ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ: ಪಂಚಾಕ್ಷರ ಶ್ರೀಗಳ

0
52

ಯಕ್ಕುಂಡಿ 25: ಸವದತ್ತಿ ತಾಲೂಕಿನ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪ್ರತೀಕವಾದ ಧೂಪದಾಳ ಗ್ರಾಮದ ಬೀರದೇವರ ಜಾತ್ರಾ ಮಹೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹಗಳು ಅತ್ಯಂತ ವೈಭವದಿಂದ ಜರುಗಿದವು. ಬೀರದೇವರ ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ಪ್ರಾರಂಭಗೊಂಡು ಊರಿನ ಪ್ರಮೂಕ ಬೀದಿಗಳಲ್ಲಿ ಸಂಚರಿಸುತ್ತಾ ಸುಮಂಗಲೆಯರ ಕಳಸ ಕನ್ನಡಿ ಆರತಿ ಹಾಗೂ ಅಪಾರ ಜನಸ್ತೊಮದ ಹರ್ಷೊದ್ಗಾರದ ನಡುವೆ ಅತ್ಯಂತ ವಿಜೃಂಭನೆಯಿಂದ ಜರುಗಿತು. ಉತ್ಸವದುದ್ದಕ್ಕೂ ಸುಮಂಗಲೆಯರು ಆರತಿಯೊಂದಿಗೆ ಬರಮಾಡಿಕೂಂಡು ಹಿಂದೂ-ಮುಸ್ಲಿಂ ಸಮಾಜ ಬಾಂದವರು ದೇವರಿಗೆ ಹಣ್ಣು ಕಾಯಿ ಕರ್ಪೂರ ಸಮರ್ಪಿಸಿದರು. ಡೂಳ್ಳು ಮೇಳದವರು, ಬ್ಯಾಂಡ ಕಂಪನಿಯವರು, ಉತ್ಸವಕ್ಕೆ ಮೆರಗು ತಂದು ಕೂಟ್ಟರು.

ಬೀರದೇವರ ದೇವಸ್ಥಾನದಲ್ಲಿ ನಂತರ ಜರುಗಿದ ಧರ್ಮ ಸಬೆ ಹಾಗೂ 15 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನಿದ್ಯವನ್ನು ಯಕ್ಕುಂಡಿಯ ಕುಮಾರೇಶ್ವರ ವಿರಕ್ತಮಠದ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು ವಹಿಸಿ ಮಾತನಾಡಿ ಇವತ್ತಿನ ದಿನಮಾನಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣವನ್ನು ಹಾಕುತ್ತವೆ, ಇದರಿಂದ ಬಡವರ ಆರ್ಥಿಕ ಮಟ್ಟವನ್ನು ಹೆಚ್ಚಿಸುವುದಕ್ಕೆ ಅನಕುಲವಾಗುತ್ತದೆ ಎಂದರು. ಬೀರೇಶ್ವರ ಪುಣ್ಯ ಕ್ಷೇತ್ರದಲ್ಲಿ ನೂತನ ದಂಪತಿಗಳು ನವ ಜೀವನಕ್ಕೆ ಕಾಲಿಟ್ಟಿರುವುದು ಬಹಳ ಅರ್ಥಪೂರ್ಣವಾಗಿದೆ ಮತ್ತು ನವ ದಂಪತಿಗಳು ಜೀವನದಲ್ಲಿ ಶಾಂತಿ ನೆಮ್ಮದಿಯಿಂದ ಸುಖವಾದ ಸಂಸಾರದೊಂದಿಗೆ ಬಾಳಬೆಕೇಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಲಹೊಂಗಲ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಡಾ|| ವ್ಹಿ ಆಯ್ ಪಾಟೀಲ ಅವರು ಮಾತನಾಡಿ ಇವತ್ತಿನ ದಿನಮಾನಗಳಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯವನ್ನು ಕೈಗೊಂಡ ಬೀರದೇವರ ಟ್ರಸ್ಟ ಕಮೀಟಿಯ ಹಿರಿಯರು ಮತ್ತು ಯುವಕರು ಹಾಗೂ ಸಮಾಜದ ಬಾಂದವರು ಮಾಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿ ನೂತನ ವಧು ವರರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೂಪದಾಳ ಗ್ರಾಮದ ಹಿರಿಯರಾದ ಮೋಹನರಾವ ಬಾ ದೇಸಾಯಿ ಹಾಗೂ ಗುರುಪಾದ ಬಾಳಪ್ಪ ಮೇಟಿ ಇವರು ವಹಿಸಿದ್ದರು. ಅತಿಥಿಗಳಾಗಿ ಯಕ್ಕುಂಡಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಿಜಾಮುದ್ದಿನ ಬು ಬಾರಿಗಿಡದ , ಬೈಲಹೊಂಗಲದ ಯುವ ನೇತಾರರಾದ ರಾಜಣ್ಣ ಬರಮಗೌಡರ, ಬಾಬಾಜಾನ ಅ ಜೈಲಾನಿ ಬಾರಿಗಿಡದ, ಹಾಸಿಮ ನಾಶಿಪುಡಿ ಉಪಸ್ಥಿತರಿದ್ದರು. ಮದುವೆಯ ಕಾರ್ಯಕ್ರಮವನ್ನು ವೇ ಮೂ ನಿತ್ಯಾನಂದ ಹಿರೇಮಠ ನಡೆಯಿಸಿ ಕೂಟ್ಟರು.

loading...

LEAVE A REPLY

Please enter your comment!
Please enter your name here