ಹೊಳಿಹೊಸೂರ ಗ್ರಾಮದಲ್ಲಿ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಕನ್ನಡ ಭಾಷೆಗೆ ವಿಶೇಷ ಸ್ಥಾನ ಮಾನವಿದೆ. ಗಡಿ ಭಾಗದಲ್ಲಿ ಅನ್ಯ ಭಾಷಿಕರು ಅನಗತ್ಯವಾಗಿ ಖ್ಯಾತೆ ತೆಗದು ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ನವ ನಿರ್ಮಾಣ ಪಡೆ ಕನ್ನಡಪರ ಹೋರಾಟದ ಸಂಘಟಣೆಯಾಗಿದ್ದು, ನಾಡು, ನುಡಿ, ಜಲದ ಬಗ್ಗೆ ಯಾವುದೇ ಹೋರಾಟಕ್ಕೆ ಸದಾ ಸಿದ್ದವಿದೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳ ಕುರಿತು ಹೋರಾಟ ಮಾಡಲು ಕರ್ನಾಟಕ ನವ ನಿರ್ಮಾನ ಪಡೆಯ ಶಾಖೆಗಳನ್ನು ಗ್ರಾಮಗಳಲ್ಲಿ ತೆರೆಯುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಜನರ ನೋವುಗಳನ್ನು ಆಲಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡಲಾಗುವದು ಅಲ್ಲದೆ ಗ್ರಾಮೀಣ ಜನರಿಗೆ ಸರ್ಕಾರದ ಯೋಜನೆಗಳನ್ನು ಮುಟ್ಟಿಸುವ ಪ್ರಯತ್ನ ಮಾಡಲಾಗುವದು ಎಂದರು.
ಹೊಳಿಹೊಸೂರ ಶಾಖೆಯ ಅಧ್ಯಕ್ಷ ಬೈಲಪ್ಪ ಹಾವನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪಾಧ್ಯಕ್ಷ ಈರಣ್ಣ ಗದ್ದಿಹಳ್ಳಿ, ರವಿ, ಹಾವನ್ನವರ, ಮಂಜುನಾಥ ಬಡಿಗೇರ, ವಿಕ್ರಮ ಹಾಲಗಿಮರ್ಡಿ, ನಾಗರಾಜ ಮಾಸ್ತಹೊಳಿ, ರುದ್ರಪ್ಪ ಕಲಾರಕೊಪ್ಪ, ಗಜಾನನ ಪೂಜೇರಿ, ಈರಣ್ಣ ಸೊಪ್ಪಿಮಠ, ಫಕೀರಪ್ಪ ಆಲದಕಟ್ಟಿ, ರವಿ ತುರಮರಿ, ಬಸವರಾಜ ಮಾಟೊಳ್ಳಿ, ನಾಗರಾಜ ಹಂಪಣ್ಣವರ, ದೇಮಪ್ಪ ಘೋಡಗೇರಿ, ಬಸವರಾಜ ರೊಟ್ಟಿ ಹಾಗೂ ಗ್ರಾಮಸ್ಥರು ಇದ್ದರು.

loading...

LEAVE A REPLY

Please enter your comment!
Please enter your name here