ಮಹಾದಾಯಿ ನೀರಿನ ಸಮಸ್ಯೆ ಇಡೇರಿಸದ ಸರ್ಕಾರ: ವಿವಿಧಡೆ ಮುಂದೆವರೆದ ಧರಣಿ

0
53


ನರಗುಂದ : ಮಹದಾಯಿ ನದಿ ನೀರಿನ ಕೂಗು ಸರ್ಕಾರಗಳ ಕಿವಿಗೆ ಬಿದ್ದರೂ ಸಹಿತ ಸುಮ್ಮನೆ ಕುಳಿತುಕೊಂಡ ರಾಜಕೀಯನಾಯಕರ ವರ್ತನೆಯನ್ನು ರೈತರು ಹಿಗ್ಗಾ-ಮುಗ್ಗಿ ಟೀಕಿಸುವಂತಾಗಿದೆ. ರೈತರ ಕೂಗು ಇನ್ನೂ ಹೆಚ್ಚಾಗಬೇಕು. ಅಂದಾಗ ಸರ್ಕಾರಗಳು ಕಣ್ಣು ತೆರೆಯುತ್ತವೆ. ಈಗಾಗಲೇ ಉತ್ತರ ಕರ್ನಾಟಕದ ವಿವಿಧ ಕಡೆಗಳಲ್ಲಿ ನಡೆದ ಧರಣಿ ಕೆಲವೊಂದು ಪ್ರದೇಶಗಳಲ್ಲಿÂ ಹಿಂತೆಗದುಕೊಂಡಿರುವುದು ರೈತರ ಮನೋಭಾವ ಸರಿಯಲ್ಲ. ರೈತರ ಏಳಿಗಾಗಿಯೇ ಈ ಹೋರಾಟದ ಧರಣಿ ನಡೆದಿದೆ. ನಮ್ಮ ಪಾಲಿನ ನಮ್ಮ ನೀರನ್ನು ನಾವು ಪಡೆಯಲು ಹೋರಾಟ ಮುಂದುವರೆದಿದೆ. ಇದು ಪ್ರಜಾಪ್ರಭುತ್ವದ ಕಾನೂನಡಿಯಲ್ಲಿ ನಡೆದಿರುವ ಹೋರಾಟ. ಬಂಡಾಯದ ಈ ನೆಲದಲ್ಲಿ ನಡೆದಿರುವ ಧರಣಿ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾದ ಬುದ್ದಿಯನ್ನು ಜನಪ್ರತಿನಿಧಿಗಳಿಗೆ ಕಲಿಸಿಕೊಡಲಿದೆ ಎಂದು ಕಿತ್ತೂರಿನ ರೈತ ಮುಖಂಡ ಸೋಮಶೇಖರ ಸೊಗಲದ ಇಂದಿಲ್ಲಿ ತಿಳಿಸಿದರು.
ಮಹದಾಯಿ ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ಮಂಗಳವಾರ ನಡೆದ ಧರಣಿ 265 ನೇ ದಿನಕ್ಕೆ ಕಾಲಿರಿಸಿದ್ದು ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನಾಡಿದ ಮೂಲ ಉಧ್ಯೋಗ ಒಕ್ಕಲುತನವಾಗಿದೆ. ಶೇ. 70 ರಷ್ಟು ಒಕ್ಕಲುತನದ ಉಧ್ಯೋಗ ಮಾಡುವ ರೈತರ ಬೇಡಿಕೆ ಈಡೇರಿಸದೇ ಹೋದಲ್ಲಿ ಆಯ್ಕೆಗೊಂಡು ಕಳಿಸಿದ ರಾಜಕೀಯದವರ ಮೂಲ ಉದ್ದೇಶಗಳೇನು ಎಂದು ರೈತರು ಇಂದು ಪ್ರಶ್ನಿಸುವಂತಾಗಿದೆ. ಮಹದಾಯಿ ನದಿ ನೀರಿನ ವಿಷಯದಲ್ಲಿ ಇದುವರೆಗೂ ಈ ವಿವಾದ ಜೀವಂತವಿರಿಸಿ ರೈತರನ್ನು ಯಾಮಾರಿಸುವ ಕೆಲಸವನ್ನು ಕೈಬಿಟ್ಟು ರಾಜಕಾರಣಿಗಳು ಇನ್ನು ಮುಂದೆ ರೈತರ ಅನುಕೂಲತೆಗೆ ಶ್ರಮಿಸಬೇಕು. ನೀರು ಕೊಡುವುದು ರಾಜಕೀಯದವರ ಧರ್ಮ. ಆದರೆ ಇದನ್ನು ಪರಿಪಾಲಿಸದೇ ಹೋದಲ್ಲಿ ಪ್ರಜಾಪ್ರಭುತ್ವದ ಅನತಿಯಂತೆ ರೈತರಿಗೆ ಹೋರಾಟವೇ ಮುಖ್ಯ ಕೆಲಸವಾಗಬೇಕಿದೆ ಎಂದು ಅವರು ತಿಳಿಸಿದರು.
ಡಾ. ಎಚ್.ಆರ್. ಹಿರೇಹಾಳ ಮಾತನಾಡಿ, ಚಳವಳಿಗಳ ಸ್ವರೂಪವನ್ನು ಒಮ್ಮೆ ಸರ್ಕಾರಗಳು ತುಲನೆ ಮಾಡಿ ನೋಡಬೇಕು. ಸ್ವಾತಂತ್ರ ಪಡೆಯಲು ಬ್ರಿಟೀಷರ ವಿರುದ್ದ ಅನೇಕ ದಿನಗಳವರೆಗೆ ಗಾಂಧಿಜೀಯವರ ಶಾಂತಿ ಮಂತ್ರದ ಹೋರಾಟದ ಫಲವಾಗಿ ಮುಂದೆ ಬ್ರೀಟಿಷರು ಈ ದೇಶವನ್ನು ಬಿಟ್ಟು ಹೊರನಡೆದರು. ಹಾಗೆಯೇ ಈಗಿನ ಮಹದಾಯಿ ನದಿ ನೀರಿಗಾಗಿ ನಮ್ಮ ರಾಜಕಾರಣಿಗಳನ್ನೇ ಎಚ್ಚರಿಸುವ ಕೆಲಸವನ್ನು ರೈತರು ಮಾಡುತಿದ್ದಾರೆ. ಈ ಹೋರಾಟವೀಗ ಅತೀ ಸಣ್ಣ ವಿಷಯವಾಗಿ ಪರಿಗಣಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಈ ಧರಣಿಯಿಂದ ರಾಜಕೀಯದವರು ಬಹುದೊಡ್ಡ ಪಾಠಕಲಿಯಬೇಕಾದೀತು. ನರಗುಂದದಲ್ಲಿಯ ರೈತರ ಧರಣಿಯಿಂದ ಸರ್ಕಾರಗಳು ಈಗೀಗ ಸ್ವಲ್ಪ ಬಿಸಿ ಮುಟ್ಟಿ ಮಹದಾಯಿ ನೀರಿನ ವಿಷಯವನ್ನು ಪ್ರಮುಖ ಚರ್ಚಿತವಿಷಯವನ್ನಾಗಿ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಶ್ರಮ ರಾಜಕಾರಣಿಗಳಿಂದ ಮುಂದುವರೆಯಬೇಕಿದೆ. ಆದಕಾರಣ ರಾಜಕಾರಣಿಗಳು ಎಚ್ಚರಿಕೆ ಹೆಜ್ಜೆ ಇಡಬೇಕಾಗಿರುವುದು ಮಹತ್ವದ ಸಂಗತಿ ಎಂದು ತಿಳಿಸಿದರು.
ಎಸ್.ಬಿ. ಜೋಗಣ್ಣವರ ಮಾತನಾಡಿ, ನಮ್ಮ ನೀರಿನ ಪಾಲು ನಮಗೆ ಕೊಡಿಸಲು ರಾಜಕಾರಣಿಗಳು ಮುಂದಾಗಬೇಕು. ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ರೈಲು ರೋಖೊ ಚಳವಳಿಯನ್ನು ಮಹದಾಯಿ ನದಿ ನೀರಿಗಾಗಿ ನಡೆಸಿದ್ದರಿಂದ ಮುಖ್ಯಮಂತ್ರಿಗಳು ಎಚ್ಚರಗೊಂಡು ಸರ್ವಪಕ್ಷ ನಿಯೋಗದ ಸಭೆಯನ್ನು ಹೇಳಿದಂತೆ ಮಾಡಿ ಪೂರ್ಣಗೊಳಿಸಿದ್ದಾರೆ. ಪ್ರಧಾನಿಗಳ ಬಳಿ ನಿಯೋಗದಲ್ಲಿ ತೆರಳಿ ಮಹದಾಯಿ ಕಳಸಾ ಬಂಡೂರಿ ಕುರಿತು ಚರ್ಚಿಸುವ ನಿರ್ಣಯವನ್ನು ಕಾಂಗ್ರೆಸ್ ಸರ್ಕಾರ ವಿಧಾನಮಂಡಳದಲ್ಲಿ ನಿರ್ಣಯಿಸಿ ಪ್ರಧಾನಿಗಳಿಗೆ ತಲುಪಿಸಿದೆ. ಈ ನಿರ್ಣಯದಂತೆ ನಿಯೋಗ ಆದಷ್ಟು ಶೀಘ್ರ ಪ್ರಧಾನಿಗಳ ಬಳಿ ಹೋಗಿ ಚರ್ಚಿಸಿ ವಿವಾದ ಪರಿಹಿರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಅಗತ್ಯವೆಂದು ಅವರು ಹೇಳಿದರು.
ಚಂದ್ರಗೌಡ ಪಾಟೀಲ ಮಾತನಾಡಿದರು. ಧರಣಿಯಲ್ಲಿ ವಿರುಪಾಕ್ಷಪ್ಪ ಯಳ್ಳೂರ, ವಿಶ್ವನಾಥ ಗೋಖಲೆ, ವಿಠಲ ಜಾಧವ, ಡಿ.ಎಂ. ನಾಯ್ಕರ್, ವೀರಬಸಪ್ಪ ಹೂಗಾರ, ಬಸವರಾಜ ಹೆಬ್ಬಾಳ, ಪರಶುರಾಮ ಜಂಬಗಿ,ಶ್ರೀಶೈಲ ಮೇಟಿ, ಶಿವಪ್ಪ ಕುರಹಟ್ಟಿ, ಪುಂಡಲೀಕಪ್ಪ ಯಾದವ, ಚಂದ್ರಣ್ಣ ಮುದಕಣ್ಣವರ, ವಿಜಯಕುಮಾರ ಹೂಗಾರ, ನಿಂಗಪ್ಪ ಗುಡದನ್ನವರ, ವೀರಣ್ಣ ಗಡಗಿ, ಹನುಮಂತ ಕೋರಿ, ಯಲ್ಲಪ್ಪ ಗುಡದರಿ. ಚನಬಸ್ಸು ಹುಲಜೋಗಿ, ಬಸಪ್ಪ ಮೊರಬದ, ವೀರಣ್ಣ ಸೊಪ್ಪಿನ, ಹನುಮಂತ ಸರನಾಯ್ಕರ್, ಭೀಮಪ್ಪ ದಿವಟಗಿ, ಬಸನಗೌಡ ಪರ್ವತಗೌಡ್ರ, ವಾಸು ಚವ್ಹಾಣ, ಕಾಡಪ್ಪ ಕಾಕನೂರ ಅನೇಕ ರೈತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here