ಭಾರತೀಯ ಸಂಸ್ಕøತಿ ಯುವಜನಾಂಗಕ್ಕೆ ಮೂಡಿಸುವದು ಅವಶ್ಯವಾಗಿದೆ : ಆನಂದ ಗುರುಜಿ

0
98

ಬೈಲಹೊಂಗಲ : ಸಾಮಾಜಿಕ ಕಳಕಳಿ ಮೂಡಿಸುವ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಜೀ ಕನ್ನಡ ವಾಹಿಣಿ ಖ್ಯಾತಿಯ ಮಹರ್ಷಿ ಆನಂದ ಗುರುಜೀ ಹೇಳಿದರು.
ಅವರು ಪಟ್ಟಣದ ಮುರಗೋಡ ರಸ್ತೆಯಲ್ಲಿರುವ ದುರ್ಗಾದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಸಂಸ್ಕøತಿ ಮತ್ತು ಪರಂಪರೆಯನ್ನು ಯುವ ಜನಾಂಗಕ್ಕೆ ಮೂಡಿಸುವದು ಅತ್ಯವಶ್ಯವಾಗಿದೆ. ಭಾರತೀಯ ಸನಾತನ ಸಂಸ್ಕøತಿಯಲ್ಲಿ ಭಗವಂತನ ಆರಾಧನೆಗೆ ಮಹತ್ತರವಾದ ಸ್ಥಾನ ನೀಡಲಾಗಿದೆ. ಇದರಿಂದ ವಿಶ್ವದ ಜನತೆ ಶಾಂತಿ ಬಯಸಿ ಭಾರತದ ಕಡೆಗೆ ನೋಡುವಂತಾಗಿದೆ. ಮನುಷ್ಯ ತನ್ನ ಸೇವೆಯಲ್ಲಿ ಪ್ರಾಮಾಣಿಕತೆಯನ್ನು ಬೆಳೆಸಿಕೊಂಡು ಗುರು ಹಿರಿಯರನ್ನು ಗೌರವದಿಂದ ನೋಡಿ, ಕಾಯಕವೇ ಕೈಲಾಸ ಎಂದು ಬದುಕಿದರೆ ಜೀವನದಲ್ಲಿ ಶಾಂತಿ, ಸುಖ ಸಮೃದ್ದಿ ಪ್ರಾಪ್ತಿಯಾಗುತ್ತದೆ ಎಂದರು.
ಕುಂದರಗಿಯ ಅಮರಸಿದ್ದೇಶ್ವರ ಸ್ವಾಮಿಜಿ ಮಾತನಾಡಿದರು. ಹಿರೇಮುನವಳ್ಳಿಯ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಜಿ, ಶಾಖಾಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು.
ಪುರಸಭೆ ವಿರೋಧ ಪಕ್ಷದ ನಾಯಕ ಮಹಾಂತೇಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಮಹಾಂತೇಶ ಶಾಸ್ತ್ರೀ ಆರಾದ್ರಿಮಠ, ಜಿಪಂ ಸದಸ್ಯರಾದ ಶಂಕರ ಮಾಡಲಗಿ, ಅನೀಲ ಮ್ಯಾಕಲಮರಡಿ, ರೋಹಿಣಿ ಪಾಟೀಲ, ಮಂಜುಳಾ ಬೈರಣ್ಣವರ, ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಉಪಾಧ್ಯಕ್ಷ ಉಳವಪ್ಪ ಬಡ್ಡಿಮನಿ, ವಕೀಲ ಮಹಾಂತೇಶ ಮತ್ತಿಕೊಪ್ಪ, ತಾಪಂ ಸದಸ್ಯ ಜಗದೀಶ ಬೂದಿಹಾಳ, ಮುರುಗೇಶ ಗುಂಡ್ಲೂರ, ಸುಭಾಷ ತುರಮರಿ, ರಾಜು ಕುಡಸೋಮಣ್ಣವರ, ಬಾಬುಸಾಬ ಸಂಗೊಳ್ಳಿ ಮುಂತಾದವರು ಇದ್ದರು.
ಆನಂದ ಗುರುಜಿಯವರನ್ನು ಕಿತ್ತೂರ ರಾಣಿ ಚನ್ನಮ್ಮ ಸಮಾಧಿ ಸ್ಥಳದಿಂದ ಭವ್ಯ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು.
ಇದೇ ಸಂದರ್ಭದಲ್ಲಿ ಸಿಯಾಚಿನ ಹಿಮಪಾತದಲ್ಲಿ ಹುತಾತ್ಮನಾದ ವೀರ ಯೋಧ ಹಣುಮಂತಪ್ಪ ಕೊಪ್ಪದ ಪತ್ನಿ ಹಾಗೂ ಅವರ ತಾಯಿಯನ್ನು ಸತ್ಕರಿಸಲಾಯಿತು.
ಚಂದ್ರಕಾಂತ ಕಾರಜೋಳ ನಿರೂಪಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here