ವಿದ್ಯುತ್ ದರ ಏರಿಕೆ ಕೈಬಿಡುವಂತೆ ವೆಲ್ಫೇರ್ ಪಾರ್ಟಿ ಆಗ್ರಹ

0
34


ಭಟ್ಕಳ : ರಾಜ್ಯದಲ್ಲಿ ಏರಿಕೆಯಾಗಿರುವ ವಿದ್ಯುತ್ ದರವನ್ನು ಕೈಬಿಡುವಂತೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರಕನ್ನಡ ಜಿಲ್ಲಾ ಘಟಕವು ಸರ್ಕಾರವನ್ನು ಆಗ್ರಹಿಸಿದ್ದು ಈ ಕುರಿತಂತೆ ಮಂಗಳವಾರ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಉತ್ತರಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಖತೀಬ್ ರಾಜ್ಯದ ಹಲವು ಜಿಲ್ಲೆಗಳು ಬರದಿಂದ ತತ್ತರಿಸಿಹೊಗಿದ್ದು ಸರ್ಕಾರ ಈಗ ಮತ್ತೇ ವಿದ್ಯುತ್ ದರ ಏರಿಕೆ ಮಾಡುವುದರ ಮೂಲಕ ಬಡಜನರ ಮೇಲೆ ಪ್ರಹಾರ ಮಾಡುತ್ತಿದೆ ಇದನ್ನು ವೆಲ್ಫೇರ್ ಪಾರ್ಟಿ ತೀವ್ರವಾಗಿ ಖಂಡಿಸುತ್ತಿದ್ದು ಕೂಡಲೆ ಸರ್ಕಾರ ತನ್ನ ಕ್ರಮದಿಂದ ಹಿಂದಕ್ಕೆ ಸರಿಯಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಉತ್ತರಕನ್ನಡ ಜಿಲ್ಲಾದ್ಯಂತ ವಿದ್ಯುತ್ ಪದೇ ಪದೇ ಕೈಕೊಡುತ್ತಿದ್ದು ಜನರು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ. ಏರುತ್ತಿರುವ ಬಿಸಿಲಿಗೆ ಬಸವಳಿದು ಹೋಗಿರುವ ಜನತೆ ಹೆಸ್ಕಾಂ ನ ಪದೇ ಪದೇ ವಿದ್ಯುತ್ ಕಡಿತಕ್ಕೆ ರೋಸಿಹೋಗಿದ್ದಾರೆ. ಜನರು ಬೀದಿಗಿಳಿದು ಹೋರಾಟ ಮಾಡುವುದಕ್ಕೆ ಮೊದಲು ಎಚ್ಚೆತ್ತುಕೊಂಡು ವಿದ್ಯುತ್ ಕಡಿತವನ್ನು ನಿಲ್ಲಿಸಬೇಕೆಂದು ಅವರು ಹೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದ ಅವರು ಹೊತ್ತುಗೊತ್ತಿಲ್ಲದೆ ಹಗಲು ಕೂಡ ಬೀದಿ ದೀಪ ಉರಿಯುತ್ತಿದ್ದು ಇದರಿಂದಾಗಿ ಲಕ್ಷಾಂತರ ಯುನಿಟ್ ವಿದ್ಯುತ್ ಪೋಲಾಗುತ್ತಿದೆ. ಪುರಸಭೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿನ ಬೀದಿ ದೀಪಗಳು ಇನ್ನೂ ಹಳೆಯ ಕಾಲದ ಟ್ಯೂಬ್ ಲೈಟ್, ಮಕ್ರ್ಯುರಿ ಲೈಟ್ ಗಳನ್ನು ಅಳವಸಿಕೊಳ್ಳಲಾಗಿದೆ ಇದನ್ನು ಕೈಬಿಟ್ಟು ಎಲ್.ಇ.ಡಿ.ಬಲ್ಬ್ ಗಳನ್ನು ಅಳವಡಿಸಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು. ವಿದ್ಯುತ್ ಕಂಪನಿಗಳ ಜನವಿರೋಧಿ ನೀತಿಯನ್ನು ವೆಲ್ಫೇರ್ ಪಾರ್ಟಿ ಇಂಡಿಯಾ ಬಲವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಮುಹಮ್ಮದ್ ಯುನೂಸ್ ರುಕ್ನಿದ್ದೀನ್ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಖಮ್ರುದ್ದೀನ್ ಮಷಾಯಿಕ್, ಅಜ್ಮಲ್ ಹಾಜಿಫಕ್ಕಿ, ಡಾ.ನಸೀಮ್ ಖಾನ್, ಫಾರೂಖ್ ದಾಮ್ದಾ, ಮಾಸ್ಟರ್ ಫಾರೂಖ್ ಶೇಖ್, ಮುತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here