ಸಚಿವ ದೇಶಪಾಂಡೆಯವರ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ

0
22

ದಾಂಡೇಲಿ : ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ರವಿವಾರ ಬೆಳ್ಳಂ ಬೆಳಗ್ಗೆ ನಗರ ಸಭೆಯ ಆಶ್ರಯದಲ್ಲಿ ನಗರದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ನೇತೃತ್ವದಲಿ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಮುಂಜಾನೆಯೆ ಬಸ್ ನಿಲ್ದಾಣದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರ ಸಭಾ ಸದಸ್ಯರುಗಳು, ನಗರ ಸಭೆಯ ಅಧಿಕಾರಿಗಳು, ವಿವಿಧ ಶಾಲಾ/ಕಾಲೇಜಿನ ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಜಮಾಯಿಸಿದ್ದರು. ಸಚಿವ ದೇಶಪಾಂಡೆಯವರು ಆಗಮಿಸುತ್ತಿದ್ದಂತೆಯೆ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕೈಗೆ ಗ್ಲೌಸ್ ಧರಿಸಿ, ಕೈಯಲ್ಲಿ ಪೊರಕೆ ಹಿಡಿದ ಸಚಿವ ದೇಶಪಾಂಡೆ ನೇರವಾಗಿ ಸ್ವಚ್ಚತೆಗಿಳಿದು ತಮ್ಮ ಜೊತೆ ತಮ್ಮ ಬೆಂಬಲಿಗರಲ್ಲದೇ, ವಿವಿಧ ಇಲಾಖೆಗಳ ಅಧಿಕಾರಿಗಳ ಕೈಗೂ ಪೊರಕೆ ಕೊಡಿಸಿ ಸ್ವಚ್ಚಗೊಳಿಸಲು ನಗು ನಗುತ್ತಲೇ ಆದೇಶಿಸಿ ಸ್ವಚ್ಚತೆಯ ಜಾಗೃತಿ ಮೂಡಿಸಿದರು. ಹೀಗೆ ಮುಮದುವರಿದ ಸ್ವಚ್ಚತಾ ಕಾರ್ಯದ ನಡುವೆ ಸ್ಥಳೀಯವಾಗಿರುವ ಸಮಸ್ಯೆಗಳನ್ನು ಪರಿಶೀಲಿಸಲು ಸಚಿವ ದೇಶಪಾಂಡೆ ಮುಂದಾದರು.

ಮೊದಲಿಗೆ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಬಗ್ಗೆ ಮಾಹಿತಿ ಪಡಕೊಂಡು ನವೀಕರಣಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದರು. ಬಸ್ ನಿಲ್ದಾಣದ ಪಕ್ಕದಲ್ಲಿರುವ ಆಟೋ ನಿಲ್ದಾಣಕ್ಕೆ ಸ್ವಾಗತಗೋಪುರ ನಿರ್ಮಾಣದ ಕುರಿತಂತೆ ಆಟೋ ಚಾಲಕರ ಸಂಘದ ಅಧ್ಯಕ್ಷ ಬಾಬಾಜಾನ ಅವರ ಜೊತೆ ಚರ್ಚಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸ್ಥಳದಲ್ಲೆ ಆದೇಶಿಸಿದರು. ಬಸ್ ನಿಲ್ದಾಣದ ಪಕ್ಕದಲ್ಲಿರುವ ಖಾಲಿ ಜಾಗೆಯನ್ನು ಉದ್ಯಾನವನ ಅಥವಾ ಅಗತ್ಯ ಮೂಲಸೌಕರ್ಯ ನಿರ್ಮಾಣಕ್ಕೆ ಉಪಯೋಗಿಸಲು ಯೋಗ್ಯ ಕ್ರಮ ಕೈಗೊಳ್ಳಬೇಕೆಂದು ಎಸಿಎಫ್ ಬಾಲಕೃಷ್ಣ ಮತ್ತು ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಸೂಚಿಸಿದರು. ಜೆ.ಎನ್.ರಸ್ತೆ ಶೌಚಾಲಯ ನವೀಕರಣ ಮತ್ತು ಜೆ.ಎನ್.ರಸ್ತೆಯಿಂದ ಬರ್ಚಿಗೆ ಪರ್ಯಾಯ ರಸ್ತೆ ನಿರ್ಮಾಣದ ಕುರಿಂತೆ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆ, ಉಪಾಧ್ಯಕ್ಷ ಆಷ್ಪಾಕ ಶೇಖ, ಸ್ಥಾಯಿ ಸಮಿತಿ ಅಧ್ಯಕ್ಷ ಅಡಿವೆಪ್ಪ ಭದ್ರಕಾಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಮಾಜಿ ನಗರ ಸಭೆಯ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರು, ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ವೆರ್ಣೇಕರ, ಲಯನ್ಸ್ ಕ್ಲಬಿನ ಹಿರಿಯ ಸದಸ್ಯ ಯು.ಎಸ್.ಪಾಟೀಲ, ಕೆ.ಎಸ್.ಆರ್.ಟಿ.ಸಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ರಾಥೋಡ, ರೋಟರಿ ಕ್ಲಬಿನ ಹಿರಿಯ ಸದಸ್ಯ ಆರ್.ಪಿ.ನಾಯ್ಕ, ಕಾಂಗ್ರೆಸ್ ಮುಖಂಡರುಗಳಾದ ಆದಂ ದೇಸೂರ, ರಾಧಾಕೃಷ್ಣ ಕನ್ಯಾಡಿ, ದೇವಿದಾಸ ಥಾಮ್ಸೆ, ವಿಶ್ವನಾಥ ಕಲ್ಗುಟ್ಕರ, ಬಂಗೂರನಗರ ಪದವಿ ಕಾಲೇಜಿನ ಉಪನ್ಯಾಸಕ ಡಾ:ಬಿ.ಎಲ್.ಗುಂಡೂರ, ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ:ನಾಸೀರ ಜಂಗುಬಾಯಿ, ನಗರ ಸಭೆಯ ಸದಸ್ಯರುಗಳು, ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here