ಸಮಾಜದ ಸಮಾನತೆಗಾಗಿ ಸಂವಿಧಾನ ರಚನೆ: ಶಾಸಕ ದೊಡ್ಡನಗೌಡ ಪಾಟೀಲ

0
61


ಕುಷ್ಟಗಿ 14: ಸಮಾಜದಲ್ಲಿನ ಮೇಲು ಕೀಳು, ಬೇಧ ಭಾವ, ಮೇಲುಜಾತಿ ಕೀಳು ಜಾತಿ ಎಂಬ ಅಸಮಾನತೆಯನ್ನು ಹತ್ತಿಕ್ಕುವದಕ್ಕಾಗಿಯೇ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದರು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ತಹಶೀಲ ಕಛೇರಿಯ ಆವರಣದಲ್ಲಿ ತಾಲೂಕಾ ಆಡಳಿತ ಹಾಗೂ ತಾಲೂಕ ಪಂಚಾಯತ್ ಕುಷ್ಟಗಿ ಇವರ ಸಂಯುಕ್ತ ಆಶ್ರದಲ್ಲಿ ಡಾ|| ಬಿ.ಆರ್.ಅಂಬೇಡ್ಕರವರ 125 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಅಂಬೇಡ್ಕರ ಅವರು ಈ ದೇಶದ ಮಹಾನ್ ವ್ಯಕ್ತಿ ದೀನ ದಲಿತರ, ಹಿಂದುಳಿದವರ, ಸಮಾನತೆಗಾಗಿ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ. ಅಂತವರ ಜನ್ಮ ದಿನಾಚರಣೆ ಮಾಡುವದು ನಮ್ಮೆಲ್ಲರ ಆಧ್ಯ ಕರ್ತವ್ಯ. ಅಂಬೇಡ್ಕರ ಅವರು ಮಿಸಲಾತಿ ನೀಡದೆ ಇದ್ದಿದ್ದರೆ ಮಹಿಳೆರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಅಧಿಕಾರ ಅನುಭವಿಸಲು ಸಾಧ್ಯವಗುತ್ತಿರಲಿಲ್ಲ. ಅವರ ಜ್ಷಾನ ಸಂಪಾದನೆಯಿಂದ ದೇಶ ಪ್ರಗತಿಯ ಹಾದಿಯಲ್ಲಿದೆ ಎಂದರೆ ತಪ್ಪಾಗಲಾರದು. ಅಂಬೇಡ್ಕರ ಹಿಂದುಳಿದ ಜನಾಂಗದಲ್ಲಿ ಜನಸಿದರೂ ಶಿಕ್ಷಣದಿಂದ ಜ್ಷಾನ ಸಂಪಾದನೆ ಮಾಡಿ ಈಡಿ ದೇಶಕ್ಕೆ ಚಿರಪರಿತರಾದರು. ಪ್ರತಿಯೊಬ್ಬರು ಇಂತವರ ಆಚರಣೆಯಲ್ಲಿ ಪಾಲ್ಗೊಂಡು ಅವರಿಗೆ ಗೌರವ ಸಲ್ಲಿಸುವದು ನಮ್ಮಗಳ ಕರ್ತವ್ಯ. ಈ ಕಾರ್ಯಕ್ರಮದಲ್ಲಿ ಅಧಿಕಾರಿ ವರ್ಗದವರು ಮತ್ತು ಜನತೆಯು ಅಲ್ಪ ಪ್ರಮಾಣದಲ್ಲಿರುವದನ್ನು ಕಂಡರೆ ನೋವಿನ ಸಂಗತಿ. ಮುಂದಿನ ದಿನಮಾನದಲ್ಲಿ ಯಾವುದೆ ಮಹಾನ್ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಒಟ್ಟಾರೆ ಎಲ್ಲಾ ಸಮುದಾಯದವರು ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ತಹಶೀಲ್ದಾರ ವೇದವ್ಯಾಸ ಮುತಲಿಕ ಮಾತನಾಡಿ ಶಿಕ್ಷಣದ ಬುನಾದಿ ಇದ್ದರೆ ಸಮಜದಲ್ಲಿ ಸಂಘಟನೆ, ಸಾಮಥ್ರ್ಯ ತಾನಗೆ ಬರುತ್ತದೆ. ಶಿಕ್ಷಣವೆ ಎಲ್ಲದಕ್ಕೂ ಅಡಿಪಾಯ ಎಂದರು.
ಉಪನ್ಯಾಸ ನೀಡಿದ ಬಿ.ಎಂ. ಕಂಬಳಿ ಜನ್ಮ ದಿನಾಚರಣೆಯಲ್ಲಿ ಕುಣಿದು ಕುಪ್ಪಳಿಸಿ ವರ್ಷಪೂರ್ತಿ ಮರೆತು ಬಿಡುವದಲ್ಲ. ಅಂಬೇಡ್ಕರ ಅವರ ಹಾಗೆ ಸಮಾಜದ ಕಟ್ಟ ಕಡೆಯ ಜನತೆಯ ಸಮಾನತೆಗಾÀಗಿ ಸತತ ಶ್ರಮಿಸಿ ಮೇಲೆತ್ತುವ ಕೆಲಸವಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲೇಶ್ ಬಿ. ತಾಳದ್ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಮಹೇಶ್, ವಿಜಯ ನಾಯಕ, ವಿಜಯಲಕ್ಷ್ಮೀ ಪಲ್ಲೇದ್, ಶರಣಮ್ಮ ಜೈನರ, ತಾಲೂಕ ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿ ಪ್ರಭು ಮಾನೆ, ಸಿಪಿ.ಐ. ಗಿರೀಶ್ ಪಂಡು ರೋಡ್ಕರ್, ಸಮಾಜ ಕಲ್ಯಾಣ ಅಧಿಕಾರಿ ಶಿವಣ್ಣ, ಬಿ.ಇ.ಓ. ಎಂ.ಬಿ. ಮುರುಟಿಗಿ, ನೌಕರರ ಸಂಘದ ಅಧ್ಯಕ್ಷ ಗುರಪ್ಪ ಕುರಿ, ಪುರಸಭೆ ಸದಸ್ಯ ಚಂದ್ರಶೇಖರ ಹಿರೇಮನಿ, ಪುರಸಭೆ ವ್ಯವಸ್ಥಾಪಕ ಕತೀಫ್‍ಸಾಬ, ಮುಖಂಡರುಗಳಾದ ಮುದಕಪ್ಪ ಚಲವಾದಿ, ಶಿವಪುತ್ರಪ್ಪ ಗುಮಗೇರಿ, ವಸಂತ ಮೇಲಿನಮನಿ, ಸುಖರಾಜ ತಾಳಕೇರಿ, ಗ್ಯಾನಪ್ಪ ಹಿರೇಮನಿ, ಕೃಷ್ಣಮುರ್ತಿ ಟೆಂಗುಂಟಿ ಹಾಗೂ ಉಂತದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here