ಬಿಎಸ್‍ವೈ ಸಿಎಂ ಆಗುವುದು ಬಿಜೆಪಿಯವರ ಹಗಲುಗನಸು: ಹೆಬ್ಬಾಳಕರ ವ್ಯಂಗ್ಯ

0
45

ಮೋಳೆ 22: ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್.ಯಡಿಯುರಪ್ಪನವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವ ಬಿಜೆಪಿಯವರು ಬಿ.ಎಸ್.ವೈ 2018ರಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆಂಬ ಹಗಲುಗನಸು ಕಾಣುತ್ತಿದ್ದಾರೆಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ವ್ಯಂಗ್ಯವಾಡಿದರು.

ಉಗಾರ ಪುರಸಭೆ, ಐನಾಪೂರ ಹಾಗೂ ಶೇಡಬಾಳ ಪಟ್ಟಣ ಪಂಚಾಯತ ಚುನಾವಣೆಯ ನಿಮಿತ್ಯ ಐನಾಪೂರದಲ್ಲಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿ.ಎಸ್.ವೈ ಮುಖ್ಯಮಂತ್ರಿಯಾಗುತ್ತಾರೆಂಬುದು ಕೇವಲ ಬಿಜೆಪಿಯವರ ಕನಸುಮಾತ್ರ. ಆದರೆ ಅದು ಜನರದಲ್ಲ. ಹೀಗಾಗಿ ಅವರ ಕನಸು ನನಸಾಗದು ಎಂದು ಹೇಳಿದರು.
ಯಡಿಯುರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಚಿವರು ಜೈಲಿಗೆ ಹೋಗಿ ಬಂದವರಾಗಿದ್ದಾರೆ. ಹೀಗಾಗಿ ಬಿ.ಎಸ್.ವೈ ಮತ್ತೋಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆಂದು ಟೀಕಿಸಿದರು.
5 ವರ್ಷಗಳಲ್ಲಿ 3 ಮುಖ್ಯಮಂತ್ರಿಗಳನ್ನು ಮಾಡಿರುವ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದ ಅವರು ಜಾತೀಯ ವಿಷಬೀಜ ಬಿತ್ತಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಜಾತಿಯಿಲ್ಲ, ದೇಶದಲ್ಲಿಂದು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಏಕೈಕ ಕಾಂಗ್ರೆಸ್ ಪಕ್ಷವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನಪರ ಕಾರ್ಯಗಳಿಂದ ಜನಮಾನಸದಲ್ಲಿ ಜನಪ್ರೀಯತೆ ಗಳಿಸಿದ್ದು ಸುಮಾರು ಮುರು ವರ್ಷಗಳ ಕಾಲ ಭ್ರಷ್ಟಾಚಾರರಹಿತ ಆಡಳಿತ ನೀಡಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆಂದು ಲಕ್ಷ್ಮೀ ಹೆಬ್ಬಾಳಕರ ಬಣ್ಣಿಸಿದರು.
ಈ ವೇಳೆ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೀನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ಮುಖಂಡರಾದ ಎಸ್.ಎಂ.ನಾಯಿಕ, ಹರ್ಷದ ಗದ್ಯಾಳ, ರಾಜೇಂದ್ರ ಪೋತದಾರ ರವೀಂದ್ರ ಗಾಣಿಗೇರ, ಸಂಜಯ ಕುಚನೂರೆ ಹಾಜರಿದ್ದರು.

loading...

LEAVE A REPLY

Please enter your comment!
Please enter your name here