ಎಲ್‍ಐಸಿಯಲ್ಲಿ ಹೂಡುವ ಹಣಕ್ಕೆ ಭದ್ರತೆಯಿದೆ

0
59


ಸಿದ್ದಾಪುರ : ಭಾರತೀಯ ಜೀವವಿಮಾ ನಿಗಮದ ಬಂಡವಾಳವು ದೇಶದಲ್ಲಿಯ ನೀರಾವರಿ, ರಸ್ತೆ,ಬಂದರು, ಸೇತುವೆ, ರೈಲ್ವೆಯಂತಹ ಕಾರ್ಯಯೋಜನೆಗಳಲ್ಲಿ ಹೂಡಿಕೆಯಾಗುತ್ತದೆ ಎಂದು ನಿಗಮದ ಶಿರಸಿ ಶಾಖೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಶಿವಶರಣ ಹೇಳಿದ್ದಾರೆ. ಅವರು ತಾಲೂಕಿನ ಜಿಡ್ಡಿಯ ಸರಕಾರಿ ಪ್ರೌಢಶಾಲೆಯನ್ನು ವಿಮಾಶಾಲೆಯೆಂದು ಘೋಷಿಸಿ ನಿಗದಿತ ಮೊಬಲಗಿನ ಸಹಾಯಧನದ ಚೆಕ್‍ಅನ್ನು ಶಾಲೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು. ಎಲ್‍ಐಸಿಯಲ್ಲಿ ಹೂಡುವ ಹಣಕ್ಕೆ ಭದ್ರತೆಯಿದೆ. ಜನರೇ ಸೃಷ್ಟಿಸಿರುವ ಹಣಕಾಸು ಬಂಡವಾಳವು ದೇಶದ ಪ್ರಗತಿಗೆ ಮೂಲಧನವಾಗಿ ಬಳಕೆಯಾಗುವುದರಿಂದ ಪ್ರತಿಯೊಬ್ಬರೂ ನಿಗಮದೊಂದಿಗೆ ಕೈಜೋಡಿಸಬೇಕೆಂದು ಅವರು ಕೋರಿಕೊಂಡರು.
ನಿಗಮದ ಸಿದ್ದಾಪುರ ಸಂಪರ್ಕ ಶಾಖೆಯ ಪ್ರಧಾನ ವ್ಯವಸ್ಥಾಪಕ ಎಫ್.ಎಲ್.ಫರ್ನಾಂಡೀಸ್ ಮಾತನಾಡಿ ವಿಮಾ ಗ್ರಾಮ,ವಿಮಾ ಶಾಲೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದರಿಂದ ಆಯಾ ಭಾಗಗಳ ಜನರಿಗೆ ವಿಮಾ ರಕ್ಷೆಯ ಜೊತೆಯಲ್ಲಿ ನಿಗಮ ನೀಡುವ ಪ್ರೋತ್ಸಾಹ ಧನದಿಂದ ಅವಶ್ಯವುಳ್ಳ ಅಭಿವೃದ್ಧಿ ಕಾರ್ಯ ನಡೆಸಬಹುದು. ಆದುದರಿಂದ ಈ ಕುರಿತು ಜನರ ಸಹಭಾಗಿತ್ವ ಅಗತ್ಯ ಎಂದರು.
ಅತಿಥಿಗಳಾಗಿ ಪ್ರಭಾರ ಮುಖ್ಯಾಧ್ಯಾಪಕ ರವಿಕುಮಾರ ಎಚ್.ಆರ್., ಅಧ್ಯಕ್ಷರಾಗಿ ಎಸ್‍ಡಿಎಂಸಿ ಉಪಾಧ್ಯಕ್ಷ ತಿಮ್ಮಪ್ಪ ಕಟ್ಯನ್ ಪಾಲ್ಗೊಂಡಿದ್ದರು. ಚೇರ್ಮನ್ ಕ್ಲಬ್ ಸದಸ್ಯ ಶ್ರೀಧರ ಕೆ.ಎಂ. ಪಾಲ್ಗೊಂಡಿದ್ದರು. ವಿಶ್ವನಾಥ ಗೌಡ ಸ್ವಾಗತಿಸಿದರು. ಚಂದ್ರಶೇಖರ ನಿರ್ವಹಿಸಿದರು. ಮಂಜುನಾಥ ವಂದಿಸಿದರು

loading...

LEAVE A REPLY

Please enter your comment!
Please enter your name here