ಕಾಲುವೆಗೆ ನೀರು ಬಿಡಲು ಮನವಿ

0
39

ಬೆಳಗಾವಿ 13: ಚಿಕ್ಕೋಡಿ ಸಿಬಿಸಿ ಕಾಲುವೆಗೆ ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡುವಂತೆ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಬುಧವಾರ ರೈತರು, ಗ್ರಾಮಸ್ಥರು ಪ್ರಾದೇಶಿಕ ಆಯುಕ್ತ ಎನ್.ಜಯರಾಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಸದ ಪ್ರಕಾಶ ಹುಕ್ಕೇರಿ ಅವರು ಮಾತನಾಡಿ. ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಕಬ್ಬೂರ, ಕೆರೂರು, ಜೋಡಕುರಳಿ, ಹಿರೇಕುಡಿ, ಬಸನಾಳಗಡ್ಡೆ, ನಾಗರಾಳ, ಶಿರಗಾಂವ, ನೇಜ, ಚಿಕ್ಕಲವಾಳ, ಖಡಕಲಾಟ ಹಾಗೂ ರಾಯಭಾಗ ತಾಲೂಕಿನ ನಂದಿಕುರಳಿ ಇವೇ ಮುಂತಾದ ಗ್ರಾಮಗಳಲ್ಲಿ ಕೊಳವೆ ಭಾವಿಗಳು ಬತ್ತಿ ಹೋಗಿ, ಅಂತರಜಲ ಮಟ್ಟವೂ ಸಹ ಕಡಿಮೆಯಾಗಿ ಬೀಕರ ಬರಗಾಲ ಛಾಯೆ ಆವರಿಸಿದ್ದು, ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಹಿಡಕಲ್ ಜಲಾಶಯದಿಂದ ಚಿಕ್ಕೋಡಿ ಸಿಬಿಸಿ ಕಾಲುವೆಗೆ ನೀರು ಬಿಡುಗಡೆ ಮಾಡುವುದು ಅತೀ ಅವಶ್ಯವಿರುವುದರಿಂದ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದಂತೆ ಮೂರು ಹಂತಗಳಲ್ಲಿ ಚಿಕ್ಕೋಡಿ ಸಿಬಿಸಿ ಕಾಲುವೆಗೆ ಹಿಡಕಲ್ ಜಲಾಶಯದಿಂದ 1.5 ಟಿಎಮ್‍ಸಿ ನೀರು ಹರಿಸಲು ಉದ್ದೇಶಿಸಲಾಗಿರುವ ಹಿನ್ನಲೆಯಲ್ಲಿ ಈಗ ಕೊನೆಯ ಹಂತವಾಗಿ ಚಿಕ್ಕೋಡಿ ಸಿಬಿಸಿ ಕಾಲುವೆಗೆ ಹಿಡಕಲ್ ಜಲಾಶಯದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪ್ರತಿ ದಿವಸ 500 ಕ್ಯೂಸೆಕ್ಸ್‍ನಂತೆ 15 ದಿನಗಳ ಕಾಲ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದಂತೆ ನೀರನ್ನು ಬಿಡುವಂತೆ ಪ್ರಾದೇಶಿಕ ಆಯುಕ್ತರನ್ನು ಪ್ರಕಾಶ ಹುಕ್ಕೇರಿ ವಿನಂತಿಸಿದರು. ಈ ಸಂದರ್ಭದಲ್ಲಿ ನೂರಾರು ಜನರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here