ಪಿಯು ಉಪನ್ಯಾಸಕರಿಂದ ಧರಣಿ ಸತ್ಯಾಗ್ರಹ

0
13

ಬೆಳಗಾವಿ 09: ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇತನ ತಾರತಮ್ಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕರ ಸಂಘ ಮತ್ತು ಬೆಳಗಾವಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕಳೆದ 22 ವರ್ಷಗಳಿಂದ ಇಲ್ಲಿಯವರೆಗೂ ಯಾವುದೇ ಸರಕಾರಗಳು ಈ ವೇತನ ತಾರತಮ್ಯ ಸಮಸ್ಯೆಯ ನಿವಾರಣೆಗಾಗಿ ಯಾವುದೇ ರೀತಿಯ ಸರಿಯಾದ ಕ್ರಮ ತೆಗೆದುಕೊಳ್ಳದಿರುವುದು ಕಾರಣವಾಗಿದೆ. ರಾಜ್ಯಾದ್ಯಂತ 46 ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಿ ಮುಷ್ಕರಕ್ಕೆ ಇಳದಿರುವುದು ಸರಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 3 ರಿಂದ ಆರಂಭವಾಗ ಮೌಲ್ಯಮಾಪನ ಬಹಿಷ್ಕಾರ ಮುಷ್ಕರವನ್ನು ಇಂದಿನ ಸರಕಾರವು ಅರಿತಿದ್ದರೂ, ಯಾವುದೇ ರೀತಿಯ ಸರಿಯಾದ ನಿರ್ಣಯ ಕೈಗೊಳ್ಳುವಲ್ಲಿ ಮೀನಾಮೇಷ ಎಣಿಸುತ್ತಿದೆ. ಸರಕಾರ ತಕ್ಷಣ ವೇತನ ತಾರತಮ್ಯ ನೀತಿಯನ್ನು ಬಗೆಹರಿಸಬೇಕು ಎಂದು ಸತ್ಯಾಗ್ರಹಿಗಳು ಆಗ್ರಹಿಸಿದ್ದಾರೆ.
ಕಾಶಿನಾಥ ಮೆಲೆದ, ಎಸ್.ಬಿ.ದೊಡಮನಿ, ಶ್ರೀಕಾಂತ ಶಾನವಾಡ, ಆರ್.ಜಿ.ಮಠ, ಅಪ್ತಾಬ ಭಾಯಿ, ಚಂದ್ರಶೇಖರ ಹಂಚಿನಮನಿ, ಶ್ಯಾಂಪ್ರಸಾದ ಕೆ. ಸೇರಿದಂತೆ ಮುಂತಾದವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here