ಏಪ್ರೀಲ್ 22,23,24 ರಂದು ಶ್ರೀಕ್ಷೇತ್ರ ಉಳವಿಯಲ್ಲಿ ಐತಿಹಾಸಿಕ “ರಾಷ್ಟ್ರೀಯ ಚೈತನ್ಯ ಶಿಬಿರ”

0
83

ಜೋಯಿಡಾ : “ಅಖಿಲ ಭಾರತ ವೀರಶೈವ ಮಹಾಸಭಾ” ದ ವತಿಯಿಂದ ಬರುವ ಎಪ್ರೀಲ್ 22, 23 ಮತ್ತು 24 ರಂದು ಜೋಯಿಡಾ ತಾಲೂಕಿನ ಶ್ರೀಕ್ಷೇತ್ರ ಉಳವಿಯಲ್ಲಿ ರಾಷ್ಟ್ರ ಮಟ್ಟದ ವೀರಶೈವರ ಮೊಟ್ಟ ಮೊದಲ ಐತಿಹಾಸಿಕ ಕಾರ್ಯಕ್ರಮ “ರಾಷ್ಟ್ರೀಯ ಚೈತನ್ಯ ಶಿಬಿರ-2016” ವನ್ನು ಆಯೋಜಿಸಲಾಗಿದ್ದಾಗಿ ಮಹಾಸಭಾದ ಉಪಾಧ್ಯಕ್ಷರು ಹಾಗೂ ಶಿಭಿರದ ಸಂಚಾಲಕರಾದ ಗುರುರಾಜ ಇ. ಹುಣಸೀಮರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವೀರಶೈವ ಮಹಾಸಭಾದಿಂದ ಇದೇ ಮೊಟ್ಟ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಶಿಬಿರವನ್ನು ಆಯೋಜಿಸಿದ್ದು, ಶಿಬಿರಕ್ಕೆ ಆಂದ್ರಪ್ರದೇಶ, ಮಹಾರಾಷ್ಟ್ರ, ತಮಿಳನಾಡು,ಕೆರಳ ಹಾಗೂ ತೆಲ್ಲಂಗಾಣ ಈ ಐದು ರಾಜ್ಯಗಳಿಂದ ಸುಮಾರು 800 ಕ್ಕೂ ಹೆಚ್ಚು ಪದಾಧಿಕಾರಿಗಳು ಈ ಶಿಬಿರಕ್ಕೆ ಆಗಮಿಸಲಿದ್ದಾಗಿ ತಿಳಿಸಿರುತ್ತಾರೆ.
ವೀರಶೈವ ಲಿಂಗಾಯುತ ಸಮಾಜದ ಸಮಸ್ಯೆ, ಅಭಿವೃದ್ದಿ ಚಿಂತನೆ, ಹಾಗೂ ಸಮಾಜವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಾಜ ಮುಖಿಯಾದ ಚರ್ಚೆನಡೆಯಲಿದ್ದು, ಸರಕಾರದಿಂದ ಸಮಾಜಕ್ಕೆ ಅನುಕೂಲಕರವಾಗುವ ನಿಟ್ಟಿನಲ್ಲಿ ಹೋರಾಟ ಮಾಡುವ ಚಿಂತನೆಕೂಡ ನಡೆಯಲಿದ್ದಾಗಿ ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ಉಧ್ಘಾಟನೆಯನ್ನು ಅ.ಭಾ.ವೀ.ಮಹಾಸಭಾದ ಅಧ್ಯಕ್ಷರಾದ ಡಾ:ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದು, ಅ.ಭಾ.ವೀ.ಮ. ಕರ್ನಾಟಕ ಘಟಕದ ಅಧ್ಯಕ್ಷರು ಹಾಗೂ ಶಿಬಿರದ ಪ್ರಧಾನ ಸಂಚಾಲಕರೂ ಆದ ಎನ್.ತಿಪ್ಪಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ, ಶ್ರೀ ಚೆನ್ನಬಸವೇಶ್ವರ ಟ್ರಷ್ಟಕಮಿಟಿ ಉಳವಿ ಅಧ್ಯಕ್ಷರಾದ ಗಂಗಾಧರ ಕಿತ್ತೂರ, ಅ.ಭಾ.ವೀ.ಮ.ಉಪಾಫಧ್ಯಕ್ಷರಾದ ಮಲ್ಹಾರಿಗೌಡ ಎ.ಪಾಟೀಲ, ಸಂಸದರಾದ ಪ್ರಬಾಕರ್ ಕೋರೆ, ಉಪಸ್ಥಿತರಿರುವರಿದ್ದು, ಶಾಸಕರಾದ ಹಾಗೂ ಅ.ಭಾ.ವೀ.ಮ. ಮಹಾ ಪ್ರ.ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆ ಕಾರ್ಯಕ್ರಮದಲ್ಲಿ ಸ್ವಾಗತದೊಂದಿಗೆ ಪ್ರಸ್ತಾವಿಕ ನುಡಿ ಹೇಳಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲಾ ಅ.ಭಾ.ವೀ.ಮ.ಅಧ್ಯಕ್ಷರಾದ ಶ್ರೀಕಾಂತ ಎಂ. ಹೂಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಅ.ಭಾ.ವೀ.ಮ. ನಿಕಟಪೂರ್ವ ಅಧ್ಯಕ್ಷರಾದ ಡಾ:ಭೀಮಣ್ಣ ಖಂಡ್ರೆ, ಶ್ರೀ ಚೆ.ಬ.ಕ.ಉಳವಿ ಸದಸ್ಯರಾದ ಬಿ.ಸಿ. ಉಪಾಪತಿ, ಅ.ಬಾ.ವೀ.ಮ.ದ ಕಾರ್ಯದರ್ಶಿ ಕೆ.ಎನ್.ಜಯಲಿಂಗಪ್ಪಾ, ಕೋಶಾಧ್ಯಕ್ಷರಾದ ಶ್ರೀಮತಿ ಸನಂದಾ ಗಿರೀಶ್, ಉತ್ತರ ಕನ್ನಡ ಜಿ.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವದೇವ್ ದೇಸಾಯಿ ಸ್ವಾಮಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಇಸ್ರೋದ ಅಧ್ಯಕ್ಷರಾದ ಡಾ:ಎ.ಎಸ್.ಕಿರಣ್‍ಕುಮಾರ್ ರವರನ್ನು ಸನ್ಮಾನಿಸಲಿದ್ದು, ಸಮಾರೋಪದ ಭಾಷಣವನ್ನು ಶಿಬಿರದ ಪ್ರಧಾನ ಸಂಚಾಲಕರಾದ ಎನ್.ತಿಪ್ಪಣ್ಣ ಮಾಡಲಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಈ ರಾಷ್ಟ್ರೀಯ ಚೈತನ್ಯ ಶಿಬಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮೊದಲ ದಿನ ದಿ: 22 ರಂದು ಒಂದು ಮತ್ತು ಎರಡನೇಯ ಅಧಿವೇಶನದಲ್ಲಿ “ಸಂಘಟನೆ ಮತ್ತು ರಾಷ್ಟ್ರೀಯ ಐಕ್ಯತೆ,” ಹಾಗೂ “ದರ್ಶನ” ಕುರಿತ ಉಪನ್ಯಾಸ ನಡೆಯಲಿದ್ದು, ರಾತ್ರಿ ಸಾಂಸ್ಕ್ರತಿಕ ಚೈತನ್ಯ ಕಾರ್ಯಕ್ರಮ ನಡೆಯಲಿದೆ. ದಿ:23 ರ ಮೂರು, ನಾಲ್ಕು ಮತ್ತು ಐದನೇ ಅಧಿವೇಶನದಲ್ಲಿ “ಸಂಘಟನೆಯಲ್ಲಿ ಘಟಕಗಳು, ಮಹಿಳಾ ಮತ್ತು ಯುವ ವಿಭಾಗಗಳ ಸಮನ್ವಯ”, “ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪ್ರಸ್ತುತ ಸವಾಲುಗಳು” ಮತ್ತು ಸಂಘಟನೆ, ಸಂಪನ್ಮೂಲ, ಸಾಮರಸ್ಯ, ಸಮನ್ವಯ” ಎಂಬ ವಿಷಯಗಳ ಕುರಿತು ಉಪನ್ಯಾಸ ನಡೆಯಲಿದ್ದು ರಾತ್ರಿ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. 24 ರ 6 ಮತ್ತ 7ನೇ ಅಧಿವೇಶನದಲ್ಲಿ “ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತುತ ಸವಾಲುಗಳು” :ಸಮಾಜದಲ್ಲಿ ರಾಜಕೀಯ ಸಲ್ಲದು,ರಾಜಕಾರಣದಲ್ಲಿ ಸಮಾಜವಿರಬೇಕು ಎಂಬ ವಿಷಯ ಕುರಿತ ಉಪನ್ಯಾಸ ನಡೆಯಲಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪತ್ರಿಕಾಗೋಷ್ಟಿಯಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಶಿವದೇಸಾಯಿ ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ವಿ.ಎಮ್.ಹಳ್ಳಿ, ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here