ಯಶಸ್ವಿಯಾಗಿ ಪೂರ್ಣಗೊಂಡ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ

0
54

ದಾಂಡೇಲಿ : ಜೊಯಿಡಾದ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದ ಉಚಿತ ಕಣ್ಣಿನ ಮೋತಿ ಬಿಂದು ತಪಾಸಣೆ ಶಿಬಿರದಲ್ಲಿ 65 ಕಣ್ಣಿನ ಶಿಬಿರಾರ್ಥಿಗಳ ಕಣ್ಣಿನ ತಪಾಸಣೆಯನ್ನು ಜರುಗಿಸಲಾಯಿತು. 11 ಮೋತಿ ಬಿಂದು ಹೊಂದಿದ ಶಿಬಿರಾರ್ಥಿಗಳನ್ನು ಉಚಿತ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಡಾ. ಎಂ.ಎಂ ಜೋಶಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಶಿಬಿರವನ್ನು ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಡಾ. ಸಿಂಚನಾ ಉದ್ಘಾಟಿಸಿ ಅತ್ಯಂತ ಹಿಂದುಳಿದ ಜೊಯಿಡಾ ತಾಲೂಕಿನಂತಹ ಪ್ರದೇಶದಲ್ಲಿ ಬಡವರಿಗಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿದ ಸಂಘಟಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಬಿಕಾನಗರ-ದಾಂಡೇಲಿ ಲಯನ್ಸ್ ಕ್ಲಬ್ ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಕಾರವಾರದ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಶಿಬಿರದಲ್ಲಿ ಎಂ.ಎಂ. ಜೋಶಿ ಆಸ್ಪತ್ರೆಯ ಸಿಬ್ಬಂದಿಗಳಾದ ಸಂಜು ಕುಲಕರ್ಣಿ, ವಿಲಿಯಮ್ ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ಸಂಗಪ್ಪ ಗಾಬಿ, ಲಯನ್ಸ್ ಕ್ಲಬ್‍ನ ಯು.ಎಸ್. ಪಾಟೀಲ, ವಿ.ಪಿ ಜೋಶಿ, ಸಮಾಜ ಸೇವಕ ಉಮೇಶ ಸಾವಳಗಿಮಠ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here