ಸಿದ್ದಾಪುರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಗರಾಜ ಮಾಳ್ಕೋಡ

0
62

ಸಿದ್ದಾಪುರ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಮೂರು ವರ್ಷದ ಅವಧಿಗೆ ನೂತನ ಅಧ್ಯಕ್ಷರನ್ನಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ, ಪತ್ರಕರ್ತ ನಾಗರಾಜ ನಾಯ್ಕ ಮಾಳ್ಕೋಡರನ್ನು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ನೇಮಕ ಮಾಡಿದ್ದಾರೆ.
ಈ ಹಿಂದೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ನಾಗರಾಜ ನಾಯ್ಕ ಮಾಳ್ಕೋಡ ಆಧಾರ ಶಿಕ್ಷಣ, ಸ್ವ-ಉದ್ಯೋಗ ಹಾಗೂ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷರಾಗಿದ್ದು, ತಾಲೂಕಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಆಧಾರ ಟ್ರೈನಿಂಗ್ ಎಂಡ್ ಡವೆಲೆಫ್‍ಮೆಂಟ (ರಿ.,) ವ್ಯವಸ್ಥಾಪಕ ನಿರ್ದೇಶಕರಾಗಿ, ಹಣತೆ ತಾಲೂಕಾ ಘಟಕದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇಡ್ಕಣಿಯಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿ, 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು.
ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಕ್ರೀಯಾಶೀಲ ವ್ಯಕ್ತಿತ್ವದ ಸಂಘಟಕ ನಾಗರಾಜ ನಾಯ್ಕ ಮಾಳ್ಕೋಡರವರನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಹಿರಿಯ ಸಾಹಿತಿಗಳಾದ ಡಾ|| ಆರ್.ಪಿ.ಹೆಗಡೆ ಸುಳಗಾರ, ಸುಬ್ರಾಯ ಮತ್ತಿಹಳ್ಳಿ, ಆರ್.ಕೆ.ಹೊನ್ನೆಗುಂಡಿ, ಟಿ.ಎಂ.ಎಸ್. ಅಧ್ಯಕ್ಷರಾದ ಅರ್.ಎಂ.ಹೆಗಡೆ ಬಾಳೇಸರ, ಲಯನ್ಸ ಮಾಜಿ ಡಿಸ್ಟ್ರೀಕ್ಟ್ ಗವರ್ನರ ರವಿ ಹೆಗಡೆ ಹೂವಿನಮನೆ, ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ ಗೌಡರ್ ಹೆಗ್ಗೋಡಮನೆ, ಶಿವಾನಂದ ಹೊನ್ನೆಗುಂಡಿ, ಶಂಕರ ಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ, ಪ್ರಶಾಂತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ಜಿ.ಪೈ ಮಂಜೈನ್, ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಸಿ.ಎನ್.ನಾಯ್ಕ,ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ನಾಯ್ಕ ಕಡಕೇರಿ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಸಂಸ್ಥಾಪಕ ಅಧ್ಯಕ್ಷರಾದ ಎಂ.ಟಿ.ಕೊಡಿಯಾ, ತಾಲೂಕಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರುಗಳಾದ ಜಿ.ಜಿ.ಹೆಗಡೆ ಬಾಳಗೋಡ,ಕೆಕ್ಕಾರ್ ನಾಗರಾಜ ಭಟ್À, ಎಂ.ಕೆ.ನಾಯ್ಕ ಹೊಸಳ್ಳಿ, ಕನ್ನೇಶ ಕೋಲಸಿರ್ಸಿ, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹಾರ್ಸಿಮನೆ, ಕಾರ್ಯದರ್ಶಿ ಗಣೇಶ ಭಟ್, ಮೊದಲಾದವರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here