ಮೃತ ರೈತ ಕುಟುಂಬಕ್ಕೆ 25 ಸಾವಿರ ಪರಿಹಾರ

0
27

ರಾಮದುರ್ಗ 26: ಸಾಲದ ಬಾಧೆಯಿಂದ ಇತ್ತೀಚೆಗೆ ಆತ್ಮ ಹತ್ಯೆ ಮಾಡಿಕೊಂಡ ಮೃತ ಕುಟುಂಬಕ್ಕೆ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ವತಿಯಿಂದ 25 ಸಾವಿರ ಪರಿಹಾರ ಚಕ್‍ನ್ನು ಕಾರ್ಖಾನೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ವಿತರಣೆ ಮಾಡಿದರು.
ತಾಲೂಕಿನ ಸೊಪ್ಪಡ್ಲ ಗ್ರಾಮದ ರೈತ ಸಾಲದ ಬಾದೆಯಿಂದ ಆತ್ಮ ಹತ್ಯೆ ಮಾಡಿಕೊಂಡ ರೈತ ನಾಗಪ್ಪ ಭೀ. ಹಿರೇಕೊಪ್ಪ ಅವರ ಪತ್ನಿ ಶಾಂತವ್ವ ನಾ. ಹಿರೇಕೊಪ್ಪ ಕುಟುಂಬಕ್ಕೆ ವಿತರಿಸಿ ಮಾತನಾಡಿದ ಅವರು ಧನಲಕ್ಷ್ಮೀ ಕಾರ್ಖಾನೆಯಿಂದ ಪರಿಹಾರವನ್ನು ನೀಡಲಾಗುತ್ತಿದ್ದು ಕುಟುಂಬದವರು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿಕಳ್ಳಬೇಕು. ಹಾಗೂ ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಅವರಿಗೆ ಸುಂದರವಾದ ಬದುಕು ಕಟ್ಟಿಕೊಳ್ಳುವಂತೆ ಮಾಡಿ ನೆಮ್ಮದಿಯ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಸಂಘದ ಸಂಚಾಲಕ ಮಲ್ಲಿಕಾರ್ಜುನ ರಾಮದುರ್ಗ,ಶಿವಪ್ಪ ಪಡಿಜೋಳ,ಹೊಳಬಸಪ್ಪ ಹೊಸಮನಿ.ಕೃಷ್ಣಗೌಡ ಪಾಟೀಲ,ಯಲ್ಲಪ್ಪ ಕಟ್ಟಿಕಾರ, ಶಿವಪ್ಪ ಇಟ್ಟಪ್ಪನವರ, ಶಿವನಗೌಡ ಹೂಗಾರ,ಚುರ್ಚಪ್ಪ ಕೊಣ್ನೂರ, ಮಹಮ್ಮದಸಾಬ್ ದಾನಕಟಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು

loading...

LEAVE A REPLY

Please enter your comment!
Please enter your name here