ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ …

0
53

ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಧಾನ್ಯಗಳ ವ್ಯಾಪಾರಿಗಳು!
ಭರಮಗೌಡಾ ಪಾಟೀಲ
ಬೆಳಗಾವಿ 28: ಇಂದಿನ ಭೀಕರ ಬರಗಾಲದ ದಿನಗಳಲ್ಲಿ ಹಾಗೂ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಧಾನ್ಯಗಳ ಬೆಲೆಯಿಂದ ಜನ ಸಾಮಾನ್ಯರು ಬೇಸತ್ತು ಹೋಗಿರುವಾಗ ಜಿಲ್ಲೆಯಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಸರಕಾರದಿಂದ ಬರುವ ಆಹಾರ ಸಾಮಗ್ರಿಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವುದರೊಂದಿಗೆ ಲಕ್ಷಾಂತರ ರೂ ಹಣ ಗಳಿಸುತ್ತಿದ್ದಾರೆ.
ಅಂಗನವಾಡಿ ಕಾರ್ಯಕತೆರ್Àಯರು ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡು ಅಪೌಷ್ಠಿಕತೆಯನ್ನು ಹೋಗಲಾಡಿಸಲು ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಿಂದÀ ಪೌಷ್ಠಿಕ ಆಹಾರ ಪೂರೈಸಬೇಕು ಎಂಬ ಆದೇಶವಿದೆ. ಆದರೆ ಎಷ್ಟು ಪ್ರಮಾಣ ನೀಡಬೇಕು ಎಂಬುದನ್ನು ಸಾರ್ವಜನಿಕವಾಗಿ ಎಲ್ಲಿಯೂ ಸ್ಪಷ್ಟ ಮಾಹಿತಿ ಮತ್ತು ನಿರ್ದೇಶನ ಇಲ್ಲವಾದ್ದರಿಂದ ಇದನ್ನೆ ಬಂಡವಾಳ ಮಾಡಿಕೊಂಡು ಒಂದೆರಡು ಕೆಜಿಯಷ್ಟು ಅವ್ಯವಹಾರ ನಡೆಸದೆ, ಕ್ವಿಂಟಾಲ್‍ಗಟ್ಟಲೆ ಗೊಲ್‍ಮಾಲ್ ಮಾಡುತ್ತಿದ್ದಾರೆ.
6 ತಿಂಗಳ ಮಗುವಿಗೆ ಪ್ರತಿ ತಿಂಗಳು ತಾಯಿ ಹಾಗೂ ಮಗುವಿನ ಪೌಷ್ಠಿಕ ಆಹಾರಗಳಾದ ಹಾಲಿನ ಪೌಡರ್, ಬೆಲ್ಲ, ಅಕ್ಕಿ, ಗೋಧಿ, ಹೆಸರುಕಾಳು ಅಥವಾ ಕಡ್ಲೆಕಾಳು ವಿತರಣೆಯನ್ನು ಸರಕಾರ ಅಂಗನವಾಡಿಗಳಿಂದ ಮಾಡುತ್ತಿದೆÉ. ಆದರೆ ಅಂಗನವಾಡಿ ಕೇಂದ್ರಗಳು ನೀಡುವ ಪಲಾನುಭವಿಗಳ ಅಂಕಿ ಸಂಖ್ಯೆಗಳ ಲೆಕ್ಕದ ಆಧಾರದ ಮೇಲೆ ಪ್ರತಿ ತಿಂಗಳು ಆಹಾರ ಧಾನ್ಯಗಳು ವಿತರಣೆಯಾಗುತ್ತಿವೆ. ಗರ್ಭಿಣಿ ಮಹಿಳೆಯರ ಮನೆಗಳಿಗೆ ತೆರಳಿ ಆಹಾರ ಧಾನ್ಯ ವಿತರಿಸಬೇಕು ಎಂಬ ಸರಕಾರದ ನಿಯಮವಿದ್ದರೂ ಅಂಗನವಾಡಿ ಕೇಂದ್ರಗಳ ಕಾರ್ಯಕತೆರ್Àಯರು ಮೂರು ತಿಂಗಳಿಗೊಮ್ಮೆ ತಮ್ಮ ಮನೆಗಳಿಂದ ಫಲಾನುಭವಿಗಳಿಗೆ ಧಾನ್ಯಗಳನ್ನು ವಿತರಣೆ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು ಪಿ.ಕೆ ಗ್ರಾಮದಲ್ಲಿ ಛಾಯಾ ದೊಡಮನಿ ಎಂಬ ಅಂಗನವಾಡಿ ಕಾರ್ಯಕರ್ತೆ ಹಲವು ದಿನಗಳಿಂದ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ವಿತರಿಸುವ ಆಹಾರ ಸಾಮಾಗ್ರಿಗಳನ್ನು ಸರಿಯಾಗಿ ವಿತರಣೆ ಮಾಡುತ್ತಿರಲಿಲ್ಲ, ಆಹಾರ ಸಾಮಗ್ರಿಗಳನ್ನು ಬೇರೆ ಕಡೆಗೆ ಸಾಗಾಟ ಮಾಡುತ್ತಿದ್ದಾರೆನ್ನುವ ಅರೋಪ ಅವರ ಮೇಲಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಕಳೆದ ಎರಡು ದಿನಗಳಿಂದೆ ಮಕ್ಕಳಿಗೆ ವಿತರಿಸಬೇಕಾದ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ಬೇರೆ ಕಡೆಗೆ ಸಾಗಿಸಲು ದಾಸ್ತಾನು ಮಾಡಿದ ಮನೆಯ ಮೇಲೆ ಅಂಗನವಾಡಿ ಮೇಲ್ವಿಚಾರಕರೊಂದಿಗೆ ದಾಳಿ ನಡೆಸಿ ಆಹಾರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡಿರುವ ಆಹಾರ ಸಾಮಗ್ರಿಗಳ ಲೆಕ್ಕಾಚಾರ ಹಾಕಿದರೆ ಅದು ಲಕ್ಷ ರೂ ಮೀರುತ್ತದೆ ಎಂದರೆ ಅಶ್ಚರ್ಯ ಪಡಬೇಕಿಲ್ಲ, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದತೆ ಸರಕಾರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿತರಿಸುವ ಆಹಾರ ಸಾಮಗ್ರಿಗಳನ್ನು ಸರಿಯಾಗಿ ವಿತರಣೆ ಮಾಡದೆ ಅಂಗನವಾಡಿ ಕಾರ್ಯಕರ್ತೆಯರು ಹಣ ಮಾಡುವ ಕಾಯಕ ನಿಜಕ್ಕೂ ನಾಚಿಗ್ಗೇಡಿ ಸಂಗತಿಯಾಗಿದೆ.
ಒಟ್ಟಾರೆ ಇದು ಕೇವಲ ಒಂದು ಗ್ರಾಮದ ಅಂಗನವಾಡಿ ಕೇಂದ್ರದ ಹಗರಣವಲ್ಲ, ರಾಜ್ಯದ ಹಗರಣವೆಂದರೆ ತಪ್ಪಾಗಲಾರದು. ಅಂಗನವಾಡಿ ಕಾರ್ಯಕರ್ತೆಯರು ತಾಯಿ ಮತ್ತು ಮಕ್ಕಳ, ಗರ್ಭಿಣಿಯರ ಹಿತ ಕಾಪಾಡದೆ ಧಾನ್ಯದ ವ್ಯಾಪರಿಗಳಾಗುತ್ತಿರುವುದು ವ್ಯವಸ್ಥೆಗಳ ದುರಂತವಾಗಿದೆ. ಕೆಳಗಿನಿಂದ ಮೇಲಿನ ವರೆಗೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಕೆಲ ಬ್ರಷ್ಟ ಸಿಡಿಪಿಓಗಳು ಹಾಗೂ ಮೇಲ್ವಿಚಾರಕರು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಶಾಮೀಲಾಗಿ ವ್ಯವಸ್ಥೆಯನ್ನು ಹಾಳುಗೆಡಗುತ್ತಿರುವುದು ದುರಾದುಷ್ಟ.
==
ಕಳುವಿನ ಧಾನ್ಯಗಳು : 2.75 ಕ್ವಿಂಟಾಲ್ ಹೆಸರು ಕಾಳು, 1.50 ಕ್ವಿಂಟಾಲ್ ಗೋದಿ, 1.50 ಕ್ವಿಂಟಾಲ್ ಅಕ್ಕಿ, 1 ಕ್ವಿಂಟಾಲ್ ಕಡಲೆ, 30ಕೆಜಿ ಸಕ್ಕರೆ, 1.20 ಕ್ವಿಂಟಾಲ್ ಬೆಲ್ಲ, 15 ಕೆಜಿ ಮಸಾಲೆ, 14 ಕೆಜಿ ತೋಗರಿ ಬೆಳೆ, 30 ಕೆಜಿ ಶೇಂಗಾ, 1.25 ಕ್ವಿಂಟಾಲ್ ಗೋದಿ ಮತ್ತು ಅಕ್ಕಿ ಮಿಶ್ರಿತ ಕಾಳು ವಶಪಡಿಸಿಕೊಳ್ಳಲಾಗಿದೆ.
==
ಇಂದಿನ ಮಾರುಕಟ್ಟೆಯಲ್ಲಿ ಧಾನ್ಯಗಳ ಬೆಲೆ: ಹೆಸರು ಕಾಳು ಪ್ರತಿ ಕೆಜಿಗೆ 100 ರಿಂದ 105, ತೋಗರಿ ಬೆಳೆ ಪ್ರತಿ ಕೆಜಿಗೆ 140 ರಿಂದ 150, ಬೆಲ್ಲ ಪ್ರತಿ ಕೆಜಿಗೆ 42 ರಿಂದ 44, ಸಕ್ಕರೆ ಪ್ರತಿ ಕೆಜಿಗೆ 38 ರಿಂದ 39, ಕಡಲೆ ಪ್ರತಿ ಕೆಜಿಗೆ 82 ರಿಂದ 84 ಅಕ್ಕಿ ಪ್ರತಿ ಕೆಜಿಗೆ 40 ರಿಂದ 45, ಶೇಂಗಾ ಕಾಳು ಪ್ರತಿ ಕೆಜಿಗೆ 105ರಿಂದ 110.
==
ಇಲಾಖೆಯ ಹಲವಾರು ಜವಾಬ್ದಾರಿಗಳಿಗಿಂತ ಹೆಚ್ಚಾಗಿ ಅಂಗನವಾಡಿ ಕೇಂದ್ರಗಳ ಮೇಲೆ ನಿಗಾ ಇರಿಸಿದ್ದೇವೆ. ಪ್ರತಿ ತಿಂಗಳ ಸಭೆಯಲ್ಲಿ ಸಿಡಿಪಿಓ ಮತ್ತು ಮೇಲ್ವಿಚಾರಕರ ಸಭೆಯಲ್ಲಿ ಕಟ್ಟು ನಿಟ್ಟಾಗಿ ಸೂಚನೆ ನೀಡಿರುತ್ತೇವೆ. ಆದರೂ ಅಂಗನವಾಡಿ ಕೇಂದ್ರಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಇನ್ನಷ್ಟು ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಅವ್ಯವಹಾರ ಮತ್ತು ಶಾಮೀಲಾಗಿರುವ ಸಹ ಅಧಿಕಾರಿಗಳ ಹೆಸರನ್ನೊಳಗೊಂಡು ಲಿಖಿತ ರೂಪದಲ್ಲಿ ದೂರು ನೀಡಿದರೆ ಶೀಸ್ತು ಕ್ರಮ ಜರುಗಿಸಲಾಗುವುದು.
ವಂಟಮೂರಿ
ಉಪನಿರ್ದೇಶಕರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

loading...

LEAVE A REPLY

Please enter your comment!
Please enter your name here