ಕರ್ನಾಟಕ ನವ ನಿರ್ಮಾಣ ಪಡೆ ಶಾಖೆ ಉದ್ಘಾಟನೆ

0
64

ಬೈಲಹೊಂಗಲ :ಕನ್ನಡ ನಾಡು ನುಡಿ ರಕ್ಷಣೆಯಲ್ಲಿ ಕನ್ನಡಪರ ಸಂಘಟಣೆಗಳ ಪಾತ್ರ ಹಿರಿದಾದ್ದು ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಅವರು ಸಮೀಪದ ಕಾಗಿಹಾಳ ತಾಂಡೆಯಲ್ಲಿ ಕರ್ನಾಟಕ ನವ ನಿರ್ಮಾಣ ಪಡೆ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಗಡಿ ಭಾಗದಲ್ಲಿ ಪರ ಭಾಷಿಕರು ಹೆಚ್ಚಾಗುತ್ತಿರುವದರಿಂದ ಕನ್ನಡ ಭಾಷೆ ಮರೆಮಾಚಿದಂತಾಗುತ್ತಿದೆ. ಕನ್ನಡ ಪರ ಸಂಘಟಣೆಗಳು ನಾಡಿನ ಪ್ರತಿಯೊಬ್ಬರಿಗೆ ಕನ್ನಡ ಸಾಹಿತ್ಯ ಇತಿಹಾಸದ ಕುರಿತು ಜಾಗೃತಿ ಮೂಡಿಸುವದಾಗಬೇಕು. ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಸರ್ಕಾರದ ಮಹತ್ತರ ಯೋಜನೆಗಳನ್ನು ಜನತೆಗೆ ನೇರವಾಗಿ ಮುಟ್ಟಿಸುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.
ಈಲ್ಲಾ ಉಪಾಧ್ಯಕ್ಷ ಮಹಾಂತೇಶ ತುರಮರಿ, ಸಂಘಟಣಾ ಕಾರ್ಯದರ್ಶಿ ರವಿ ತುರಮರಿ ಮಾತನಾಡಿ, ನಮ್ಮ ಸಂಘಟಣೆಯನ್ನು ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಶಾಖೆಗಳನ್ನು ತೆರೆಯುತ್ತಿದ್ದು, ಇಲ್ಲಿನ ಯುವಕರೊಂದಿಗೆ ನಾಡಿನೆಲ್ಲೆಡೆ ಕನ್ನಡದ ಕಂಪು ಬೀರುವದಲ್ಲದೆ ಸರ್ಕಾರದಿಂದ ನಿರ್ಗತಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ನೇರವಾಗಿ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.
ವೇದಿಕೆ ಮೇಲೆ ಬೈಲಹೊಂಗಲ ತಾಲೂಕಾ ಅಧ್ಯಕ್ಷ ಶಿವಾನಂದ ಇಂಚಲ, ಜಿಪಂ ಸದಸ್ಯೆ ಮಂಜುಳಾ ಬೈರಣ್ಣವರ, ತಾಪಂ ಸದಸ್ಯ ಜಗದೀಶ ಬೂದಿಹಾಳ, ಶಾಖೆಯ ಅಧ್ಯಕ್ಷ ತಾರೆಪ್ಪ ಲಮಾಣಿ, ರಮೇಶ ಕಾರಬಾರಿ, ಪುಂಡಲಿಕ ಲಮಾಣಿ ಇದ್ದರು.
ಈ ಸಂದರ್ಭದಲ್ಲಿ ಶಿವಪ್ಪ ಲಮಾಣಿ, ಕರೆಪ್ಪ ಲಮಾಣಿ, ಗಣೇಶ ಲಮಾಣಿ, ತುಳಜಪ್ಪ ಲಮಾಣಿ, ವಿಷ್ಣು ಲಮಾಣಿ, ರತ್ನಪ್ಪ ಲಮಾಣಿ ಹಾಗೂ ನೂರಾರು ಕಾರ್ಯಕರ್ತರು ಇದ್ದರು.

loading...

LEAVE A REPLY

Please enter your comment!
Please enter your name here