ನಾನು ಹುಟ್ಟಿದ ಹೊನ್ನಾವರದ ಬಗ್ಗೆ ಮೋಹವಿದೆ :ಅರವಿಂದಕರ್ಕಿಕೋಡಿ

0
47

ಹೊನ್ನಾವರ : ತಾನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷನಾದರೂ ಹೊನ್ನಾವರ ತನ್ನ ಹುಟ್ಟಿದ ನೆಲ ಎಂಬ ಮೋಹ ಇದೆ. ಆದಕಾರಣ ಇಲ್ಲಿಯ ತಾಲೂಕು ಕಸಾಪ ಘಟಕ ಒಳ್ಳೆ ರೀತಿಯಿಂದ ಕೆಲಸ ಮಾಡಿದರೆ ನನಗೂ ಜಿಲ್ಲಾ ಸಭೆಯಲ್ಲಿ ವಿವಿಧ ತಾಲೂಕುಗಳ ಬಗ್ಗೆ ಚರ್ಚಿಸುವಾಗ ಹೆಮ್ಮೆಯಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದಕರ್ಕಿಕೋಡಿ ಅವರು ಹೇಳಿದರು.
ಅವರು ತಾಲೂಕಿನ ಕರ್ಕಿಯ ಚನ್ನಕೇಶವ ಪ್ರೌಢಶಾಲೆಯ ಸಭಾಭವನದಲ್ಲಿ ಹೊನ್ನಾವರ ತಾಲೂಕು ಕಸಾಪ ಘಟಕದ ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕರೆದ ಸಮಾಲೋಚನ ಸಭೆಯಲ್ಲಿ ಮಾತನಾಡಿ ಆಜೀವ ಸದಸ್ಯರನ್ನು ಗೌರವಪೂರ್ವಕವಾಗಿ ಕಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲರ ಪರಿಷತ್ತನ್ನಾಗಿ ರೂಪುಗೊಳಿಸಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಮಾತನಾಡಿ ಅರವಿಂದಕರ್ಕಿಕೋಡಿ ನೇತೃತ್ವದ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ತುಂಬ ನಿರೀಕ್ಷೆಗಳಿವೆ. ಅವರು ತಾಲೂಕಾ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಭರವಸೆ ಮೂಡಿಸುತ್ತಿದೆಎಂದರು.
ಹಿರಿಯ ಕವಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ ಸಂಘಟನೆಯ ಶಿಸ್ತನ್ನು ಕರಗತ ಮಾಡಿಕೊಂಡ ಅರವಿಂದಕರ್ಕಿಕೋಡಿ ಗೆಳೆಯರನ್ನೆಲ್ಲ ಸೇರಿಸಿಕೊಂಡು, ಎಲ್ಲಆಜೀವ ಸದಸ್ಯರನ್ನೂ ವಿಶ್ವಾಸದಲ್ಲಿಸಿಕೊಂಡು ಯಶಸ್ವಿಯಾಗಿ ಕಸಾಪ ಜಿಲ್ಲಾಘಟಕವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬ ಬಗ್ಗೆ ಅನುಮಾನವಿಲ್ಲ. ಅವರಿಗೆ ಎಲ್ಲರೂ ಬೆಂಬಲಿಸುವುದರ ಮೂಲಕ ಕನ್ನಡದ ಕೆಲಸದಲ್ಲಿ ಪಾಲ್ಗೊಳ್ಳೋಣ ಎಂದರು.
ಹಿರಿಯ ಪತ್ರಕರ್ತಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿಇಂದು ಪಾರದರ್ಶಕ ಆಡಳಿತವೇ ಮರೀಚಿಕೆಯಾಗುತ್ತಿರುವಾಗ ಅರವಿಂದಕರ್ಕಿಕೋಡಿ ಅವರು ಪಾರದರ್ಶಕವಾದ ಕಸಾಪ ಘಟಕವನ್ನು ಕಟ್ಟಿತೋರಿಸುವ ಮಾತನಾಡುತ್ತಿರುವುದರಿಂದ ಎಲ್ಲರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದರು.
ತಾಲೂಕಾ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಡಾ. ಸುರೇಶ ನಾಯ್ಕ ಮತ್ತು ಪ್ರೊ.ನಾಗರಾಜ ಹೆಗಡೆ ಅಪಗಾಲ ಅವರ ಹೆಸರು ಸೂಚಿತವಾದವು. ಎಲ್.ಎಂ.ಹೆಗಡೆ, ಎಂ.ಆರ್.ಹೆಗಡೆ, ಎನ್.ಜಿ.ಭಟ್ಟ ಅವರು ತಾಲೂಕಾಧ್ಯಕ್ಷತೆಗೆ ಮೇಲ್ಕಂಡವರ ಹೆಸರುಗಳನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷ ಅರವಿಂದಕರ್ಕಿಕೋಡಿ ಅವರನ್ನು ಹೊನ್ನಾವರದ ಜನತೆ ಪರವಾಗಿ ಸನ್ಮಾನಿಸಲಾಯಿತು.
ಸಂತಾಪ ಸಭೆ: ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಬಗೆ ಸಂತಾಪ ಸಭೆ ನಡೆಸಿ ಅವರಆತ್ಮಕ್ಕೆ ಶಾಂತಿ ಕೋರಲಾಯಿತು.

loading...

LEAVE A REPLY

Please enter your comment!
Please enter your name here