ದೇವಾಲಯ ಧರ್ಮ,ಸಂಸ್ಕøತಿ ಉಳಿಸುವ ಕೇಂದ್ರವಾಗಿದೆ: ಶಿವಾಚಾರ್ಯ ಸ್ವಾಮೀಜಿ

0
61

ಸಿದ್ದಾಪುರ : ಧರ್ಮ,ಸಂಸ್ಕøತಿಗಳು ನಮ್ಮ ಪರಂಪರೆಯಾಗಿದ್ದು ದೇವಾಲಯಗಳು ಅದನ್ನು ಉಳಿಸುವ ಕೇಂದ್ರವಾಗಿದೆ ಇಂತಹ ದೇವಾಲಯಗಳ ನಿರ್ಮಾಣಕ್ಕೆ ಸಮಾಜ ಮುಂದಾಗಬೇಕು ಎಂದು ಸೊರಬ ಶಾಂತಪುರ ಸಂಸ್ಥಾನಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಇತ್ತೀಚೆಗೆ ತಾಲೂಕಿನ ಹಲಗೇರಿ ಹುಸೂರನ ಶ್ರೀ ಶನೇಶ್ವರ ದೇವಾಲಯದ ನೂತನ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ನಡೆದ ಧರ್ಮಸಭೆಯ ದಿವ್ಯಸಾನಿಧ್ಯವಹಿಸಿ ಮಾತನಾಡುತ್ತಿದ್ದರು.
ದೇವಾಲಯಗಳು ಭಕ್ತಿ ಕೇಂದ್ರವಾಗಿದೆ ಇಲ್ಲಿ ಇತರ ಆಕರ್ಷಣೆಗಳು ಕಡಿಮೆಯಾಗಬೇಕು ಧರ್ಮ,ಸಂಸ್ಕøತಿಗಳನ್ನು ಉಳಿಸುವ ಕೇಂದ್ರವಾಗಬೇಕು ಬಡವ,ಬಲ್ಲಿದ,ಮೇಲು,ಕೀಳು ಎಂಬ ಭಾವನೆಗಳು ದೇವಸ್ಥಾನದಲ್ಲಿ ಇರಬಾರದು ಇಲ್ಲಿ ಆಸ್ತಿ,ಅಂತಸ್ತು ಪ್ರದಾನವಾಗದೆ ಭಕ್ತಿ ಪ್ರದಾನವಾಗಬೇಕು ಎಂದು ಹೇಳಿದರು.
ಜಿಪಂ ಸದಸ್ಯೆ ಸುಮಂಗಲಾ ವಸಂತ ನಾಯ್ಕ ಮಾತನಾಡಿ,ಒಂದು ಊರಿನ ಅಭಿವೃದ್ಧಿಗೆ ಶಾಲೆ ಹಾಗೂ ದೇವಸ್ಥಾನಗಳು ಅವಶ್ಯಕವಾಗಿದ್ದು ಒಂದು ಜ್ಞಾನದ ಕೇಂದ್ರವಾದರೆ ಇನ್ನೊಂದು ಭಕ್ತಿಯ ಕೇಂದ್ರವಾಗಿದೆ ಇವೆರಡೂ ಇದ್ದರೆ ಸುಸಂಸ್ಕøತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಇನ್ನೋರ್ವ ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಮಾತನಾಡಿ, ಸಂಸ್ಕøತಿ,ಪರಂಪರೆಗಳ ಉಳಿಯುವಿಕೆಗೆ ದೇವಸ್ಥಾನದ ಅವಶ್ಯಕತೆಯಿದ್ದು ಹಿಂದುಳಿದ ಜನಾಂಗದವರಿಂದ ಇಂತಹ ಒಂದು ಪುಣ್ಯ ಕ್ಷೇತ್ರ ನಿರ್ಮಾಣವಾಗಿರುವುದು ಹೆಮ್ಮೆಯ ವಿಷಯ ಇದು ಭಕ್ತಿಯ,ಧಾರ್ಮಿಕತೆಯ ಕೇಂದ್ರವಾಗಿ ಬೆಳೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಹಲಗೇರಿ ಗ್ರಾಪಂ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶನೇಶ್ವರ ಟ್ರಸ್ಟ್‍ನ ಅಧ್ಯಕ್ಷ ಬಸಣ್ಣಿ ಚನ್ನಯ್ಯವಹಿಸಿದ್ದರು. ಹಲಗೇರಿ ಗ್ರಾಪಂ ಸದಸ್ಯ ಮಂಜುನಾಥ ನಾಯ್ಕ, ನೇತ್ರಾವತಿ ಚನ್ನಯ್ಯ ಬಸವರಾಜ ಗೌಡರ್ ಅರಣ್ಯ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ ಹುಸೂರು,ಸ್ಥಳೀಯ ಒಕ್ಕೂಟದ ಅಧ್ಯಕ್ಷ ಬಲೀಂದ್ರ ನಾಯ್ಕ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ನಾಗರಾಜ ಗೌಡರ್ ದೇವಸ್ಥಾನದ ಅರ್ಚಕ ಅಣ್ಣಪ್ಪ ಜಿ. ಮುಂತಾದವರು ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here