ವಿವೇಚನಾ ಕೋಟಾದಡಿ ಚೆಕ್ ವಿತರಣೆ

0
63

ಬೆಳಗಾವಿ 17: ನಗರದ ಎಸ್.ಜಿ ಬಾಳೇಕುಂದ್ರಿ ಸಭಾಭವನದಲ್ಲಿ ದಿ 15 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರವರ 125 ನೇ ಜನ್ಮದಿನ ನಿಮಿತ್ಯ ಡಾ|| ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷರಾದ ಮಲಾಜಮ್ಮಾರವರ ವಿವೇಚನಾ ಕೋಟಾದಡಿ 316 ರ ಜನರಿಗೆ 45.70 ಲಕ್ಷ ಚೆಕ್ ವಿತರಿಸಿದರು.
ಗ್ರಾಮೀಣ ಕಾಂಗ್ರೆಸ್ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ಸುರೇಶ ತಳವಾರವರ ಶಿಫಾರಸ್ಸಿನ ಪ್ರಕಾರ 165 ಪರಿಶಿಷ್ಟ ಜಾತಿ ಮಹಿಳಾ ಸ್ವ-ಸಹಾಯ ಸಂಘದ ಫಲಾನುಭವಿಗಳಿಗೆ ಮೈಕ್ರೋ ಕ್ರೆಡಿಟ್ ಯೋಜನೆಯಡಿ 16,50,000/-ಸಹಾಯಧನ ಹಾಗೂ 82,500/- ಸಾಲ ಒಟ್ಟು 24,75,000/- ಚೆಕ್‍ಗಳನ್ನು ಈ ಸಂದರ್ಬದಲ್ಲಿ ವಿತರಿಸಲಾಯಿತು
ಸುರೇಶ ತಳವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಕಾರ್ಯದರ್ಶಿ ಆನಂದ ಕೆಳಗಡೆ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಮ್.ಸಿ.ಎ.ಎಲ್.ರಾಜ್ಯಾಧ್ಯಕ್ಷ ಎಲ್.ಎನ್.ಮೂರ್ತಿರವರನ್ನು ಜಿಲ್ಲಾ ಘಟಕದ ಪರವಾಗಿ ಸನ್ಮಾನಿಸಲಾಯಿತು. ನಿಗಮದ ವ್ಯವಸ್ಥಾಪಕರಾದ ಕವಿತಾ ವಾರಂಗಲ್ಲ ಸ್ವಾಗತಿಸಿದರು ಎಸ್.ಯು.ಜಮಾದರ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here